ಮೈಸೂರು, ಜೂ.28(ಆರ್‍ಕೆಬಿ)- ನಾಲ್ಕು ದಶಕಗಳ ಕಾಲ ಪತ್ರಿಕಾರಂಗದಲ್ಲಿ ಸೇವೆ ಸಲ್ಲಿಸಿದ ಹಿರಿಯ ಪತ್ರಕರ್ತ ಹರೀಶ್ ಬಂದಗದ್ದೆ ಅವರು 60ನೇ ವಸಂತಕ್ಕೆ ಕಾಲಿ ಡುತ್ತಿರುವ ಸಂದರ್ಭದಲ್ಲಿ ‘ವಿಜಯವಾಣಿ’ ಪತ್ರಿಕಾ ಬಳಗದಿಂದ ಅಭಿನಂದಿಸಲಾಯಿತು.
ಮೈಸೂರಿನ ರಾಜೇಂದ್ರ ಕಲಾಭವನ ದಲ್ಲಿ ನಡೆದ `ಹರೀಶ 60 ಹರುಷ’ ಸಮಾ ರಂಭದಲ್ಲಿ ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಮಹೇಂದ್ರ ಅವರು ಹರೀಶ್ ಅವರನ್ನು ಗೌರವಿಸಿದರು.
ಮಾಜಿ ಸಚಿವ ಎಚ್.ವಿಶ್ವನಾಥ್ ಮಾತ ನಾಡಿ, ರಾಜಶೇಖರ ಕೋಟಿ ಅವರೊಂ ದಿಗೆ ಆಂದೋಲನ ಪತ್ರಿಕೆಯನ್ನು ಕಟ್ಟಿ ಬೆಳೆಸುವಲ್ಲಿ ಹರೀಶ್ ಸಹಪಾಠಿಯಾಗಿ ಸಾಥ್ ಕೊಟ್ಟಿದ್ದರು. ಇವರು ವರದಿಗಾರಿಕೆ ಯೊಂದಿಗೆ ಮೊಳೆ ಜೋಡಿಸಿ ಮುದ್ರಣ ಮಾಡಿದ ಬಳಿಕ ಪತ್ರಿಕೆಯನ್ನು ಸೈಕಲ್‍ನಲ್ಲಿ ತೆಗೆದುಕೊಂಡು ಹೋಗಿ ಹಂಚಿಕೆ ಮಾಡುತ್ತಿದ್ದರು. ಹೀಗಾಗಿ, ಆಂದೋಲನ ಪತ್ರಿಕೆ ಬೆಳೆಸುವಲ್ಲಿ ಹರೀಶ್‍ರ ಶ್ರಮವಿದೆ ಎಂದು ಹೇಳಿದರು.
ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡರು, ಯುವ ಪತ್ರಕರ್ತ ರಿಗೆ ರಾಜಕೀಯ ಜ್ಞಾನವಿಲ್ಲ. ಅದರ ಕುರಿತು ಅರಿವು ಕೂಡ ಇಲ್ಲ. ಈ ನಿಟ್ಟಿನಲ್ಲಿ ಅಧ್ಯಯನ ಮಾಡಿದರೆ ಅವರಿಗೆ, ಪತ್ರಿಕೆಗೂ ಗೌರವ ಬರಲಿದೆ ಎಂದರು. ಮಾಜಿ ಶಾಸಕ ವಾಸು, ರಾಜ್ಯ ಕಬ್ಬುಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್, ಮಾಜಿ ಮೇಯರ್ ನರಸಿಂಹ ಅಯ್ಯಂ ಗಾರ್, ನಾರಾಯಣ್, ಜಿಲ್ಲಾ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ನಾರಾ ಯಣ್‍ಗೌಡ, ಸಾಹಿತಿ ಹೊರೆಯಾಲ ದೊರೆಸ್ವಾಮಿ, ಹಿರಿಯ ಪತ್ರಕರ್ತ ಕೃಷ್ಣ ಪ್ರಸಾದ್ ಇನ್ನಿತರರು ಭಾಗವಹಿಸಿ, ಹರೀಶ್ ಅವರ ಪತ್ರಿಕಾ ಸೇವೆಯನ್ನು ಶ್ಲಾಘಿಸಿದರು.