ಮೈಸೂರು ಪ್ರದೇಶದ ಪ್ರಮುಖ ಬೆಳೆ ತಂಬಾಕು: ಬೆಳೆಗಾರರ ಪರವಾನಗಿ ನವೀಕರಿಸಿ, ಉತ್ತೇಜಿಸಿ
ಮೈಸೂರು

ಮೈಸೂರು ಪ್ರದೇಶದ ಪ್ರಮುಖ ಬೆಳೆ ತಂಬಾಕು: ಬೆಳೆಗಾರರ ಪರವಾನಗಿ ನವೀಕರಿಸಿ, ಉತ್ತೇಜಿಸಿ

February 3, 2022

ಮೈಸೂರು,ಫೆ.2(ಆರ್‍ಕೆಬಿ)- ಮೈಸೂರು ಪ್ರದೇಶದ ಪ್ರಮುಖ ಬೆಳೆಯಾದ ತಂಬಾಕು ಬೆಳೆಯುವ ರೈತರ ಪರವಾನಗಿ ನವೀಕರಿಸಿ, ಉತ್ತೇಜಿಸುವಂತೆ ಮೈಸೂರು-ಕೊಡಗು ಸಂಸದ ಪ್ರತಾಪ್‍ಸಿಂಹ ನವದೆಹಲಿಯಲ್ಲಿ ಕೇಂದ್ರ ಸರ್ಕಾರದ ವಾಣಿಜ್ಯ ಕಾರ್ಯ ದರ್ಶಿ ಬಿ.ವಿ.ಆರ್.ಸುಬ್ರಹ್ಮಣ್ಯಂ ಅವ ರನ್ನು ಭೇಟಿ ಮಾಡಿ, ಗಮನ ಸೆಳೆದಿದ್ದಾರೆ.

ಈ ಸಂಬಂಧ ಅವರಿಗೆ ಮನವಿ ಸಲ್ಲಿ ಸಿದ ಅವರು, ನನ್ನ ಕ್ಷೇತ್ರದಲ್ಲಿ (ಮೈಸೂರು ಪ್ರದೇಶ) ಎಫ್‍ಸಿವಿ ತಂಬಾಕು ಪ್ರಮುಖ ವಾಣಿಜ್ಯ ಬೆಳೆಯಾಗಿದೆ. ಸಣ್ಣ ಮತ್ತು ಅತೀ ಕಡಿಮೆ ಮತ್ತು ಮಳೆಯಾಶ್ರಿತವಾಗಿ ತಂಬಾಕು ಬೆಳೆಯುವ ರೈತರು ಜೀವನೋಪಾಯಕ್ಕೆ ತಂಬಾಕು ಬೆಳೆಯನ್ನೇ ಅವಲಂಬಿಸಿ ದ್ದಾರೆ. ಪರವಾನಗಿ ನವೀಕರಣ ಮಾಡದ ಕಾರಣ 4000ಕ್ಕೂ ಹೆಚ್ಚು ಕೊಟ್ಟಿಗೆಗಳ ಪರವಾನಗಿ ಇಲ್ಲದಂತಾಗಿದೆ. ಕೌಟುಂಬಿಕ ವಿಭಜನೆ, ಕುಟುಂಬದ ಮುಖ್ಯಸ್ಥರು ಮತ್ತು ಸದಸ್ಯರ ಸಾವು, ನವೀಕರಣ ಪ್ರಕ್ರಿಯೆಯಲ್ಲಿ ಅಗತ್ಯ ದಾಖಲೆಗಳ ಅಲಭ್ಯತೆ ಮತ್ತು ಸಾಲದ ಬಲೆಯಲ್ಲಿ ಸಿಲುಕಿದ್ದ ಕಾರಣ ಪರವಾನಗಿ ವಿಳಂಬಕ್ಕೆ ಕಾರಣವಾಗಿದೆ. ಹಲವಾರು ವರ್ಷಗಳಿಂದ ಎಫ್‍ಸಿವಿ ತಂಬಾಕು ಉತ್ಪಾದಿ ಸುವ ಮತ್ತು ತಂಬಾಕು ಮಂಡಳಿಯಲ್ಲಿ ಮಾರಾಟ ಮಾಡುತ್ತಿರುವ 10,900 ಅನಧಿ ಕೃತ ಬೆಳೆಗಾರರಿದ್ದಾರೆ. ಈ ರೈತರಿಗೆ ಪರವಾ ನಗಿ ಮಂಜೂರು ಮಾಡುವ ಮೂಲಕ ಕ್ರಮಬದ್ಧಗೊಳಿಸಬೇಕಿದೆ. ಇದರ ಮೂಲಕ ರೈತರ ನೈತಿಕ ಸ್ಥೈರ್ಯ ಹೆಚ್ಚಿಸಬೇಕಿದೆ. ಇದರಿಂದ ಕೃತಿ ಮತ್ತು ಉತ್ಪಾದನೆಗೆ ರೈತ ರನ್ನು ಮತ್ತಷ್ಟು ಪ್ರೇರೇಪಿಸಬೇಕಾಗಿದೆ. ಅಲ್ಲದೆ ರಫ್ತು ಆಧಾರಿತ ಬೆಳೆಯಾದ ಮೈಸೂರು ಎಫ್‍ಸಿವಿ ತಂಬಾಕು ಸರ್ಕಾರದ ಬೊಕ್ಕ ಸಕ್ಕೂ ಲಾಭ ತರಲಿದೆ. ಹಾಗಾಗಿ ಅನಧಿ ಕೃತ ಬೆಳೆಗಾರರಿಗೆ ಪರವಾನಗಿ ನೀಡುವ ಮೂಲಕ ರಫ್ತು ಉತ್ತೇಜಿಸುವುದು ಅಗತ್ಯ ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ಈ ಬೆಳೆಗಾರರಿಗೆ ಪರವಾನಗಿ ನೀಡುವ ಮೂಲಕ ರಫ್ತು ಉತ್ತೇಜನಕ್ಕೆ ಸಹಕಾರಿ ಯಾಗಬೇಕಿದೆ. ಹಾಗಾಗಿ ಮುಂದಿನ ದಿನ ಗಳಲ್ಲಿ ಪರವಾನಗಿ ನವೀಕರಿಸುವ ಮೂಲಕ ಈ ಬೆಳೆಗಾರರನ್ನು ಸಕ್ರಮಗೊಳಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಸಂಬಂಧ ಪಟ್ಟವರಿಗೆ ನಿರ್ದೇಶನ ನೀಡುವಂತೆ ಪ್ರತಾಪ್‍ಸಿಂಹ ಮನವಿ ಮಾಡಿದರು.

Translate »