ಮೈಸೂರು ವಿವಿ ಶತಮಾನೋತ್ಸವ ಫಟಿಕೋತ್ಸವಕ್ಕೆ ಕೊರೊನಾ ಕರಿ ಛಾಯೆ
ಮೈಸೂರು

ಮೈಸೂರು ವಿವಿ ಶತಮಾನೋತ್ಸವ ಫಟಿಕೋತ್ಸವಕ್ಕೆ ಕೊರೊನಾ ಕರಿ ಛಾಯೆ

April 28, 2020

ಮೈಸೂರು, ಏ.27(ಆರ್‍ಕೆ)- ಪ್ರತಿಷ್ಠಿತ ಮೈಸೂರು ವಿಶ್ವವಿದ್ಯಾನಿಲಯದ 2020ರ ಶತ ಮಾನೋತ್ಸವದ ಘಟಿಕೋತ್ಸವ ಆಚರಣೆಗೆ ಕೊರೊನಾ ವೈರಸ್ ಸೋಂಕು ಕರಿ ಛಾಯೆ ಆಗಿದೆ. ನೂರು ವರ್ಷ ಪೂರೈಸಿರುವ ಪ್ರಯುಕ್ತ ಶತಮಾನೋತ್ಸವ ಘಟಿಕೋತ್ಸವ ಸಮಾ ರಂಭಕ್ಕೆ ರಾಷ್ಟ್ರಪತಿ ಅಥವಾ ಪ್ರಧಾನ ಮಂತ್ರಿ ಗಳನ್ನು ಆಹ್ವಾನಿಸಿ ಅದ್ಧೂರಿಯಾಗಿ ಆಚರಿ ಸಲು ಸಿದ್ಧತೆ ನಡೆಸಿ, ಗಣ್ಯರಿಗೆ ಆಹ್ವಾನವನ್ನೂ ನೀಡಲಾಗಿತ್ತು. ಅವರು ದಿನಾಂಕ ನೀಡುವ ಕುರಿತು ದೆಹಲಿಯ ರಾಷ್ಟ್ರಪತಿ ಹಾಗೂ ಪ್ರಧಾನಿ ಕಚೇರಿಯಲ್ಲಿ ಪ್ರಕ್ರಿಯೆಯೂ ಆರಂಭವಾಗಿ ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ, ರಾಜ್ಯಪಾಲರೂ ಸಹ ನಿರಂತರ ಸಂಪರ್ಕ ದಲ್ಲಿದ್ದು, ದಿನಾಂಕವನ್ನು ಎದುರು ನೋಡು ತ್ತಿರುವಾಗಲೇ ಕೊರೊನಾ ವೈರಸ್ ಆವರಿಸಿ, ದೇಶದಾದ್ಯಂತ ಲಾಕ್‍ಡೌನ್ ನಿರ್ಬಂಧ ಹೇರಲಾಯಿತು.

ಅದರೊಂದಿಗೆ ಗಣ್ಯಾತಿಗಣ್ಯರಿಂದ ಪದವಿ, ಸ್ನಾತಕೋತ್ತರ ಪದವೀಧರರಿಗೆ ಪ್ರಮಾಣ ಪತ್ರ, ಬಹುಮಾನ ಕೊಡಿಸಬೇಕೆಂಬ ಹಾಗೂ ಇತಿಹಾಸ ದಾಖಲಿಸಬೇಕೆಂಬ ವಿಶ್ವವಿದ್ಯಾನಿಲ ಯದ ಕುಲಪತಿಗಳ ಆಶಯ ಭಗ್ನಗೊಂ ಡಿದೆ. ಕೋವಿಡ್-19 ಸೋಂಕು ಹರಡ ದಂತೆ ಲಾಕ್‍ಡೌನ್ ನಿರ್ಬಂಧ ವಿಧಿಸಿರುವ ಕಾರಣ ಹಾಗೂ ಹೆಚ್ಚಿನ ಸಂಖ್ಯೆಯ ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆ ಯಾದ ಹಿನ್ನೆಲೆಯಲ್ಲಿ ಮೈಸೂರನ್ನು ಹಾಟ್ ಸ್ಪಾಟ್ ಎಂದು ಘೋಷಿಸಿರುವುದು ಉದ್ದೇ ಶಿತ ಮೈಸೂರು ವಿಶ್ವವಿದ್ಯಾನಿಲಯದ ಶತ ಮಾನೋತ್ಸವದ ಘಟಿಕೋತ್ಸವ ಸಮಾ ರಂಭ ಸದ್ಯಕ್ಕೆ ನಡೆಯುವುದಿಲ್ಲ.

ಈ ಸಂಬಂಧ ‘ಮೈಸೂರು ಮಿತ್ರ’ನೊಂ ದಿಗೆ ಮಾತನಾಡಿದ ಕುಲಪತಿ ಪ್ರೊ. ಜಿ. ಹೇಮಂತ್‍ಕುಮಾರ್, ಗಣ್ಯಾತಿಗಣ್ಯರನ್ನು ಆಹ್ವಾನಿಸಿ ವಿಶೇಷವಾಗಿ 100ನೇ ಘಟಿಕೋ ತ್ಸವ ಆಚರಿಸಬೇಕೆಂಬ ಮಹದಾಸೆ ಇತ್ತು. ಅದಕ್ಕಾಗಿ ನಾವು ಎಲ್ಲಾ ರೀತಿಯಲ್ಲೂ ಸಿದ್ಧತೆ ಮಾಡಿಕೊಳ್ಳುತ್ತಿರುವಾಗಲೇ ಕೋವಿಡ್-19 ಲಾಕ್‍ಡೌನ್ ಆದೇಶ ಹೊರಟಿದ್ದರಿಂದ ಭಾರೀ ನಿರಾಸೆಯಾಗಿದೆ ಎಂದು ನುಡಿದರು.

ಆದರೂ ನಾನು ಧೃತಿಗೆಟ್ಟಿಲ್ಲ. ಈ ಸಂದಿಗ್ಧ ಪರಿಸ್ಥಿತಿ ತಿಳಿಗೊಂಡ ನಂತರವೂ ನಾನು ಪ್ರಯತ್ನ ಮುಂದುವರಿಸುತೇನೆ. ಏಕೆಂದರೆ ಇದು ಶತಮಾನೋತ್ಸವದ ಘಟಿಕೋತ್ಸವ ಪ್ರಧಾನಿಗಳು ಬರಲು ಸಾಧ್ಯವಾಗದಿದ್ದರೂ ರಾಷ್ಟ್ರಪತಿ ಅಥವಾ ಉಪ ರಾಷ್ಟ್ರಪತಿಗಳನ್ನಾ ದರೂ ಕರೆಸಿ ಅರ್ಥಪೂರ್ಣವಾಗಿ ಸಮಾ ರಂಭ ನಡೆಸಬೇಕೆಂಬುದು ನನ್ನ ಕನಸು. ಅದನ್ನು ನನಸು ಮಾಡಿ ಇತಿಹಾಸ ದಾಖಲಿಸಲು ಪ್ರಯತ್ನಿಸುತ್ತೇನೆ ಎಂದು ಅವರು ತಮ್ಮ ಮಹದಾಸೆ ವ್ಯಕ್ತಪಡಿಸಿದ್ದಾರೆ. ಸದ್ಯಕ್ಕೆ ಲಾಕ್ ಡೌನ್ ಮುಗಿಯುತ್ತಿದ್ದಂತೆಯೇ ಅಕಾಡೆ ಮಿಕ್ ಕೌನ್ಸಿಲ್‍ನಲ್ಲಿ ಬಜೆಟ್‍ಗೆ ಅನು ಮೋದನೆ ಪಡೆದು ಶೈಕ್ಷಣಿಕ ವ್ಯವಸ್ಥೆ ಯನ್ನು ಸುಧಾರಿಸುತ್ತೇನೆ. ನಂತರ ಈ ವರ್ಷದ ಕೊನೆಯಲ್ಲಾದರೂ ಸರಿ ರಾಷ್ಟ್ರಪತಿಗಳನ್ನಾ ದರೂ ಆಹ್ವಾನಿಸಿ ಘಟಿಕೋತ್ಸವ ಮಾಡ ಬೇಕೆಂಬುದು ನನ್ನ ಆಸೆ ಎಂದು ಪ್ರೊ. ಹೇಮಂತ್‍ಕುಮಾರ್ ತಿಳಿಸಿದರು.

Translate »