ಮನೆ ಮನೆಗೆ ತೆರಳಿ ಕೊರೊನಾ ಜಾಗೃತಿ
ಮೈಸೂರು

ಮನೆ ಮನೆಗೆ ತೆರಳಿ ಕೊರೊನಾ ಜಾಗೃತಿ

June 29, 2020

ಮೈಸೂರು, ಜೂ.28(ಎಸ್‍ಬಿಡಿ)- ಮೈಸೂರಲ್ಲಿ ಕೊರೊನಾ ಪ್ರಕರಣ ಹೆಚ್ಚುತ್ತಿ ರುವ ಹಿನ್ನೆಲೆಯಲ್ಲಿ ಮನೆ ಮನೆಗೆ ತೆರಳಿ ಜಾಗೃತಿ ಮೂಡಿಸುವುದರ ಜೊತೆಗೆ ರೋಗ ಲಕ್ಷಣಗಳಿರುವವರನ್ನು ವೈದ್ಯಕೀಯ ಪರೀ ಕ್ಷೆಗೆ ಒಳಪಡಿಸುವ ಕಾರ್ಯ ನಡೆಯುತ್ತಿದೆ.

ಆರೋಗ್ಯ ಇಲಾಖೆ ನಡೆಸುತ್ತಿರುವ ಈ ಸಮೀಕ್ಷೆಯಲ್ಲಿ ಜಿಲ್ಲೆಯಾದ್ಯಂತ 900 ತಂಡ ಗಳಲ್ಲಿ 2 ಸಾವಿರಕ್ಕೂ ಹೆಚ್ಚು ಆರೋಗ್ಯ ಕಾರ್ಯಕರ್ತರು ಸಕ್ರಿಯರಾಗಿದ್ದಾರೆ. ಮನೆ ಮನೆಗೆ ತೆರಳಿ ನೆಗಡಿ, ಕೆಮ್ಮು, ಜ್ವರ ಇದ್ದ ವರ ಮಾಹಿತಿ ಪಡೆದು ಅವರಿಗೆ `ವಿಷಮ ಶೀತ ಜ್ವರ(Iಟಿಜಿಟueಟಿzಚಿ- ಟiಞe iಟಟಟಿess- IಐI) ಪರೀಕ್ಷೆ ನಡೆಸಲಾಗುತ್ತಿದೆ. ಮೇ 22 ರಿಂದ ಈವರೆಗೆ 1,100 ಐಎಲ್‍ಐ ಪ್ರಕ ರಣಗಳ ಪರೀಕ್ಷೆ ನಡೆಸಿದ್ದು, ಇಬ್ಬರಲ್ಲಿ ಮಾತ್ರ ಕೊರೊನಾ ಸೋಂಕು ದೃಢಪಟ್ಟಿದೆ.

ಮೈಸೂರಿನಲ್ಲಿ ಕೊರೊನಾ ಪ್ರಕರಣ ಕಾಣಿಸಿಕೊಂಡ ಆರಂಭದ ದಿನಗಳಲ್ಲಿ ಹೊರ ಗಿನಿಂದ ಬಂದವರು, ಅವರ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಿತರಾಗಿ ಕ್ವಾರಂ ಟೈನ್‍ನಲ್ಲಿ ಇದ್ದವರಿಗೆ ಪರೀಕ್ಷೆ ನಡೆಸಲಾ ಗಿತ್ತು. ಹೀಗೆ ಮಾರ್ಚ್ ಹಾಗೂ ಏಪ್ರಿಲ್ ತಿಂಗಳಲ್ಲಿ 678 ಜನರಿಗೆ ಪರೀಕ್ಷೆ ಮಾಡಲಾ ಗಿತ್ತು. ನಂತರದಲ್ಲಿ ಲಾಕ್‍ಡೌನ್ ಸಡಿಲಿಕೆ ಯಿಂದ ಸಾಕಷ್ಟು ನಿರ್ಬಂಧ ತೆರವಾಗಿದ್ದ ರಿಂದ ಐಎಲ್‍ಐ ಸಮೀಕ್ಷೆ ಆರಂಭಿಸಲಾಯಿತು.

ಆರೋಗ್ಯ ಕಾರ್ಯಕರ್ತರು ಪ್ರತಿ ಮನೆಗೂ ಭೇಟಿ ನೀಡಿ, ಮನೆಯಲ್ಲಿ ಎಷ್ಟು ಜನರಿ ದ್ದಾರೆ?. 60 ವರ್ಷ ಮೇಲ್ಪಟ್ಟವರು, ಗರ್ಭಿಣಿ, ಬಾಣಂತಿ, ಪುಟ್ಟ ಮಕ್ಕಳಿದ್ದಾರಾ?. ಕ್ಯಾನ್ಸರ್, ಮಧುಮೇಹ, ಹೃದಯ ಸಂಬಂಧಿ ಕಾಯಿಲೆ, ಉಸಿರಾಟದ ಸಮಸ್ಯೆ, ಡಯಾಲಿಸಿಸ್, ಸ್ಟ್ರೋಕ್ ಹೀಗೆ ಆರೋಗ್ಯ ಸಮಸ್ಯೆಗಳಿರುವವರು ಯಾರಾದರೂ ಮನೆಯಲ್ಲಿದ್ದಾರಾ? ಎಂಬ ಮಾಹಿತಿ ಪಡೆದು, ಥರ್ಮಲ್ ಸ್ಕ್ರೀನಿಂಗ್ ಮಾಡಲಾಗುತ್ತಿದೆ. ಶೀತ, ಕೆಮ್ಮು, ಜ್ವರದಿಂದ ಬಳಲುತ್ತಿದ್ದರೆ ಅವರನ್ನು ನಿಗದಿತ ಆರೋಗ್ಯ ಕೇಂದ್ರಗಳಿಗೆ ಕರೆದೊಯ್ದು, ಗಂಟಲು ದ್ರವದ ಮಾದರಿ ಸಂಗ್ರಹಿಸಿ, ಕೋವಿಡ್ ಪ್ರಯೋ ಗಾಲಯಕ್ಕೆ ಕಳುಹಿಸಲಾಗುತ್ತದೆ. ಬಳಿಕ ವರದಿ ಬರುವವರೆಗೂ ಬೇರೆಯವರನ್ನು ಸಂಪರ್ಕಿಸದಂತೆ ಜಾಗೃತಿ ಮೂಡಿಸಲಾಗು ತ್ತಿದೆ. ಮೈಸೂರು ಜಿಲ್ಲಾಸ್ಪತ್ರೆ, ಕೆ.ಆರ್. ಆಸ್ಪತ್ರೆ, ಚೆಲುವಾಂಬ ಆಸ್ಪತ್ರೆ, ಚಾಮುಂಡಿ ಬೆಟ್ಟದ ರಸ್ತೆ ಕುರುಬಾರಹಳ್ಳಿ ವೃತ್ತದ ಬಳಿ, ರಾಜೇಂದ್ರನಗರ, ಬನ್ನಿಮಂಟಪದಲ್ಲಿರುವ ಆರೋಗ್ಯ ಕೇಂದ್ರ ಸೇರಿದಂತೆ ಎಲ್ಲಾ ತಾಲೂಕು ಆಸ್ಪತ್ರೆಗಳಲ್ಲೂ ಗಂಟಲು ದ್ರವ ಸಂಗ್ರಹಿ ಸುವ ಘಟಕಗಳು ಸಕ್ರಿಯವಾಗಿವೆ. ಶಾರದಾ ವಿಲಾಸ ಕಾಲೇಜು ಸಮೀಪದ ಮಕ್ಕಳ ಕೂಟ ಆರೋಗ್ಯ ಕೇಂದ್ರದಲ್ಲೂ ಸೋಮವಾರ ದಿಂದ ಸ್ವಾಬ್ ಸಂಗ್ರಹ ಕಾರ್ಯ ಆರಂಭ ವಾಗಲಿದೆ. ಶೀತ, ಕೆಮ್ಮು, ಜ್ವರವಿದ್ದವರು ನಿರ್ಲಕ್ಷಿಸದೆ ವೈದ್ಯಕೀಯ ಪರೀಕ್ಷೆ ಮಾಡಿಸಿ ಕೊಳ್ಳಬೇಕು ಎಂದು ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ. ಚಿದಂಬರ ತಿಳಿಸಿದ್ದಾರೆ.

ನಮ್ಮದೇ ಜವಾಬ್ದಾರಿ: `ನಮ್ಮ ಜೀವ ನಮ್ಮ ಜವಾಬ್ದಾರಿ’ ಘೋಷಣೆಯೊಂದಿಗೆ ಸರ್ಕಾರ, ಸಾರ್ವಜನಿಕರನ್ನು ಎಚ್ಚರಿಸು ತ್ತಿದೆ. ಆದರೆ ಸೋಂಕು ಹರಡುತ್ತಿರುವ ತೀವ್ರತೆ ಗಮನಿಸಿದರೆ ಘೋಷವಾಕ್ಯ `ನಿಮ್ಮ ಜೀವ ನಿಮ್ಮ ಜವಾಬ್ದಾರಿ’ ಎಂದು ಬದಲಾಗಲು ಹೆಚ್ಚು ಸಮಯ ಬೇಕಿಲ್ಲ ಎಂದೆನಿಸುತ್ತದೆ. ವೈದ್ಯರು, ಪ್ರಯೋಗಾಲಯ ಸಿಬ್ಬಂದಿ, ಪೊಲೀಸರು ಸೇರಿದಂತೆ ಕೊರೊನಾ ಕರ್ತವ್ಯನಿರತ ರಿಗೂ ಸೋಂಕು ಬಾಧಿಸುತ್ತಿದೆ. ಹೀಗೆಯೇ ಮುಂದುವರೆದರೆ ನಿರ್ವಹಣೆ ಕಷ್ಟಸಾಧ್ಯ ವಾಗಬಹುದು. ಹಾಗಾಗಿ ಪ್ರತಿಯೊಬ್ಬರೂ ಎಚ್ಚರಿಕೆಯಿಂದ ಇದ್ದರೆ ಮಾತ್ರ ಸೋಂಕಿ ನಿಂದ ರಕ್ಷಿಸಿಕೊಳ್ಳಬಹುದು. ಪ್ರಕರಣಗಳ ಸಂಖ್ಯೆ ತಿಳಿದು ಆತಂಕಗೊಳ್ಳದೆ ಕಡ್ಡಾಯ ವಾಗಿ ಸುರಕ್ಷತಾ ಕ್ರಮಗಳ ಅನುಸರಿಸಬೇಕಿದೆ

Translate »