ಎಲ್ಲರಿಗೂ ಕೊರೊನಾ ಲಸಿಕೆ ಅಗತ್ಯವಿಲ್ಲ: ಕೇಂದ್ರ ಸರ್ಕಾರ
ಮೈಸೂರು

ಎಲ್ಲರಿಗೂ ಕೊರೊನಾ ಲಸಿಕೆ ಅಗತ್ಯವಿಲ್ಲ: ಕೇಂದ್ರ ಸರ್ಕಾರ

December 2, 2020

ನವದೆಹಲಿ, ಡಿ.1- ದೇಶದ ಎಲ್ಲಾ ಜನರಿಗೂ ಕೋವಿಡ್ ಲಸಿಕೆ ನೀಡುವುದಾಗಿ ಹೇಳಿಲ್ಲ ಮತ್ತು ಎಲ್ಲರಿಗೂ ಅದರ ಅಗತ್ಯವೂ ಇಲ್ಲ ಎಂದು ಕೇಂದ್ರ ಸರಕಾರ ಮಂಗಳವಾರ ಸ್ಪಷ್ಟಪಡಿಸಿದೆ. ನವದೆಹಲಿಯಲ್ಲಿ ಮಂಗಳವಾರ ಮಾತನಾಡಿದ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ ಕಾರ್ಯದರ್ಶಿ ರಾಜೇಶ್ ಭೂಷಣ್, ದೇಶದ ಎಲ್ಲರಿಗೂ ಲಸಿಕೆ ನೀಡುವ ಬಗ್ಗೆ ಸರಕಾರ ಎಲ್ಲಿಯೂ ಪ್ರಸ್ತಾಪ ಮಾಡಿಲ್ಲ. ವೈಜ್ಞಾನಿಕವಾಗಿರುವ ಇಂಥ ವಿಚಾರಗಳ ಬಗ್ಗೆ ವಾಸ್ತವಿಕ ಅಂಶಗಳ ಸಹಿತ ಮಾತನಾಡುವುದು ಸೂಕ್ತ ಎಂದು ಹೇಳಿದ್ದಾರೆ. ದೇಶದ ಎಲ್ಲರಿಗೂ ಲಸಿಕೆ ನೀಡುವ ಅಗತ್ಯ ಇಲ್ಲ ಎಂದೂ ಅವರು ಹೇಳಿದ್ದಾರೆ. ನಮ್ಮ ಉದ್ದೇಶ ವೈರಸ್‍ನ ಸರಣಿಯನ್ನು ಮುರಿ ಯುವುದು. ಆಯ್ದ ಕೆಲವು ಮಂದಿಗೆ ಲಸಿಕೆ ನೀಡಿ, ಸೋಂಕು ಹಬ್ಬುವುದನ್ನು ತಡೆದರೆ ಎಲ್ಲರಿಗೂ ಅದನ್ನು ನೀಡುವ ಅಗತ್ಯವೇ ಬೀಳುವುದಿಲ್ಲ ಎಂದು ಐಸಿಎಂಆರ್ ಮಹಾ ನಿರ್ದೇಶಕ ಬಲರಾಮ ಭಾರ್ಗವ ಕೂಡ ಹೇಳಿದ್ದಾರೆ. ಲಸಿಕೆ ಪ್ರಯೋಗ ವಿವಾದ ಬಗ್ಗೆ ಪ್ರತಿಕ್ರಿಯೆ ನೀಡಿರುವ ರಾಜೇಶ್ ಭೂಷಣ್, ಇದರಿಂದ ಲಸಿಕೆ ಮಾರುಕಟ್ಟೆಗೆ ಬರುವ ಪ್ರಕ್ರಿಯೆಗೆ ಬಾಧಕವಾಗುವುದಿಲ್ಲ ಎಂದರು. ಪ್ರಯೋಗಕ್ಕೆ ಒಳಗಾಗುವವರು ಮೊದಲು ಒಪ್ಪಂದಕ್ಕೆ ಸಹಿ ಹಾಕಬೇಕು. ಅದರನ್ವಯ ಪ್ರತಿಕೂಲ ಪರಿಣಾಮಗಳನ್ನು ಎದುರಿಸಲು ಸಿದ್ಧರಾಗಬೇಕು ಎಂದು ಭೂಷಣ್ ಹೇಳಿದ್ದಾರೆ.

 

 

 

Translate »