ವಿನೋಬಾ ರಸ್ತೆ ಕಾಮಗಾರಿ ಕುರಿತು ನಗರಪಾಲಿಕೆ ಸದಸ್ಯೆ ಪ್ರಮೀಳಾ ಭರತ್ ವಿರುದ್ಧ ಮಾಜಿ ಸದಸ್ಯ ಪ್ರಶಾಂತ್‍ಗೌಡ ಟೀಕೆ
ಮೈಸೂರು

ವಿನೋಬಾ ರಸ್ತೆ ಕಾಮಗಾರಿ ಕುರಿತು ನಗರಪಾಲಿಕೆ ಸದಸ್ಯೆ ಪ್ರಮೀಳಾ ಭರತ್ ವಿರುದ್ಧ ಮಾಜಿ ಸದಸ್ಯ ಪ್ರಶಾಂತ್‍ಗೌಡ ಟೀಕೆ

December 2, 2020

ಮೈಸೂರು, ಡಿ.1(ಆರ್‍ಕೆಬಿ)- ಮೈಸೂರಿನ ವಿನೋಬಾ ರಸ್ತೆಯಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ ಕುರಿತಂತೆ ನಗರಪಾಲಿಕೆ ಸದಸ್ಯೆ ಪ್ರಮೀಳಾ ಭರತ್ ಅವರು ಕಾಂಗ್ರೆಸ್ ಮುಖಂಡರ ವಿರುದ್ಧ ಸುಳ್ಳು ಆರೋಪ ಮಾಡಿದ್ದಾರೆ ಎಂದು ನಗರಪಾಲಿಕೆ ಮಾಜಿ ಸದಸ್ಯ ಪ್ರಶಾಂತ್‍ಗೌಡ ಟೀಕಿಸಿದ್ದಾರೆ.

ಮೈಸೂರು ಪತ್ರಕರ್ತರ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿ, ಪಾದಚಾರಿ ಮಾರ್ಗವನ್ನು ಡಾಂಬರ್ ಅಥವಾ ಕಾಂಕ್ರಿಟ್‍ನಿಂದ ವೈಜ್ಞಾನಿಕವಾಗಿ ನಿರ್ಮಿಸುವಂತೆ ಮನವಿ ಮಾಡಿದ್ದ ಕಾಂಗ್ರೆಸ್ ಮುಖಂಡರ ವಿರುದ್ಧ ಪ್ರಮೀಳಾ ಭರತ್ ಸುಳ್ಳು ಆರೋಪ ಮಾಡಿದ್ದಾರೆ. ವಿನೋಬಾ ರಸ್ತೆಯಲ್ಲಿ ಒಂದು ಕಡೆ 2.5 ಅಡಿ, ಮತ್ತೊಂದು ಕಡೆ 1.5 ಅಡಿಯಲ್ಲಿ ಟೈಲ್ಸ್‍ನಿಂದ ಪಾದಚಾರಿ ಮಾರ್ಗ ನಿರ್ಮಿಸಲಾಗುತ್ತಿರುವುದು ದ್ವಿಚಕ್ರ ವಾಹನ ನಿಲ್ಲಿಸುವವರಿಗೆ ಹಾಗೂ ಜನರ ಓಡಾಟಕ್ಕೆ ತೊಂದರೆಯಾಗುತ್ತದೆ. ಹಾಗಾಗಿ ವೈಜ್ಞಾನಿಕವಾಗಿ ಕಾಮಗಾರಿ ನಡೆಸುವಂತೆ ಒತ್ತಾಯಿಸಿ ಪ್ರತಿಭಟನೆ ಮಾಡಿದ್ದೇವೆ. ಆದರೆ ಕಾಂಗ್ರೆಸ್ ಕಾರ್ಯಕರ್ತರು ದುರುದ್ದೇಶದಿಂದ ಕಾಮಗಾರಿ ವಿರೋಧಿಸುತ್ತಿ ದ್ದಾರೆಂಬ ಅವರ ಆರೋಪದಲ್ಲಿ ಹುರುಳಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸುದ್ದಿಗೋಷ್ಠಿಯಲ್ಲಿ ಮಾಜಿ ಉಪ ಮೇಯರ್ ಆರ್.ಪುಷ್ಪವಲ್ಲಿ, ಮಂಜು ಇದ್ದರು.

Translate »