ಮೈಸೂರು, ಆ.17(ಎಂಟಿವೈ)- ಭಾರತೀಯ ಸಾಂಸ್ಕೃತಿಕ ವಿಕಾಸ ವೇದಿಕೆ 20ನೇ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ಮೈಸೂರಿನ 42 ವಾರ್ಡ್‍ಗಳಲ್ಲಿ ಆ.24ರಿಂದ 28ರವರೆಗೆ ರೋಗ ನಿರೋಧಕ ಶಕ್ತಿ ವೃದ್ಧಿಸುವ ಭಾರತೀಯ ಪರಂಪರೆ ಆಹಾರ ಪದಾರ್ಥಗಳ ಬಳಕೆಗೆ, ಕೊರೊನಾ ತಡೆಗಟ್ಟುವ ಕುರಿತಂತೆ ಜಾಗೃತಿ ಮೂಡಿಸುವ ಕಾರ್ಯ ಕ್ರಮ ರೂಪಿಸಲಾಗಿದೆ ಎಂದು ಅಖಿಲ ಕರ್ನಾಟಕ ಮಾದಾರ ಚನ್ನಯ್ಯ ವಿಚಾರ ವೇದಿಕೆ ರಾಜ್ಯಾಧ್ಯಕ್ಷ ಡಾ.ಎಸ್.ಈ.ಮಹದೇವಪ್ಪ ತಿಳಿಸಿದ್ದಾರೆ.
ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸೋಮ ವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾರ ತೀಯ ಸಾಂಸ್ಕೃತಿಕ ವಿಕಾಸ ವೇದಿಕೆ 20ನೇ ವಾರ್ಷಿಕೋ ತ್ಸವದ ಹಿನ್ನೆಲೆಯಲ್ಲಿ 125ನೇ ಕಾರ್ಯಕ್ರಮದ ವಿಶೇಷ ವಾಗಿ ಕೊರೊನಾ ಹರಡದಂತೆ ತಡೆಯಲು ಹಾಗೂ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಉದ್ದೇಶಿಸ ಲಾಗಿದೆ. ಇದಕ್ಕಾಗಿ ನಗರದ 42 ವಾರ್ಡ್‍ಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದ್ದು, ಅಖಿಲ ಕರ್ನಾಟಕ ಮಾದಾರ ಚನ್ನಯ್ಯ ವಿಚಾರ ವೇದಿಕೆ, ಲಯನ್ಸ್ ಕ್ಲಬ್ ಆಫ್ ಬೆಂಗ ಳೂರು ಸ್ಯಾಂಡಲ್‍ವುಡ್ ಸೆಲೆಬ್ರಿಟಿಸ್ ಸಂಸ್ಥೆ ಸಹಯೋಗ ದಲ್ಲಿ ಆ.24ರಿಂದ 28ರವರೆಗೆ ಕೊರೊನಾ ಜಾಗೃತಿ ಅಭಿ ಯಾನ ಆಯೋಜಿಸಿರುವುದಾಗಿ ತಿಳಿಸಿದರು.
ಆ.24ರಂದು ಬೆಳಿಗ್ಗೆ 9ಕ್ಕೆ 23ನೇ ವಾರ್ಡಿನ ಜಗನ್ಮೋಹನ ಅರಮನೆ ಮುಂಭಾಗದಲ್ಲಿ ಜನಜಾಗೃತಿ ಅಭಿಯಾನಕ್ಕೆ ಡಿಸಿಪಿ ಡಾ.ಎ.ಎನ್.ಪ್ರಕಾಶ್‍ಗೌಡ ಚಾಲನೆ ನೀಡಲಿದ್ದಾರೆ. ಮಾಜಿ ಸಚಿವ ಸಿ.ಹೆಚ್.ವಿಜಯಶಂಕರ್ ಕರಪತ್ರ ಬಿಡುಗಡೆ ಮಾಡು ವರು. ಬಿಜೆಪಿ ನಗರಾಧ್ಯಕ್ಷ ಶ್ರೀವತ್ಸ ಇನ್ನಿತರರು ಕಾರ್ಯ ಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಆ.25ರಂದು ಬೆಳಿಗ್ಗೆ 9ಕ್ಕೆ 4ನೇ ವಾರ್ಡಿನ ಬಸವಗುಡಿ ವೃತ್ತದ ಬಳಿ, ಆ.26ರಂದು 37ನೇ ವಾರ್ಡಿನ ಪುಟ್ಟಮ್ಮ ಮಲ್ಲಪ್ಪ ಛತ್ರದ ಬಳಿ, ಆ.27 ರಂದು 48ನೇ ವಾರ್ಡಿನ ಇಸ್ಕಾನ್ ದೇವಸ್ಥಾನದ ಸಮು ದಾಯ ಭವನ ಬಳಿ, ಆ.28ರಂದು 58ನೇ ವಾರ್ಡಿನ ಸಾಯಿಬಾಬಾ ದೇವಾಲಯ ಹಿಂಭಾಗದಲ್ಲಿ ಜಾಗೃತಿ ಅಭಿಯಾನ ಜರುಗಲಿದೆ ಎಂದು ವಿವರಿಸಿದರು.
ಆ.31ರಂದು ಮಧ್ಯಾಹ್ನ 3ಕ್ಕೆ ಜೆಎಲ್‍ಬಿ ರಸ್ತೆಯಲ್ಲಿರುವ ಆರಾಧ್ಯ ಮಹಾಸಭಾ ಭವನದಲ್ಲಿ ಕೊರೊನಾ ವೈರಾಣು ವಿನ ಪರಿಣಾಮಗಳು ಮತ್ತು ಮುಂದಿನ ಸವಾಲುಗಳು ಕುರಿತು ವಿಚಾರ ಸಂಕಿರಣ ನಡೆಯಲಿದ್ದು, ಶ್ರೀ ವಂಗೀಪುರ ನಂಬಿಮಠದ ಶ್ರೀ ಇಳೈ ಆಳ್ವಾರ್ ಸ್ವಾಮೀಜಿ, ಧರ್ಮಗುರು ಗಳಾದ ಉಸ್ಮಾನ್ ಷರೀಫ್, ರೆ. ಫಾದರ್ ಸ್ಟಾನಿ ಡಿ ಅಲ್ಮೆಡಾ ಭಾಗವಹಿಸಲಿದ್ದಾರೆ. ಇದೇ ವೇಳೆ ಲಾಕ್‍ಡೌನ್ ಸಂದÀರ್ಭ ದಲ್ಲಿ ಸಂತ್ರಸ್ತರಿಗೆ ನೆರವು ನೀಡಿದ ವಿವಿಧ ಧರ್ಮಗುರು ಗಳು, ಶಾಸಕರು, ಮಾಜಿ ಶಾಸಕರು, ವಿವಿಧ ಸಂಘ-ಸಂಸ್ಥೆಗಳ ಮುಖ್ಯಸ್ಥರಿಗೆ `ಕೊರೊನಾ ವಾರಿಯರ್ಸ್ ಸೇವಾ ಸಿಂಧು ಪ್ರಶಸ್ತಿ’ ನೀಡಿ ಗೌರವಿಸಲಾಗುತ್ತದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಭಾರತೀಯ ಸಾಂಸ್ಕೃತಿಕ ವಿಕಾಸ ವೇದಿಕೆಯ ಅಧ್ಯಕ್ಷ ತಗಡೂರು ಗೌರಿಶಂಕರ್, ನಗರ ಪಾಲಿಕೆ ಸದಸ್ಯರಾದ ಶೋಭಾ ಮೋಹನ್, ಪ್ರಮೀಳಾ ಭರತ್, ಅಶ್ವಿನಿ ಅನಂತು, ಶ್ರೀನಿವಾಸು, ಲಯನ್ಸ್ ಕ್ಲಬ್‍ನ ಡಾ.ಎಸ್.ವೆಂಕಟೇಶ್ ಉಪಸ್ಥಿತರಿದ್ದರು.