ಜೆಎಸ್‍ಎಸ್ ಮೆಡಿಕಲ್ ಕಾಲೇಜಲ್ಲಿ 30 ಲಕ್ಷ ರೂ. ವೆಚ್ಚದಲ್ಲಿ ಕೋವಿಡ್-19 ಪ್ರಯೋಗಾಲಯ
ಮೈಸೂರು

ಜೆಎಸ್‍ಎಸ್ ಮೆಡಿಕಲ್ ಕಾಲೇಜಲ್ಲಿ 30 ಲಕ್ಷ ರೂ. ವೆಚ್ಚದಲ್ಲಿ ಕೋವಿಡ್-19 ಪ್ರಯೋಗಾಲಯ

June 29, 2020

ಮೈಸೂರು,ಜೂ.28(ಎಂಟಿವೈ)- ಹೊರ ರಾಜ್ಯ ಹಾಗೂ ವಿವಿಧ ಜಿಲ್ಲೆಯಿಂದ ವಾಪಸ್ಸಾದವರಲ್ಲಿ ಕೊರೊನಾ ಸೋಂಕು ದೃಢಪಡುತ್ತಿರುವ ಹಿನ್ನೆಲೆ ಯಲ್ಲಿ ಕಂಗೆಟ್ಟಿದ್ದ ಮೈಸೂರಿನ ಜನತೆಗೆ ಜೆಎಸ್‍ಎಸ್ ವೈದ್ಯಕೀಯ ಕಾಲೇಜು ಕೊರೊನಾ ಸೋಂಕು ಪತ್ತೆ ಮಾಡುವ `ಕೋವಿಡ್-19’ ಪ್ರಯೋಗಾಲಯ ನಿರ್ಮಿ ಸಿದ್ದು, ನಾಳೆ(ಜೂ.29) ಬೆಳಿಗ್ಗೆ 10.30ಕ್ಕೆ ಬೆಂಗಳೂ ರಿಂದಲೇ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪ್ರಯೋಗಾಲಯವನ್ನು ಲೋಕಾರ್ಪಣೆ ಮಾಡಲಿದ್ದಾರೆ.

ಮೈಸೂರಿಗೆ ಹೊರ ರಾಜ್ಯದಿಂದ ವಾಪಸ್ಸಾಗುತ್ತಿ ರುವವರ ಸಂಖ್ಯೆ ಹೆಚ್ಚಾಗುತ್ತಿದ್ದು, ಸೋಂಕಿತರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಇದರೊಂದಿಗೆ ಗರ್ಭಿಣಿ ಯರು, ಐಎಲ್‍ಐ, ಉಸಿರಾಟದ ಸಮಸ್ಯೆ, ಜ್ವರ, ಕೆಮ್ಮು, ನೆಗಡಿ ಸೇರಿದಂತೆ ವಿವಿಧ ಲಕ್ಷಣವುಳ್ಳವರಿಗೆ ಗಂಟಲು ದ್ರವ ಪರೀಕ್ಷೆ ಮಾಡಿಸಬೇಕಾದ ಹಿನ್ನೆಲೆಯಲ್ಲಿ ಮೈಸೂ ರಿನ ಸರ್ಕಾರಿ ಮೆಡಿಕಲ್ ಮತ್ತು ರಿಸರ್ಚ್ ಸಂಸ್ಥೆಯ ಪ್ರಯೋಗಾಲಯವನ್ನೇ ಅವಲಂಬಿಸಲಾಗಿತ್ತು. ಇದ ರೊಂದಿಗೆ ಡಿಎಫ್‍ಆರ್‍ಎಲ್ ಸಂಸ್ಥೆ ನೀಡಿರುವ ಮೊಬೈಲ್ ಪ್ರಯೋಗಾಲಯದಲ್ಲೂ ಸ್ವ್ಯಾಬ್ ಪರೀಕ್ಷೆ ನಡೆಯು ತ್ತಿತ್ತು. ಇಲ್ಲಿ ದಿನಕ್ಕೆ 600 ಸ್ವ್ಯಾಬ್ ಟೆಸ್ಟ್ ಮಾಡಲಾಗು ತ್ತಿತ್ತು. ಆದರೆ ಹೊರಗಿಂದ ಬಂದವರ ಸಂಖ್ಯೆ ಹೆಚ್ಚಾಗು ತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಖಾಸಗಿ ಮೆಡಿ ಕಲ್ ಕಾಲೇಜುಗಳಿಗೆ ಕೊರೊನಾ ಪರೀಕ್ಷೆಗಾಗಿ (ಸ್ವ್ಯಾಬ್) ಪ್ರಯೋಗಾಲಯ ಆರಂಭಿಸುವಂತೆ ಸೂಚನೆ ನೀಡಿತ್ತು.

ಮೈಸೂರಲ್ಲಿ ಸರ್ಕಾರಿ ಆಸ್ಪತ್ರೆಯಲ್ಲಿ ಪರೀಕ್ಷೆಗೆ ಸ್ವ್ಯಾಬ್ ನೀಡಲು ಹಿಂದೇಟು ಹಾಕುವ ವರ್ಗವೂ ಇರುವು ದರಿಂದ ಸೋಂಕು ಸಮುದಾಯಕ್ಕೆ ಹರಡುವುದನ್ನು ತಪ್ಪಿಸಲು ಖಾಸಗಿ ಲ್ಯಾಬ್‍ನಲ್ಲೂ ಪರೀಕ್ಷೆ ನಡೆಸುವು ದಕ್ಕೆ ಅವಕಾಶ ನೀಡಲು ಮುಂದಾಗಿತ್ತು. ಇದಕ್ಕಾಗಿ ನ್ಯಾಷನಲ್ ಅಕ್ರಡೇಷನ್ ಬೋರ್ಡ್ ಫಾರ್ ಟೆಸ್ಟಿಂಗ್ ಅಂಡ್ ಕಲಿಬ್ರೇಷನ್ ಲ್ಯಾಬೋರೇಟರಿಸ್ (ಎನ್‍ಎ ಬಿಎಲ್)ಗೆ ಮನವಿ ಸಲ್ಲಿಸಿತ್ತು. ಇದೀಗ ಅನುಮತಿ ದೊರೆತ ಹಿನ್ನೆಲೆಯಲ್ಲಿ ಜೆಎಸ್‍ಎಸ್ ಮೆಡಿಕಲ್ ಕಾಲೇಜಿನಲ್ಲಿ ಪ್ರಯೋಗಾಲಯ ಕಾರ್ಯಾರಂಭ ಮಾಡಲು ಸಜ್ಜಾಗಿದೆ.

ಮೈಸೂರಿನ ಅಗ್ರಹಾರದಲ್ಲಿರುವ ಜೆಎಸ್‍ಎಸ್ ಆಸ್ಪತ್ರೆಯ ನೂತನ ಕಟ್ಟಡದಲ್ಲಿ ನಿರ್ಮಿಸಲಾಗಿರುವ `ಕೋವಿಡ್-19’ ಪ್ರಯೋಗಾಲಯವನ್ನು ನಾಳೆ (ಜೂ.29) ಬೆಳಿಗ್ಗೆ 10.30ರಿಂದ 11 ಗಂಟೆ ನಡುವೆ ಮುಖ್ಯ ಮಂತ್ರಿ ಬಿ.ಎಸ್.ಯಡಿಯೂರಪ್ಪ ಬೆಂಗಳೂರಿಂದಲೇ ಆನ್‍ಲೈನ್ ಮೂಲಕ ಉದ್ಘಾಟಿಸಲಿದ್ದಾರೆ. ಈ ಸಂದರ್ಭ ದಲ್ಲಿ ಆರೋಗ್ಯ ಸಚಿವ ಬಿ.ಶ್ರೀರಾಮುಲು, ವೈದ್ಯ ಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ಪಾಲ್ಗೊಳ್ಳಲಿ ದ್ದಾರೆ. ಸುತ್ತೂರು ಕ್ಷೇತ್ರದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮಠದಿಂದಲೇ ಆನ್‍ಲೈನ್ ಮೂಲಕ ಆಶೀ ರ್ವಚನ ನೀಡಲಿದ್ದಾರೆ. ಮೈಸೂರಿನ ಆಸ್ಪತ್ರೆ ಆವರಣ ದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಶಾಸಕರಾದ ಎಸ್.ಎ.ರಾಮದಾಸ್, ಜಿ.ಟಿ.ದೇವೇಗೌಡ, ಎಲ್.ನಾಗೇಂದ್ರ, ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಆರ್. ವೆಂಕಟೇಶ್ ಸೇರಿದಂತೆ ಇನ್ನಿತರರು ಪಾಲ್ಗೊಳ್ಳಲಿದ್ದಾರೆ.

30 ಲಕ್ಷ ರೂ ವೆಚ್ಚದಲ್ಲಿ ಲ್ಯಾಬ್ ನಿರ್ಮಾಣ: ಜೆಎಸ್‍ಎಸ್ ಮೆಡಿಕಲ್ ಕಾಲೇಜಿನ ಪ್ರಾಂಶುಪಾಲ ಡಾ. ಬಸವನಗೌಡಪ್ಪ `ಮೈಸೂರು ಮಿತ್ರ’ನೊಂದಿಗೆ ಮಾತ ನಾಡಿ, ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಸೋಂಕಿತರ ಸಂಪರ್ಕಿತರ ಸಂಖ್ಯೆಯೂ ಹೆಚ್ಚಾಗು ತ್ತಿದೆ. ಈ ಹಿನ್ನೆಲೆಯಲ್ಲಿ ಎಲ್ಲರ ಸ್ವ್ಯಾಬ್ ಸ್ಯಾಂಪಲ್ ಪರೀಕ್ಷೆ ಮಾಡಲು ಸರ್ಕಾರಕ್ಕೆ ಹೊರೆಯಾಗಿ ಪರಿಣ ಮಿಸುತ್ತಿತ್ತು. ಇದನ್ನು ಮನಗಂಡ ಮುಖ್ಯಮಂತ್ರಿಗಳು ರಾಜ್ಯದ 60 ಮೆಡಿಕಲ್ ಕಾಲೇಜುಗಳಿಗೆ ಕೊರೊನಾ ಪರೀಕ್ಷೆ (ಸ್ವ್ಯಾಬ್) ನಡೆಸುವಂತೆ ಸೂಚಿಸಿದ್ದರು. ಏಕಾ ಏಕಿ ಪರೀಕ್ಷೆ ಮಾಡಲು ಸಾಧ್ಯವಿಲ್ಲ. ಅದಕ್ಕಾಗಿ ಯಂತ್ರೋ ಪಕರಣ, ಸುರಕ್ಷತಾ ವ್ಯವಸ್ಥೆ ಮಾಡಬೇಕಾಗಿತ್ತು. ಅಲ್ಲದೆ ಪರೀಕ್ಷೆ ಮಾಡುವ ಗುಣಮಟ್ಟ, ಸಿಬ್ಬಂದಿಗಳ ಕ್ಷಮತೆ, ಉಪಕರಣಗಳ ಗುಣಮಟ್ಟವನ್ನು ಅಕ್ರಡೇಷನ್ ಬೋರ್ಡ್ ಫಾರ್ ಟೆಸ್ಟಿಂಗ್ ಅಂಡ್ ಕಲಿಬ್ರೇಷನ್ ಲ್ಯಾಬೋರೇಟರಿಸ್(ಎನ್‍ಎಬಿಎಲ್) ಪರಿಶೀಲಿಸಿ ಅನುಮತಿ ನೀಡಬೇಕಾಗಿತ್ತು. ಬಳಿಕ ಇಂಡಿಯಲ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) ಅನುಮತಿ ಪಡೆಯಬೇಕಾಗಿತ್ತು. ನಮ್ಮ ಪ್ರಯೋ ಗಾಲಯದಲ್ಲಿನ ವ್ಯವಸ್ಥೆ, ಸಿಬ್ಬಂದಿ ದಕ್ಷತೆ, ಕ್ವಾಲಿಟಿ ಬಗ್ಗೆ ಎನ್‍ಎಬಿಎಲ್ ಹಾಗೂ ಐಸಿಎಂಆರ್ ಮೆಚ್ಚುಗೆ ವ್ಯಕ್ತಪಡಿಸಿ, ಕೊರೊನಾ ಪರೀಕ್ಷೆ ನಡೆಸಲು ಅನುಮತಿ ನೀಡಿದೆ ಎಂದು ತಿಳಿಸಿದರು.

ಪರೀಕ್ಷೆಗಾಗಿ ದೆಹಲಿಯಿಂದ ಯಂತ್ರ ಖರೀದಿಸ ಲಾಗಿದೆ. 30 ಲಕ್ಷ ರೂ. ವೆಚ್ಚದಲ್ಲಿ ಪ್ರಯೋಗಾಲಯ ಸಿದ್ಧಪಡಿಸಲಾಗಿದೆ. ವೈದ್ಯರು ಸೇರಿದಂತೆ ವಿವಿಧ ವರ್ಗದ 10 ಮಂದಿ ಸಿಬ್ಬಂದಿಗೆ ತರಬೇತಿ ನೀಡಲಾಗಿದೆ. ಸ್ವ್ಯಾಬ್ ಸ್ಯಾಂಪಲ್ ಸಂಗ್ರಹಿಸಲು ಸಂಸ್ಥೆಯ ಆರು ಮಂದಿಯ ಇಎನ್‍ಟಿ ಸಿಬ್ಬಂದಿಗಳ ತಂಡ ಕಾರ್ಯ ನಿರ್ವಹಿಸಲಿದೆ. ಈ ತಂಡ ನಂಜನಗೂಡು ಜುಬಿ ಲಂಟ್ ಕಾರ್ಖಾನೆಯ 1300 ಸಿಬ್ಬಂದಿಗಳÀ ಸ್ಯಾಂಪಲ್ ಸಂಗ್ರಹ ಮಾಡಿದ ಅನುಭವ ಹೊಂದಿದೆ ಎಂದು ಡಾ. ಬಸವನಗೌಡಪ್ಪ ತಿಳಿಸಿದರು.

Translate »