ಫೆ.7ರಂದು `ಮೈಸೂರು ಬಂದ್’ಗೆ ನಿರ್ಧಾರ
ಮೈಸೂರು

ಫೆ.7ರಂದು `ಮೈಸೂರು ಬಂದ್’ಗೆ ನಿರ್ಧಾರ

February 3, 2022

ಮೈಸೂರು, ಫೆ.2(ಆರ್‍ಕೆಬಿ)- ಸಂವಿಧಾನ ದಿನಾಚರಣೆ ಯಂದು ರಾಯಚೂರಿನಲ್ಲಿ ಜಿಲ್ಲಾ ನ್ಯಾಯಾಧೀಶರಿಂದ ಸಂವಿಧಾನ ಅಪಚಾರಕ್ಕೆ ಸಂಬಂಧಿಸಿದಂತೆ ಸರ್ಕಾರದ ಧೋರಣೆಯನ್ನು ಖಂಡಿಸಿ, ನ್ಯಾಯಾಧೀಶ ಮಲ್ಲಿ ಕಾರ್ಜುನಗೌಡ ಅವರನ್ನು ಸೇವೆಯಿಂದ ವಜಾ ಗೊಳಿಸುವಂತೆ ಆಗ್ರಹಿಸಿ ಫೆ.7ರಂದು `ಮೈಸೂರು ಬಂದ್’ಗೆ ಸಂವಿಧಾನ ಸಂರಕ್ಷಣಾ ಸಮಿತಿ ನಿರ್ಧರಿಸಿದೆ.

ಸಂವಿಧಾನ ಸಂರಕ್ಷಣಾ ಸಮಿತಿ ಆಶ್ರಯದಲ್ಲಿ ವಿವಿಧ ಸಂಘಟನೆಗಳ ಮುಖಂಡರು ಜಲದರ್ಶಿನಿ ಅತಿಥಿಗೃಹ ದಲ್ಲಿ ಸಭೆ ನಡೆಸಿ, ಘಟನೆ ನಡೆದು 8 ದಿನ ಕಳೆದರೂ ಸರ್ಕಾರ ಈ ಘಟನೆ ಸಂಬಂಧ ಯಾವುದೇ ಕ್ರಮ ಕೈಗೊಳ್ಳ ದಿರುವ ಬಗ್ಗೆ ಖಂಡನಾ ನಿರ್ಣಯ ಕೈಗೊಂಡರು. ಡಾ. ಅಂಬೇಡ್ಕರ್‍ರಿಗೆ ಅಗೌರವ ತೋರಿದ ನ್ಯಾಯಾಧೀಶರ ವಿರುದ್ಧ ಕ್ರಮ ಕೈಗೊಳ್ಳಲು ನಿರ್ಲಕ್ಷಿಸುವ ಮೂಲಕ ಸರ್ಕಾರವೂ ಅಂಬೇಡ್ಕರ್‍ರನ್ನು ಅಗೌರವಿಸುತ್ತಿದೆ ಎಂದು ಆರೋಪಿಸಿದರು.
ಘಟನೆ ಬಗ್ಗೆ ಯಾವುದೇ ಕ್ರಮ ಕೈಗೊಳ್ಳುವಲ್ಲಿ ವಿಫಲ ವಾಗಿರುವ ಸರ್ಕಾರದ ಧೋರಣೆ ಖಂಡಿಸಿ, ಡಾ.ಅಂಬೇ ಡ್ಕರ್ ಅವರನ್ನು ಅಗೌರವಿಸಿದ ನ್ಯಾಯಾಧೀಶರನ್ನು ವಜಾ ಮಾಡಬೇಕು ಎಂದು ಆಗ್ರಹಿಸಿ, ಬಂದ್‍ಗೆ ಕರೆ ನೀಡಲು ಸಭೆಯಲ್ಲಿ ನಿರ್ಧರಿಸಲಾಯಿತು ಎಂದು ರಾಜ್ಯ ಹಿಂದು ಳಿದ ವರ್ಗಗಳ ಜಾಗೃತ ವೇದಿಕೆ ರಾಜ್ಯಾಧ್ಯಕ್ಷ ಕೆ.ಎಸ್. ಶಿವರಾಮು ತಿಳಿಸಿದ್ದಾರೆ.

ಸಂವಿಧಾನ ರಕ್ಷಣಾ ಸಮಿತಿಯ ಅಧ್ಯಕ್ಷ ಎನ್.ಭಾಸ್ಕರ್, ಮೈಸೂರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಬಿ.ಜೆ.ವಿಜಯ ಕುಮಾರ್, ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಅಧ್ಯಕ್ಷ ಕೆ.ಎಸ್.ಶಿವರಾಮು, ನಾಯಕರ ಹಿತ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ದ್ಯಾವಪ್ಪ ನಾಯಕ, ಜಿಲ್ಲಾ ಸವಿತಾ ಸಮಾಜದ ಅಧ್ಯಕ್ಷ ಎನ್.ಆರ್.ನಾಗೇಶ್, ನಿವೃತ್ತ ಪ್ರಾಧ್ಯಾಪಕ ಪ್ರೊ.ಮಹೇಶ್, ನೆಲೆ ಹಿನ್ನೆಲೆಯ ಕೆ.ಆರ್. ಗೋಪಾಲಕೃಷ್ಣ, ದಲಿತ ವೆಲ್‍ಫೇರ್ ಟ್ರಸ್ಟ್ ಅಧ್ಯಕ್ಷ ಶಾಂತರಾಜು, ಎಸ್‍ಸಿ-ಎಸ್‍ಟಿ ವಕೀಲರ ಸಂಘದ ಅಧ್ಯಕ್ಷ ತಿಮ್ಮಯ್ಯ, ಎ.ಆರ್.ಕಾಂತರಾಜು, ಚೋರನಹಳ್ಳಿ ಶಿವಣ್ಣ, ದಲಿತ ಸಂಘರ್ಷ ಸಮಿತಿಯ ಶಂಭುಲಿಂಗಸ್ವಾಮಿ, ಕಾಂಗ್ರೆಸ್ ನಗರಾಧ್ಯಕ್ಷ ಆರ್.ಮೂರ್ತಿ, ಡಾ.ವೆಂಕಟೇಶ್ ಮೂರ್ತಿ, ಮುಖಂಡರಾದ ಲೋಕೇಶ್‍ಕುಮಾರ್ ಮಾದಾ ಪುರ, ಸಂಬಯ್ಯ, ಎಡತಲೆ ಮಂಜುನಾಥ್, ರವಿಚಂದ್ರ, ಛಲವಾದಿ ಮಹಾಸಭಾ ಅಧ್ಯಕ್ಷ ಹಂಸರಾಜ್, ಮಲ್ಲಿ ಕಾರ್ಜುನ ಖರ್ಗೆ ಅಭಿಮಾನಿಗಳ ಸಂಘದ ಅಧ್ಯಕ್ಷ ನರೇಂದ್ರ, ಜಿಪಂ ಮಾಜಿ ಸದಸ್ಯ ತಲಕಾಡು ಮಂಜುನಾಥ್ ಇನ್ನಿತರರು ಸಭೆಯಲ್ಲಿ ಉಪಸ್ಥಿತರಿದ್ದರು.

Translate »