ಮುಕ್ತ ವಿವಿ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರದಲ್ಲಿ ಆನ್‍ಲೈನ್ ತರಗತಿಗೆ ಚಾಲನೆ
ಮೈಸೂರು

ಮುಕ್ತ ವಿವಿ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರದಲ್ಲಿ ಆನ್‍ಲೈನ್ ತರಗತಿಗೆ ಚಾಲನೆ

April 28, 2020

ಮೈಸೂರು, ಏ.27(ಪಿಎಂ)- ಕರ್ನಾ ಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರದ ಆನ್‍ಲೈನ್ ತರಗತಿಗಳಿಗೆ ಸೋಮವಾರ ಚಾಲನೆ ದೊರೆಯಿತು.ವಿವಿಯ ಕುಲಪತಿಗಳ ಕಚೇರಿಯಲ್ಲಿ ಆನ್‍ಲೈನ್ ತರಗತಿಗೆ ವಿವಿ ಕುಲಪತಿ ಪ್ರೊ. ಎಸ್.ವಿದ್ಯಾಶಂಕರ್ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಕುಲಪತಿಗಳು, ಕೊರೊನಾ ಹಿನ್ನೆಲೆಯಲ್ಲಿ ಜಗತ್ತಿನಾದ್ಯಂತ ಎಲ್ಲಾ ಕ್ಷೇತ್ರಗಳು ಸ್ಥಗಿತಗೊಂಡು ತಿಂಗಳೇ ಕಳೆದಿದೆ. ವಿದ್ಯಾರ್ಥಿಗಳು ಮಾತ್ರವಲ್ಲದೆ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧರಾಗುವ ಅಭ್ಯರ್ಥಿಗಳಿಗೂ ಇದರಿಂದ ಅಡಚಣೆ ಉಂಟಾಗಿದೆ. ಇದನ್ನು ಮನಗೊಂಡು ಆನ್‍ಲೈನ್ ತರಗತಿಗೆ ಚಾಲನೆ ನೀಡಲಾ ಗಿದೆ. ವಿದ್ಯಾರ್ಥಿಗಳು ಇದರ ಸದುಪ ಯೋಗ ಪಡೆದುಕೊಳ್ಳಬೇಕು ಎಂದು ಪ್ರೊ. ವಿದ್ಯಾಶಂಕರ್ ಸಲಹೆ ನೀಡಿದರು.

ಶಿಕ್ಷಣ ಕ್ಷೇತ್ರದಲ್ಲಿ ನಿರಂತರತೆ ಇದ್ದರೆ ವಿದ್ಯಾರ್ಥಿಗಳು ಸಕ್ರಿಯರಾಗಿರುತ್ತಾರೆ. ಪ್ರಸ್ತುತ ಆನ್‍ಲೈನ್ ಶಿಕ್ಷಣ ಜನಪ್ರಿಯ. ಮುಂದೆ ಇದೇ ವ್ಯವಸ್ಥೆ ಬಲಗೊಳ್ಳಲಿದೆ. ಈ ಹಿನ್ನೆಲೆಯಲ್ಲಿಯೇ ನಮ್ಮ ವಿವಿ ಕೂಡ ಆನ್‍ಲೈನ್ ಬಳಸಿಯೇ ವಿದ್ಯಾರ್ಥಿಗಳ ನಿರಂ ತರ ಸಂಪರ್ಕದಲ್ಲಿ ಇರಲು ಮುಂದಾ ಗಿದೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸತತ ಪ್ರಯತ್ನ ಅತ್ಯಗತ್ಯ. ಇದಕ್ಕೆ ವಿವಿ ಸ್ಪರ್ಧಾ ತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರ ಸಕಲ ಸಿದ್ಧತೆ ಮಾಡಿಕೊಂಡಿದೆ ಎಂದರು.

ವಿವಿಯ ಕುಲಸಚಿವ ಪ್ರೊ.ಲಿಂಗರಾಜ ಗಾಂಧಿ ಮಾತನಾಡಿ, ದೇಶದಲ್ಲಿ ಬಹಳಷ್ಟು ವಿಶ್ವವಿದ್ಯಾಲಯಗಳು ಆನ್‍ಲೈನ್ ತರಗತಿ ಆರಂಭಿಸಿವೆ. ಆದರೆ ಸ್ಪರ್ಧಾತ್ಮಕ ಪರೀಕ್ಷೆ ಗಳಿಗೆ ಆನ್‍ಲೈನ್ ತರಬೇತಿ ಪ್ರಾರಂಭಿಸುತ್ತಿ ರುವ ಮೊದಲ ವಿವಿ ನಮ್ಮದು. ಇದು ಅಭ್ಯರ್ಥಿಗಳಿಗೆ ನೆರವಾದರೆ ನಮ್ಮ ಶ್ರಮ ಸಾರ್ಥಕ ಎಂದು ಹೇಳಿದರು.

ಲಾಕ್‍ಡೌನ್ ಬಳಿಕವೂ ಇರಲಿದೆ: ಲಾಕ್ ಡೌನ್ ಬಳಿಕ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸು ವವರಿಗೆ ಮೈಸೂರಿನ ವಿವಿ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರದಲ್ಲೇ ತರಗತಿ ಎಂದಿನಂತೆ ನಡೆಯಲಿವೆ. ಅಗತ್ಯಕ್ಕೆ ಅನು ಗುಣವಾಗಿ ಆನ್‍ಲೈನ್ ತರಗತಿಗಳು ಇರ ಲಿವೆ ಎಂದು ಕೇಂದ್ರದ ಸಂಯೋಜನಾಧಿ ಕಾರಿ ಜೈನಹಳ್ಳಿ ಸತ್ಯನಾರಾಯಣಗೌಡ ತಿಳಿಸಿದರು. ವಿವಿ ಹಣಕಾಸು ಅಧಿಕಾರಿ ಖಾದರ್ ಪಾಷಾ ಹಾಜರಿದ್ದರು.

Translate »