ಮೈಸೂರಲ್ಲಿ ಕೊರೊನಾ ಜಾಗೃತಿ ಯುವ ಕಾರ್ಯಪಡೆ ಅಸ್ತಿತ್ವಕ್ಕೆ
ಮೈಸೂರು

ಮೈಸೂರಲ್ಲಿ ಕೊರೊನಾ ಜಾಗೃತಿ ಯುವ ಕಾರ್ಯಪಡೆ ಅಸ್ತಿತ್ವಕ್ಕೆ

August 11, 2020

ಮೈಸೂರು,ಆ.10(ಆರ್‍ಕೆ)- ಸಾಂಸ್ಕøತಿಕ ನಗರಿ ಮೈಸೂರಿನಲ್ಲಿ ಕೊರೊನಾ ಯುವ ಕಾರ್ಯಪಡೆಯೊಂದು ಅಸ್ತಿತ್ವಕ್ಕೆ ಬಂದಿದೆ.

ಶಾರದಾದೇವಿ ನಗರದ ನಿವೇದಿತಾ ಪಾರ್ಕ್ ಬಳಿ ಮಾಜಿ ಕ್ರಿಕೆಟಿಗ ಜಾವಗಲ್ ಶ್ರೀನಾಥ್ ಅವರು ಗಿಡ ನೆಡುವ ಮೂಲಕ ಕಾರ್ಯಪಡೆಯನ್ನು ಉದ್ಘಾಟಿಸಿದರು.

45ನೇ ವಾರ್ಡಿನಲ್ಲಿ ಕೆಲಸ ಮಾಡಲಿ ರುವ 60 ಮಂದಿ ಯುವಕ-ಯುವತಿ ಯರು, ಕೊರೊನಾ ವೈರಸ್ ಸೋಂಕಿನ ಬಗ್ಗೆ ಜಾಗೃತಿ ಮೂಡಿಸಿ ವೃದ್ಧರು, ರೋಗ ಲಕ್ಷಣಗಳಿರುವವರು ಮನೆಯಿಂದ ಹೊರಗೆ ಬಾರದಂತೆ ನೋಡಿಕೊಂಡು ಅವರಿಗೆ ಅಗತ್ಯವಿರುವ ಸೇವೆ ಸಲ್ಲಿಸುವರು.

ಈ ಸಂದರ್ಭ ಮಾತನಾಡಿದ ಜಾವ ಗಲ್ ಶ್ರೀನಾಥ್, ಮುಂದೆ ಕೊರೊನಾ ವೈರಸ್ ಜೊತೆಯಲ್ಲೇ ಜೀವನ ನಡೆಸ ಬೇಕಾಗಿರುವುದರಿಂದ ಮಾಸ್ಕ್ ಧರಿಸುವುದು, ಸ್ಯಾನಿಟೈಸರ್‍ನಿಂದ ಕೈತೊಳೆದುಕೊಳ್ಳು ವುದು, ಸಾಮಾಜಿಕ ಅಂತರ ಕಾಯ್ದು ಕೊಂಡು ಅಗತ್ಯ ಬಿದ್ದರೆ ಮಾತ್ರ ಮನೆಯಿಂದ ಹೊರ ಬರುವುದನ್ನು ನಿತ್ಯದ ಅಭ್ಯಾಸ ವನ್ನಾಗಿ ಮಾಡಿಕೊಳ್ಳಬೇಕು ಎಂದರು.

ಈ ಬಗ್ಗೆ ಜನರಲ್ಲಿ ಅರಿವು ಮೂಡಿಸಿ, ಹಿರಿಯ ನಾಗರಿಕರಿಗೆ ನೆರವು ನೀಡಿ ಕೊರೊನಾ ಸೋಂಕು ಹರಡದಂತೆ ನೋಡಿ ಕೊಳ್ಳಬೇಕಾಗಿರುವುದರಿಂದ ಯುವ ಕಾರ್ಯ ಪಡೆಯ ತಂಡ ಸ್ವಯಂಪ್ರೇರಿತವಾಗಿ ಸೇವೆಗೆ ಮುಂದಾಗಿರುವುದು ಶ್ಲಾಘನೀಯ ಎಂದು ಹೇಳಿದರು. ಯುವಕ-ಯುವತಿ ಯರು ಮನೆ-ಮನೆಗೆ ತೆರಳಿ ಅರಿವು ಮೂಡಿಸುವ ಜೊತೆಗೆ ಸೋಂಕಿನ ಲಕ್ಷಣ ಗಳಿದ್ದವರಿಗೆ ಕೈಗೊಳ್ಳಬೇಕಾದ ಮುಂಜಾ ಗ್ರತಾ ಕ್ರಮಕ್ಕೆ ಸಹಾಯ ಮಾಡುವರು.

Translate »