ಕೋವಿಡ್-19 ಆತಂಕದ ನಡುವೆಯೂ 1.19 ಲಕ್ಷ ಮಕ್ಕಳಿಗೆ ಆಹಾರ ಪದಾರ್ಥ
ಮೈಸೂರು

ಕೋವಿಡ್-19 ಆತಂಕದ ನಡುವೆಯೂ 1.19 ಲಕ್ಷ ಮಕ್ಕಳಿಗೆ ಆಹಾರ ಪದಾರ್ಥ

April 28, 2020

ಮೈಸೂರು,ಏ.27- ವಿಶ್ವಮಟ್ಟದಲ್ಲಿ ಪೆಡಂಬೂತವಾಗಿ ಕಾಡುತ್ತಿರುವ ಕೊರೊನಾ ಮಹಾಮಾರಿಯಿಂದ ದೇಶವೇ ಲಾಕ್ ಡೌನ್ ಆಗಿದ್ದು, ಸಂಕಷ್ಟದ ಪರಿಸ್ಥಿತಿ ಯಲ್ಲೂ ಅಂಗನವಾಡಿ ಮಕ್ಕಳು, ಗರ್ಭಿಣಿ, ಬಾಣಂತಿ, ಅಪೌಷ್ಟಿಕ ಮಕ್ಕಳು ಹಾಗೂ ಕಿಶೋರಿಯರ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಸರ್ಕಾರ ಬಿಡುಗಡೆ ಮಾಡಿರುವ ಆಹಾರ ಪದಾರ್ಥವನ್ನು ಮೈಸೂರು ಜಿಲ್ಲೆ ಯಲ್ಲಿ 1,19,770 ಮಕ್ಕಳಿಗೆ ಅಂಗನವಾಡಿ ಕಾರ್ಯಕರ್ತೆಯರು ಮನೆ ಮನೆ ತಲುಪಿ ಸುವ ಕಾಯಕದಲ್ಲಿ ತೊಡಗಿಸಿಕೊಂಡಿದ್ದಾರೆ.

ಕೊರೊನಾ ವೈರಸ್ ಮೈಸೂರು ಜಿಲ್ಲೆಗೆ ಎಂಟ್ರಿಯಾದ ದಿನದಿಂದಲೂ ಸಂಕಷ್ಟದ ಪರಿಸ್ಥಿತಿ ನಿರ್ಮಾಣವಾಗಿದ್ದು, ಜನ ಜೀವನ, ಕೈಗಾರಿಗೆ, ಶಿಕ್ಷಣ ಸಂಸ್ಥೆ ಸೇರಿದಂತೆ ಬಹು ತೇಕ ಎಲ್ಲಾ ಚಟುವಟಿಕೆಗಳನ್ನು ಸ್ತಬ್ಧ ಗೊಳಿಸಿದೆ. ಈ ನಡುವೆ ಅಂಗನವಾಡಿ ಮಕ್ಕಳು, ಬಾಣಂತಿ, ಗರ್ಭಿಣಿ, ಕಿಶೋರಿಯರು ಹಾಗೂ ಅಪೌಷ್ಟಿಕತೆಯಿಂದ ಬಳಲುತ್ತಿ ರುವ ಮಕ್ಕಳಿಗೆ ನೀಡಲಾಗುತ್ತಿದ್ದ ಪೌಷ್ಟಿಕ ಆಹಾರ ಪೂರೈಕೆಯಲ್ಲಿ ವ್ಯತ್ಯಯ ಉಂಟಾ ಗಿತ್ತು. ಅಂಗನವಾಡಿ ಕೇಂದ್ರದಲ್ಲೇ ಪೌಷ್ಟಿಕ ಆಹಾರ ತಯಾರಿಸಿ 6 ತಿಂಗಳಿಂದ 5 ವರ್ಷದ ಮಕ್ಕಳಿಗೆ, ಬಾಣಂತಿ ಹಾಗೂ ಗರ್ಭಿಣಿಯರಿಗೆ ಆಹಾರ ನೀಡಲಾಗು ತ್ತಿತ್ತು. ಆದರೆ ಲಾಕ್‍ಡೌನ್‍ನಿಂದಾಗಿ ಅಂಗನವಾಡಿ ಕೇಂದ್ರಗಳಿಗೂ ಬೀಗ ಬಿದ್ದಿರುವುದರಿಂದ ಫಲಾನುಭವಿ ಮಕ್ಕಳು, ಗರ್ಭಿಣಿ, ಬಾಣಂತಿಯರ ಮನೆ ಮನೆಗೆ ಹೋಗಿ ಸರ್ಕಾರ ನಿಗದಿ ಮಾಡಿರುವಷ್ಟು ದಿನಸಿ ಪದಾರ್ಥ ನೀಡಲು ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾ ಯಕಿಯರು ಮುಂದಾಗಿದ್ದಾರೆ.

ಫಲಾನುಭವಿಗಳ ಸಂಖ್ಯೆ: ರಾಜ್ಯದಲ್ಲಿ ಆಹಾರ ಸಾಮಗ್ರಿಗಳನ್ನು ನೀಡಲು ಮಕ್ಕ ಳನ್ನು 5 ವಿಭಾಗಗಳಾಗಿ ವಿಂಗಡಿಸಲಾ ಗಿದೆ. ಉಳಿದಂತೆ ಗರ್ಭಿಣಿ, ಬಾಣಂತಿ ಕಿಶೋರಿ ಹಾಗೂ ಅಪೌಷ್ಟಿಕತೆಯಿಂದ ಬಳಲು ಮಕ್ಕಳಿಗೆ ಪ್ರತ್ಯೇಕ ಪ್ರಮಾಣದಲ್ಲಿ ದಿನಸಿ ಪದಾರ್ಥ ನೀಡಲಾಗುತ್ತಿದೆ. ಮೈಸೂರು ಜಿಲ್ಲೆಯಲ್ಲಿ ಪ್ರಸ್ತುತ 6ತಿಂಗಳಿಂದ 1 ವರ್ಷದ 16,446, 1ರಿಂದ 2 ವರ್ಷದ 30,304, 2ರಿಂದ 3 ವರ್ಷದ 29,070, 3ರಿಂದ 5 ವರ್ಷದ 37,640 ಹಾಗೂ 5-6 ವರ್ಷದ 9,520 ಮಕ್ಕಳು ಸೇರಿ ದಂತೆ ಮೈಸೂರು ನಗರದಲ್ಲಿ 18,860, ಮೈಸೂರು ತಾಲೂಕಲ್ಲಿ 15,155, ಟಿ. ನರಸೀಪುರ ತಾಲೂಕಲ್ಲಿ 12,003, ಹುಣ ಸೂರು ತಾಲೂಕಲ್ಲಿ 15,546, ಹೆಚ್.ಡಿ. ಕೋಟೆ ತಾಲೂಕಲ್ಲಿ 15,341, ನಂಜನ ಗೂಡು ತಾಲೂಕಲ್ಲಿ 19,473(10831, 8642- ಬಿಳಿಗೆರೆ), ಪಿರಿಯಾಪಟ್ಟಣ ತಾಲೂಕಲ್ಲಿ 11,830, ಕೆ.ಆರ್.ನಗರ ತಾಲೂ ಕಲ್ಲಿ 11,562 ಮಕ್ಕಳು ಸೇರಿದಂತೆ ಮೈಸೂರು ಜಿಲ್ಲೆಯಲ್ಲಿ 1,19,770 ಮಕ್ಕಳಿದ್ದಾರೆ. ಅಲ್ಲದೆ 149 ಅಪೌಷ್ಟಿಕತೆಯುಳ್ಳ ಮಕ್ಕಳು, 9,341 ಗರ್ಭಿಣಿಯರು, 8,466 ಬಾಣಂತಿ, 174 ಕಿಶೋರಿಯರಿದ್ದು, ಇವರಿಗೆಲ್ಲ ಆಹಾರ ಪದಾರ್ಥ ವಿತರಿಸಲಾಗುತ್ತಿದೆ.

ಏನೇನು: ಲಾಕ್‍ಡೌನ್‍ನಿಂದ ಏಪ್ರಿಲ್ ತಿಂಗಳು ಪೂರ್ಣವಾಗಿ ಅಂಗನವಾಡಿ ಬಂದ್ ಆಗಿದ್ದರಿಂದ 25 ದಿನಕ್ಕೆ ಲೆಕ್ಕ ಹಾಕಿ ನಿಯಮಾನುಸಾರ ದಿನಸಿ ಪದಾರ್ಥ ನೀಡಲಾಗುತ್ತಿದೆ. 6 ತಿಂಗಳಿಂದ 3 ವರ್ಷದ ಮಕ್ಕಳಿಗೆ 1ಕೆಜಿ ಬೆಲ್ಲ, 100ಗ್ರಾಂ ಸಕ್ಕರೆ, 300ಗ್ರಾಂ ಹಾಲಿನ ಪುಡಿ, ಎಸ್‍ಸಿ/ಎಸ್‍ಟಿ ಮಕ್ಕಳಿಗೆ 600 ಗ್ರಾಂ ಹಾಲಿನ ಪುಡಿ, 8 ಮೊಟ್ಟೆ ಹಾಗೂ 4050 ಗ್ರಾಂ ಪುಷ್ಠಿ ಆಹಾರ ಪದಾರ್ಥ, 3 ರಿಂದ 6 ವರ್ಷದ ಮಕ್ಕಳಿಗೆ 1 ಕೆಜಿ ಕಡಲೆಕಾಳು, 400 ಗ್ರಾಂ ತೊಗರಿಬೇಳೆ, 400 ಗ್ರಾ. ಬೆಲ್ಲ, 500 ಗ್ರಾ. ಶೇಂಗಾ ಬೀಜ, 3.5 ಕೆಜಿ ಅಕ್ಕಿ, 60 ಗ್ರಾ. ಸಾಂಬರ್ ಪುಡಿ, 100 ಗ್ರಾ, ಸಕ್ಕರೆ, ಹಾಲಿನ ಪೌಡರ್ 300 ಗ್ರಾಂ,ಎಸ್‍ಸಿ/ಎಸ್‍ಟಿ ಮಕ್ಕಳಿಗೆ 600 ಗ್ರಾಂ ಹಾಲಿನ ಪುಡಿ, ಮೊಟ್ಟೆ 8 ನೀಡಲಾಗುತ್ತಿದೆ. ಗರ್ಭಿಣಿ ಹಾಗೂ ಬಾಣಂತಿಯರಿಗೆ 750 ಗ್ರಾಂ ಕಡಲೆ ಕಾಳು, 500 ಗ್ರಾಂ ತೊಗರಿಬೇಳೆ, 750 ಗ್ರಾ. ಬೆಲ್ಲ, 600 ಗ್ರಾ. ಶೇಂಗಾ ಬೀಜ, 5 ಕೆಜಿ ಅಕ್ಕಿ, 210 ಗ್ರಾ. ಸಾಂಬರ್ ಪುಡಿ, 250 ಗ್ರಾ, ಸಕ್ಕರೆ, ಹಾಲಿನ ಪೌಡರ್ 500 ಗ್ರಾಂ, 25 ಮೊಟ್ಟೆ ನೀಡಲಾಗುತ್ತಿದೆ. ಕಿಶೋರಿಯರಿಗೆ ತಲಾ 1ಕೆಜಿ ಕಡಲೆಕಾಳು, ತೊಗರಿಬೇಳೆ, 1.300 ಕೆಜಿ ಬೆಲ್ಲ, 4 ಕೆಜಿ ಅಕ್ಕಿ, ಅಪೌಷ್ಟಿಕತೆಯುಳ್ಳ ಮಕ್ಕಳಿಗೆ ತಲಾ 1ಕೆಜಿ ಕಡಲೆಕಾಳು, ತೊಗರಿಬೇಳೆ, ಬೆಲ್ಲ 500 ಗ್ರಾಂ, ಶೇಂಗಾ ಬೀಜ 600 ಗ್ರಾಂ, 7 ಕೆಜಿ ಅಕ್ಕಿ, ಸಾಂಬಾರ್ ಪೌಡರ್ 200 ಗ್ರಾಂ, ಸಕ್ಕರೆ 150 ಗ್ರಾಂ, ಹಾಲಿನ ಪುಡು 450 ಗ್ರಾಂ ಹಾಗೂ 22 ಮೊಟ್ಟೆ ನೀಡಲು ಸರ್ಕಾರ ನಿರ್ಧರಿಸಿದ್ದು, ಈಗಾ ಗಲೇ ತಾಲೂಕುವಾರು ಸಿಡಿಪಿಒ ಇಂಡೆಂಟ್ ಹಾಕಿ ಎಫ್‍ಸಿಐನಿಂದ ದಿನಸಿ ಪದಾರ್ಥ ಪಡೆದಿದ್ದಾರೆ. ಮೈಸೂರು ಜಿಲ್ಲೆಯಲ್ಲಿರುವ 2812 ಅಂಗನವಾಡಿ ಕಾರ್ಯಕರ್ತೆ ಯರು ಹಾಗೂ 2587 ಸಹಾಯಕಿಯರು ಆಹಾರ ಪದಾರ್ಥವನ್ನು ಫಲಾನುಭವಿಗಳಿಗೆ ವಿತರಿಸುವ ಕಾರ್ಯ ಆರಂಭಿಸಿದ್ದಾರೆ.

ಎಂ.ಟಿ.ಯೋಗೇಶ್‍ಕುಮಾರ್

Translate »