ಬೆಂಗಳೂರು, ಜೂ.28- ಹೈಕೋರ್ಟ್ ಸೂಚನೆ ಹಿನ್ನೆಲೆಯಲ್ಲಿ ಆನ್‍ಲೈನ್ ಶಿಕ್ಷಣಕ್ಕೆ ರಾಜ್ಯ ಸರ್ಕಾರ ಅನುಮತಿ ನೀಡಿದೆ. 1ರಿಂದ 10ನೇ ತರಗತಿಯವರೆಗೆ ನಿಯಮಿತವಾಗಿ ಆನ್‍ಲೈನ್ ಕ್ಲಾಸ್‍ಗೆ ಅವಕಾಶ ನೀಡಿದೆ. ಆದರೆ ಈ ಆದೇಶ ತಜ್ಞರ ವರದಿ ಸಲ್ಲಿಕೆ ಯಾಗುವವರೆಗೆ ಮಾತ್ರ ಜಾರಿಯಲ್ಲಿರಲಿದೆ.
ಲಾಕ್‍ಡೌನ್ ನಂತರ ರಾಜ್ಯದಲ್ಲಿ ಖಾಸಗಿ ಶಾಲೆಗಳು ಆನ್‍ಲೈನ್ ಕ್ಲಾಸ್‍ನ ಮೊರೆ ಹೋಗಿದ್ದವು. ಎಲ್‍ಕೆಜಿ, ಯುಕೆಜಿ ಮಕ್ಕಳಿಗೂ ಆನ್‍ಲೈನ್ ಕ್ಲಾಸ್ ಹೆಸರಿನಲ್ಲಿ ಬಹುತೇಕ ಖಾಸಗಿ ಶಾಲೆಗಳು ಫೀಸು ಪಡೆಯುತ್ತಿ ದ್ದಾರೆ ಎಂದು ಪೆÇೀಷಕರು ದೂರಿದ್ದರು. ಸರ್ಕಾರವೂ ಇದರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿತ್ತು. ಶಿಕ್ಷಣ ಸಚಿವ ಸುರೇಶ್‍ಕುಮಾರ್ ಈ ಕುರಿತು ಸಾಕಷ್ಟು ಅಸಮಾ ಧಾನ ವ್ಯಕ್ತಪಡಿಸಿದ್ದರು. ಕೇಂದ್ರ ಸರ್ಕಾರದ ಮಾನವ ಸಂಪನ್ಮೂಲ ಮಾರ್ಗದರ್ಶನದ ಪ್ರಕಾರ ಆನ್‍ಲೈನ್ ಕ್ಲಾಸ್ ನಡೆಸಬಹುದು. ರಾಜ್ಯ ಸರ್ಕಾರ ರಚಿಸಿರುವ ತಜ್ಞರ ಸಮಿತಿ ವರದಿ ಬರುವವರೆಗೂ ಸೀಮಿತ ಅವಧಿಯ ಆನ್‍ಲೈನ್ ಶಿಕ್ಷಣ ಮಾಡಬಹುದು ಎಂದು ಹೈಕೋರ್ಟ್ ಸರ್ಕಾರಕ್ಕೆ ಸೂಚನೆ ನೀಡಿದೆ. ಇದರ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆ ಸರ್ಕಾರದ ಅಧೀನ ಕಾರ್ಯದರ್ಶಿ ಶೇಖರ್ ಆದೇಶ ಹೊರಡಿಸಿದ್ದಾರೆ. ಮಾನವ ಸಂಪನ್ಮೂಲ ಅಭಿವೃದ್ದಿ ಸಚಿವಾಲಯದ ಡಿಜಿಟಲೀಕರಣ ಕುರಿಯ ಮಾರ್ಗದರ್ಶಿ ಸೂತ್ರಗಳ ಪ್ರಕಾರ ರಾಜ್ಯದಲ್ಲಿನ ಪಠ್ಯಕ್ರಮ(ಸ್ಟೇಟ್ ಸಿಲಾಬಸ್) ಹಾಗೂ ಐಸಿಎಸ್‍ಇ/ಸಿಬಿಎಸ್‍ಇ ಮೊದಲಾದ ಪಠ್ಯಕ್ರಮಗಳಿರುವ ಎಲ್ಲಾ ಶಾಲೆಗಳು ಎಲ್‍ಕೆಜಿಯಿಂದ 10ನೇ ತರಗತಿವರೆಗೆ ಆನ್‍ಲೈನ್ ಶಿಕ್ಷಣ ನೀಡುವ ಸಂಬಂಧ ಈ ಕೆಳಕಂಡ ವಿಧಾನಗಳನ್ನು ಅನುಸರಿಸಲು ಹೈಕೋರ್ಟ್ ಇಂಗಿತ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಸರ್ಕಾರ ಆದೇಶಿಸಿದೆ.
ಮಾರ್ಗಸೂಚಿ: 1-10ನೇ ತರಗತಿವರೆಗೆ ಆನ್‍ಲೈನ್ ಕ್ಲಾಸ್‍ಗೆ ಅನುಮತಿ ದೊರೆತಿದೆ. ಆದರೆ, ಪೂರ್ವಪ್ರಾಥಮಿಕ, ಪ್ರಾಥಮಿಕ, ಮಾಧ್ಯಮಿಕ ಮತ್ತು ಪ್ರೌಢಶಾಲಾ ಹಂತದಲ್ಲಿ ಬೇರೆ ಬೇರೆ ನಿಯಮಾವಳಿಗಳನ್ನ ರೂಪಿಸಲಾಗಿದೆ. ಅದರ ವಿವರ ಈ ಕೆಳಕಂಡಂತಿದೆ: ಪೂರ್ವ ಪ್ರಾಥಮಿಕ: ಎಲ್‍ಕೆಜಿ ಹಾಗೂ ಯುಕೆಜಿ (ಪೂರ್ವ ಪ್ರಾಥಮಿಕ) ತರಗತಿಗಳಲ್ಲಿ ಪಾಲಕರೊಂದಿಗೆ ಸಂವಹನ ಮಾಡಬಹುದು ಎಂದು ತಿಳಿಸಿದೆ. ಪೂರ್ವ ಪ್ರಾಥಮಿಕ ಹಂತದಲ್ಲಿ 30 ನಿಮಿಷಗಳಿಗೆ ಮೀರದಂತೆ ಪಾಲಕರೊಂದಿಗೆ ಮಾತ್ರ ವಾರಕ್ಕೆ ಒಂದು ದಿನ ಆನ್‍ಲೈನ್ ಕ್ಲಾಸ್, ಮಾರ್ಗದರ್ಶನ ಮಾಡಬಹುದು.
1-5ನೇ ತರಗತಿ: 30-45 ನಿಮಿಷದ 2 ಅವಧಿ ಮೀರದಂತೆ ಎರಡು ದಿನಕ್ಕೊಮ್ಮೆ, ವಾರದಲ್ಲಿ ಗರಿಷ್ಟ 3 ದಿನ ಸಿಂಕ್ರನಸ್ ವಿಧಾನದಲ್ಲಿ ಆನ್‍ಲೈನ್ ಕ್ಲಾಸ್ ತೆಗೆದುಕೊಳ್ಳ ಬಹುದು. 6-8 ತರಗತಿ: 30-45 ನಿಮಿಷಗಳ 2 ಅವಧಿಗಳಿಗೆ ಮೀರದಂತೆ ವಾರದಲ್ಲಿ 5 ದಿನ ಸಿಂಕ್ರನಸ್ ವಿಧಾನದಲ್ಲಿ ಆನ್‍ಲೈನ್ ಕ್ಲಾಸ್ ತೆಗೆದುಕೊಳ್ಳಬಹುದು. 9-10 ತರಗತಿ: 30-45 ನಿಮಿಷಗಳ 4 ಅವಧಿಗಳಿಗೆ ಮೀರದಂತೆ ವಾರದಲ್ಲಿ 5 ದಿನ ಸಿಂಕ್ರನಸ್ ವಿಧಾನದಲ್ಲಿ ಆನ್ ಲೈನ್ ಶಿಕ್ಷಣ ಮಾಡಬಹುದು. ಇದು ಶಿಕ್ಷಣ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಶೇಖರ್ ಹೊರಡಿಸಿರುವ ಆದೇಶದ ಮುಖ್ಯಾಂಶಗಳು. ಆದರೆ ಈ ಆದೇಶ ತಜ್ಞ ವೈದ್ಯರ ಸಮಿತಿ ವರದಿ ನೀಡುವವರೆಗೆ ಮಾತ್ರ ಇರಲಿದ್ದು, ಸೀಮಿತ ಅವಧಿಗೆ ಈ ಆನ್‍ಲೈನ್ ಶಿಕ್ಷಣ ಆದೇಶವಿರಲಿದೆ ಎಂದು ಸೂಚಿಸಿದೆ. ಆನ್‍ಲೈನ್ ಶಿಕ್ಷಣಕ್ಕೆ ಹೆಚ್ಚುವರಿ ಶುಲ್ಕ ವಿಧಿಸುವಂತಿಲ್ಲ. ಇದಕ್ಕೆ ತಗುಲುವ ವೆಚ್ಚ ವಾರ್ಷಿಕ ಬೋಧನಾ ಶುಲ್ಕದಿಂದಲೇ ಭರಿಸಬೇಕು ಎಂದು ಶಿಕ್ಷಣ ಇಲಾಖೆ ಸೂಚಿಸಿದೆ. ಖಾಸಗಿ ಅನುದಾನ ರಹಿತ ಶಾಲೆಗಳಲ್ಲಿ ಹೆಚ್ಚಿನ ಶುಲ್ಕ ವಿಧಿಸುವಂತಿಲ್ಲ. 2019-20ರ ಸಾಲಿನ ವರ್ಷದಲ್ಲಿ ಇದ್ದ ಬೋಧನಾ ಶುಲ್ಕವನ್ನ ಮಾತ್ರ ತೆಗೆದುಕೊಳ್ಳಬೇಕು. ಶುಲ್ಕ ಹಣ ಹೆಚ್ಚಿಸಿದರೆ ಕ್ರಮ ಜರುಗಿಸಲಾಗುವುದು ಎಂದು ಶಿಕ್ಷಣ ಇಲಾಖೆ ಎಚ್ಚರಿಕೆ ನೀಡಿದೆ.