ಮೈಸೂರು,ಡಿ.1(ಆರ್‍ಕೆ)-ತಂತ್ರಜ್ಞಾನ ಬೆಳೆದಂತೆ ಕಲಿಕಾ ಪ್ರಕ್ರಿಯೆಯನ್ನು ಆಧು ನೀಕರಣಗೊಳಿಸಿ ಸರ್ಕಾರಿ ಶಾಲೆಗಳ ಕೊಠಡಿ ಗಳನ್ನು ಸ್ಮಾರ್ಟ್ ಆಗಿಸಲು ಸಾರ್ವಜನಿಕ ಶಿಕ್ಷಣ ಇಲಾಖೆ ಮುಂದಾಗಿದೆ. ವಿದ್ಯಾರ್ಥಿ ಗಳ ಸಂಖ್ಯೆಗನುಗುಣವಾಗಿ ಮೈಸೂರು ಜಿಲ್ಲೆಯ ಆಯ್ದ 38 ಸರ್ಕಾರಿ ಪ್ರೌಢಶಾಲೆಗಳಿಗೆ ಪ್ರೊಜೆ ಕ್ಟರ್ ಸೇರಿದಂತೆ ಅತ್ಯಾಧುನಿಕ ಸಲಕರಣೆ ಗಳನ್ನು ಪೂರೈಸಲು ತೀರ್ಮಾನಿಸಿದೆ.
ಮೈಸೂರು ಜಿಲ್ಲೆಯಲ್ಲಿರುವ 232 ಸರ್ಕಾರಿ ಹೈಸ್ಕೂಲ್‍ಗಳ ಪೈಕಿ ಮೊದಲ ಹಂತದಲ್ಲಿ ಅತೀ ಹೆಚ್ಚು ವಿದ್ಯಾರ್ಥಿಗಳಿರುವ 38 ಶಾಲೆ ಗಳಿಗೆ ಪ್ರೊಜೆಕ್ಟರ್‍ಗಳನ್ನು ಪೂರೈಸಿ ಮಕ್ಕಳಿಗೆ ಸ್ಮಾರ್ಟ್ ಟೀಚಿಂಗ್ ಮೂಲಕ ಪಾಠ ಮಾಡಲು ಸಾರ್ವಜನಿಕರ ಶಿಕ್ಷಣ ಇಲಾಖೆ ಉಪನಿರ್ದೇಶಕ ಪಾಂಡುರಂಗ ತಿಳಿಸಿದ್ದಾರೆ.
ಬೋಧನಾ ಸಾಮಗ್ರಿಗಳನ್ನು ಖರೀದಿ ಸುವ ಯೋಜನೆಯಡಿ ಇಲಾಖೆಯು 1 ಕೋಟಿ ರೂ.ಗಳನ್ನು ಮಂಜೂರು ಮಾಡಿದ್ದು, ಆ ಅನುದಾನದಲ್ಲಿ ಆಧುನಿಕ ತಂತ್ರಜ್ಞಾನದ ಶೈಕ್ಷಣಿಕ ಉಪಕರಣವನ್ನು ಒದಗಿಸಲು ಅವಕಾಶವಿರುವುದರಿಂದ ಸ್ಮಾರ್ಟ್ ಕ್ಲಾಸ್ ರೂಂ ಆಗಿ ಪರಿವರ್ತಿಸಲು ಈಗಾಗಲೇ ಕ್ರಮ ವಹಿಸುತ್ತಿರುವುದಾಗಿ ತಿಳಿಸಿದರು.
ಬೋಧನಾ ವಿಧಾನವನ್ನು ತಂತ್ರಜ್ಞಾನ ಬಳಸಿ ಮತ್ತಷ್ಟು ಆಧುನೀಕರಣ ಮಾಡುವುದು ಸರ್ಕಾರದ ಉದ್ದೇಶವಾಗಿರುವುದರಿಂದ ಪ್ರೊಜೆಕ್ಟರ್‍ಗಳು ಶಿಕ್ಷಕರಿಗೆ ಹಾಗೂ ವಿದ್ಯಾರ್ಥಿ ಗಳಿಗೆ ಅನುಕೂಲವಾಗುತ್ತವೆ. ಇದರಿಂದ ವಿಜ್ಞಾನ ಮತ್ತು ಗಣಿತ ವಿಷಯಗಳಲ್ಲಿ ಪಾಠ ಮಾಡಲು ಸಹಾಯವಾಗುತ್ತದೆ ಎಂದರು.