ಪುಟ್ಟಣ್ಣ ಕಣಗಾಲ್ ಗರಡಿಯಲ್ಲಿ ಬೆಳೆದವರೇ ಅವರನ್ನು ಮರೆತಿದ್ದಾರೆ
ಮೈಸೂರು

ಪುಟ್ಟಣ್ಣ ಕಣಗಾಲ್ ಗರಡಿಯಲ್ಲಿ ಬೆಳೆದವರೇ ಅವರನ್ನು ಮರೆತಿದ್ದಾರೆ

December 2, 2020

ಮೈಸೂರು, ಡಿ.1(ಆರ್‍ಕೆಬಿ)- ಚಲನಚಿತ್ರ ನಿರ್ದೇಶಕ ಎಸ್.ಆರ್.ಪುಟ್ಟಣ್ಣ ಕಣಗಾಲ್ ಅವರ ಗರಡಿಯಲ್ಲಿ ಬೆಳೆದು ಚಿತ್ರರಂಗದಲ್ಲಿ ಹೆಸರು ಮಾಡಿದವರು ಕಿಂಗ್ ಮೇಕರ್ ಪುಟ್ಟಣ್ಣನವರನ್ನು ಮರೆತಿದ್ದಾರೆ ಎಂದು ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಆರ್.ರಘು ಕೌಟಿಲ್ಯ ಇಂದಿಲ್ಲಿ ಬೇಸರ ವ್ಯಕ್ತಪಡಿಸಿದರು.

ಕನ್ನಡ ಚಿತ್ರರಂಗದ ಚಿತ್ರಬ್ರಹ್ಮ ರಾಷ್ಟ್ರಪ್ರಶಸ್ತಿ ವಿಜೇತ ಚಿತ್ರನಿರ್ದೇಶಕ ಎಸ್.ಆರ್.ಪುಟ್ಟಣ್ಣ ಕಣಗಾಲ್ ಅವರ 87ನೇ ಜನ್ಮದಿನೋತ್ಸವದ ಅಂಗವಾಗಿ ಪರಿವರ್ತನಂ ಟ್ರಸ್ಟ್ ಮೈಸೂರಿನ ಚಾಮುಂಡಿಪುರಂ ಅಪೂರ್ವ ಸಭಾಂಗಣದಲ್ಲಿ ಏರ್ಪಡಿಸಿದ್ದ `ಪುಟ್ಟಣ್ಣ ನೆನಪಿ ನಂಗಳ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಪೌರಾಣಿಕ ಮತ್ತು ಧಾರ್ಮಿಕ ಕತೆಗಳ ಆಧಾರಿತ ಚಿತ್ರಗಳನ್ನು ನೋಡುತ್ತಿದ್ದ ಪ್ರೇಕ್ಷಕರನ್ನು ಸಾಮಾಜಿಕ ಚಿತ್ರಗಳನ್ನು ನೋಡಲು ಚಿತ್ರಮಂದಿರಗಳ ಮುಂದೆ ಸಾಲುಗಟ್ಟಿ ನಿಲ್ಲುವಂತೆ ಮಾಡಿದವರೇ ಪುಟ್ಟಣ್ಣ ಕಣಗಾಲ್. ಮೊದಲಿಗೆ ಬಿ.ಆರ್.ಪಂತುಲು ಅವರ ಬಳಿ ಮೆಕ್ಯಾನಿಕ್ ಮತ್ತು ನಿರ್ದೇಶಕರಾಗಿ ಕೆಲಸಕ್ಕೆ ಸೇರಿ ನಂತರ ಡೈಲಾಗ್ ಡೆಲಿವರಿ ಸಹ ನಿರ್ದೇಶಕ ರಾಗಿ ಮುಂದುವರಿದು, ಅತ್ಯುತ್ತಮ ಚಿತ್ರ ನಿರ್ದೇಶಕ ಎಂದು ಇಡೀ ದೇಶವೇ ಗಮನಿಸುವಂತೆ ಮಾಡಿ, ಬೆಳೆದು ನಿಂತವರು ಎಂದು ಹೇಳಿದರು.

ಕಣಗಾಲ್ ಪ್ರಭಾಕರ್ ಶಾಸ್ತ್ರಿ ಮತ್ತು ಪುಟ್ಟಣ್ಣ ಕಣ ಗಾಲ್ ಎಂದರೆ ಡಾ.ರಾಜ್‍ಕುಮಾರ್ ಅವರಿಗೆ ಎಲ್ಲಿಲ್ಲದ ಪ್ರೀತಿ. ಗುರು ಸ್ಥಾನದಲ್ಲಿ ಭಕ್ತಿಯಿಂದ ಕಾಣುತ್ತಿದ್ದರು. ಆದರೆ ಅವರ ಗರಡಿಯಲ್ಲೇ ಬೆಳೆದು ಬಂದವರು ಇಂದು ಅವರನ್ನೇ ಮರೆತಿದ್ದಾರೆ ಎಂದು ಬೇಸರದಿಂದ ನುಡಿದರು.

ಪುಟ್ಟಣ್ಣ ಕಣಗಾಲರು ತಮ್ಮ ಚಿತ್ರಗಳಲ್ಲಿ ಮಹಿಳೆ ಯರಿಗೂ ಪ್ರಾಧಾನ್ಯತೆ ನೀಡಿದ್ದರು. ನಾಯಕಿಯರನ್ನೇ ಅವರು ಹೀರೋ ಆಗಿಸಿ ಸಿನಿಮಾಗಳನ್ನು ಮಾಡಿ ದ್ದಾರೆ. ಪರಿಪೂರ್ಣತೆ ಬರುವವರೆಗೂ ಅವರು ಯಾವುದೇ ವಿಷಯದಲ್ಲಿ ರಾಜೀ ಆಗುತ್ತಿರಲಿಲ್ಲ.

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಹೆಚ್.ವಿ.ರಾಜೀವ್ ಮಾತನಾಡಿ, ಪಾತ್ರಕ್ಕೆ ಜೀವ ತುಂಬುವ ಕಲೆ ಚೆನ್ನಾಗಿ ತಿಳಿದಿದ್ದ ಪುಟ್ಟಣ್ಣನವರ ಗರಡಿ ಯಲ್ಲಿ ವಿಷ್ಣುವರ್ಧನ್, ಅಂಬರೀಶ್, ಶ್ರೀನಾಥ್ ಇನ್ನಿತರ ಅನೇಕರು ಅತ್ಯುತ್ತಮ ನಟರಾಗಿ ಹೊರ ಹೊಮ್ಮಿ ದರು. ಅವರ ಹಾದಿಯಲ್ಲೇ ಸಾಗಿದ್ದರೆ ಕನ್ನಡ ಚಿತ್ರ ರಂಗದ ವ್ಯಾಪ್ತಿ ಇನ್ನಷ್ಟು ವಿಸ್ತಾರವಾಗುತ್ತಿತ್ತು. ತವರೂರು ಮೈಸೂರು ಚಿತ್ರರಂಗದಲ್ಲಿ ಉತ್ತುಂಗಕ್ಕೇರಲು ಪುಟ್ಟಣ್ಣ ನವರ ಪಾತ್ರ ಪ್ರಮುಖವಾದದ್ದು ಎಂದು ಹೇಳಿದರು.

ಕಾಂಗ್ರೆಸ್ ಯುವ ಮುಖಂಡ ಎನ್.ಎಂ.ನವೀನ್ ಕುಮಾರ್ ಮಾತನಾಡಿ, ಕನ್ನಡ ಚಿತ್ರರಂಗವು ಬಹು ಭಾಷಾ ಚಿತ್ರಗಳ ಮುಂದೆ ಅಸ್ತಿತ್ವಕ್ಕಾಗಿ ತಡಕಾಡು ತ್ತಿದ್ದಾಗ ಚಿತ್ರ ನಿರ್ದೇಶಕ ಭಾರತ ಚಿತ್ರರಂಗವೇ ಕನ್ನಡ ಭಾಷೆಯತ್ತ ಬೊಟ್ಟು ಮಾಡಿ ತೋರಿಸುವಂತೆ ಮಾಡಿದವರು ಪುಟ್ಟಣ್ಣ ಕಣಗಾಲ್. ನೂರಾರು ಕಲಾವಿದರನ್ನು ಚಿತ್ರರಂಗಕ್ಕೆ ತಂದವರು ಎಂದರು.

ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ವೈ.ಡಿ.ರಾಜಣ್ಣ ಮಾತನಾಡಿ, ನಾಯಕರ ಕಾಲ್‍ಶೀಟ್, ಬ್ಯಾನರ್ ಪ್ರಭಾವದ ಮೇಲೆ ಚಿತ್ರಗಳ ಪ್ರದರ್ಶನ, ನಿರ್ಮಾಣ ಕಾಣುತ್ತಿದ್ದ ಸಂದರ್ಭದಲ್ಲಿ ಒಬ್ಬ ನಿರ್ದೇಶಕನ ಮೇಲೆ ಅವಲಂಬಿತವಾಗಿ ಚಿತ್ರಗಳು ಶತದಿನ ಪ್ರದರ್ಶನ ಕಾಣುತ್ತಿದ್ದ ಕಾಲವೆಂದರೆ ಅದು ಪುಟ್ಟಣ್ಣ ಕಣಗಾಲರ ವಿಶೇಷತೆ. ಮೈಸೂರು ದಸರಾ ನವರಾತ್ರಿ, ಮಲೆನಾಡು, ಚಿತ್ರದುರ್ಗದ ಬೆಟ್ಟದಿಂದ ಕನ್ಯಾಕುಮಾರಿ, ಮಾನಸ ಸರೋವರವರೆಗಿನ ಸ್ಥಳಗಳು ಪುಟ್ಟಣ್ಣನವರು ಚಿತ್ರಿಸಿದ ಪರಿಣಾಮ ಪ್ರವಾಸಿ ಕ್ಷೇತ್ರ ವಾಗಿ ಜನಸಾಮಾನ್ಯರನ್ನು ಆಕರ್ಷಿಸಲು ಕಾರಣ ವಾಯಿತು ಎಂದರು.
ಕಾರ್ಯಕ್ರಮದಲ್ಲಿ ಮುಡಾ ಸದಸ್ಯೆ ಲಕ್ಷಿದೇವಿ, ಕೆಎಂಪಿಕೆ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ವಿಕ್ರಂ ಅಯ್ಯಂ ಗಾರ್, ಪರಿವರ್ತನಂ ಟ್ರಸ್ಟ್ ಅಧ್ಯಕ್ಷ ವಿನಯ್ ಕಣ ಗಾಲ್, ಯುವ ಮುಖಂಡರಾದ ಅಜಯ್ ಶಾಸ್ತ್ರಿ, ಉದ್ಯಮಿ ಅಪೂರ್ವ ಸುರೇಶ್, ಕಡಕೊಳ ಜಗದೀಶ್, ಜೀವಧಾರ ರಕ್ತನಿಧಿ ಕೇಂದ್ರದ ನಿರ್ದೇಶಕ ಗಿರೀಶ್, ರಾಕೇಶ್ ಕುಂಚಿಟಿಗ, ಎಸ್.ಎನ್.ರಾಜೇಶ್, ರಂಗ ನಾಥ್, ಶ್ರೀಕಾಂತ್ ಕಶ್ಯಪ್, ಹರೀಶ್ ನಾಯ್ಡು, ಸುಚೇಂದ್ರ, ಗೋಪಾಲ್ ಇನ್ನಿತರರು ಉಪಸ್ಥಿತರಿದ್ದರು.

Translate »