ಮೈಸೂರು,ಡಿ.1(ವೈಡಿಎಸ್)-ಮೈಸೂರು ಜಿಲ್ಲೆಯಲ್ಲಿ ಕೊರೊನಾ ಸೋಂಕಿನ ಪ್ರಕರಣಗಳು ಇಳಿಮುಖವಾಗುತ್ತಿದೆ. ಇದೇ ವೇಳೆ, ಕೊರೊನಾ ಸಾವಿನ ಸಂಖ್ಯೆ 1 ಸಾವಿರಕ್ಕೆ ಮುಟ್ಟಿದೆ. ಕೊರೊನಾ ಸೋಂಕಿತರು ಹೆಚ್ಚು ಸಾವನ್ನಪ್ಪಿದ ಜಿಲ್ಲೆಗಳಲ್ಲಿ ಬೆಂಗಳೂರು ನಗರ ಮೊದಲ ಸ್ಥಾನದಲ್ಲಿದ್ದರೆ, ನಂತರದ ಸ್ಥಾನದಲ್ಲಿ ಮೈಸೂರು ಜಿಲ್ಲೆ ಇದೆ. ಮಂಗಳವಾರ ಮೈಸೂರು ಜಿಲ್ಲೆಯಲ್ಲಿ 51 ಮಂದಿ ಯಲ್ಲಿ ಸೋಂಕು ದೃಢಪಟ್ಟಿದ್ದು, ಒಟ್ಟು ಸೋಂಕಿತರ ಸಂಖ್ಯೆ 50,731ಕ್ಕೆ ಏರಿದೆ. ಮಂಗಳವಾರ 75 ಮಂದಿ ಗುಣಮುಖರಾಗಿ ವಿವಿಧ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ. ಈವರೆಗೆ 49,401 ಸೋಂಕಿತರು ಗುಣಮುಖರಾಗಿದ್ದಾರೆ. ಇಂದು ಓರ್ವ ಸೋಂಕಿತ ಸಾವನ್ನಪ್ಪಿದ್ದು, ಒಟ್ಟು 1,000 ಮಂದಿ ಮೃತಪಟ್ಟಂತಾಗಿದೆ. ಇನ್ನೂ 330 ಮಂದಿಯಲ್ಲಿ ಸೋಂಕು ಸಕ್ರಿಯವಾಗಿದೆ.
ರಾಜ್ಯದ ವಿವರ: ರಾಜ್ಯದಲ್ಲಿ ಮಂಗಳವಾರ 1,330 ಮಂದಿ ಯಲ್ಲಿ ಸೋಂಕು ಪತ್ತೆಯಾಗಿದ್ದು, 886 ಮಂದಿ ಗುಣಮುಖ ರಾಗಿ ಬಿಡುಗಡೆಯಾಗಿದ್ದಾರೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 8,86,227ಕ್ಕೆ ಏರಿಕೆಯಾಗಿದೆ. ಈವರೆಗೆ 8,50,707 ಮಂದಿ ಬಿಡುಗಡೆಯಾಗಿದ್ದಾರೆ. ಇನ್ನೂ 23,709 ಸಕ್ರಿಯ ಪ್ರಕರಣಗಳಿವೆ.
ಇಂದು 14 ಸೋಂಕಿತರು ಸಾವನ್ನಪ್ಪಿದ್ದು, ಇದುವರೆಗೆ ರಾಜ್ಯದಲ್ಲಿ ಕೊರೊನಾಗೆ 11,792 ಮಂದಿ ಮೃತಪಟ್ಟಂತಾಗಿದೆ. ಬಾಗಲ ಕೋಟೆಯಲ್ಲಿ 11, ಬಳ್ಳಾರಿ 7, ಬೆಳಗಾವಿ 27, ಬೆಂಗಳೂರು ಗ್ರಾಮಾಂ ತರ 38, ಬೆಂಗಳೂರು ನಗರ 758, ಬೀದರ್ 1, ಚಾಮರಾಜ ನಗರ 10, ಚಿಕ್ಕಬಳ್ಳಾಪುರ 12, ಚಿಕ್ಕಮಗಳೂರು 12, ಚಿತ್ರದುರ್ಗ 33, ದಕ್ಷಿಣ ಕನ್ನಡ 36, ದಾವಣಗೆರೆ 14, ಧಾರವಾಡ 10, ಗದಗ 9, ಹಾಸನ 50, ಹಾವೇರಿ 9, ಕಲಬುರಗಿ 8, ಕೊಡಗು 9, ಕೋಲಾರ 25, ಕೊಪ್ಪಳ 8, ಮಂಡ್ಯ 40, ಮೈಸೂರು 51, ರಾಯಚೂರು 17, ರಾಮನಗರ 5, ಶಿವಮೊಗ್ಗ 12, ತುಮಕೂರು 49, ಉಡುಪಿ 14, ಉತ್ತರಕನ್ನಡ 31, ವಿಜಯಪುರ 12, ಯಾದಗಿರಿಯಲ್ಲಿ ಸೋಂಕಿನ 10 ಪ್ರಕರಣಗಳು ಮಂಗಳವಾರ ಪತ್ತೆಯಾಗಿವೆ.