ಕೊರೊನಾ ಎಫೆಕ್ಟ್: ಚಾಮುಂಡೇಶ್ವರಿ ದೇವಾಲಯಕ್ಕೆ ಮೂರೇ ತಿಂಗಳಲ್ಲಿ 8.36 ಕೋಟಿ ರೂ.ನಷ್ಟ
ಮೈಸೂರು

ಕೊರೊನಾ ಎಫೆಕ್ಟ್: ಚಾಮುಂಡೇಶ್ವರಿ ದೇವಾಲಯಕ್ಕೆ ಮೂರೇ ತಿಂಗಳಲ್ಲಿ 8.36 ಕೋಟಿ ರೂ.ನಷ್ಟ

July 20, 2020

ಮೈಸೂರು, ಜು.19- ಜಗತ್ತಿನ ಹಲವು ರಾಷ್ಟ್ರಗಳನ್ನು ತಲ್ಲಣಗೊಳಿಸಿ ಆರ್ಥಿಕ ಕ್ಷೇತ್ರ ವನ್ನು ತಲ್ಲಣಗೊಳಿಸಿರುವ ಮಹಾಮಾರಿ ಕೊರೊನಾ ಧಾರ್ಮಿಕ ಕ್ಷೇತ್ರದ ಮೇಲೂ ದುಷ್ಪರಿಣಾಮ ಬೀರಿದೆ. ಪ್ರಸಿದ್ಧ ಧಾರ್ಮಿಕ ಹಾಗೂ ಪ್ರವಾಸಿ ತಾಣಗಳಲ್ಲಿ ಮುಂಚೂಣಿ ಸ್ಥಾನ ಪಡೆದಿರುವ ಚಾಮುಂಡಿಬೆಟ್ಟ ದೇವಾ ಲಯದ ಆದಾಯ ಗಳಿಕೆಯಲ್ಲಿ ಮೂರೇ ತಿಂಗಳಲ್ಲಿ 8.36 ಕೋಟಿ ರೂ. ಕುಸಿತ ಕಂಡಿದೆ.

ದೇಶ, ವಿದೇಶದ ಪ್ರವಾಸಿಗರು ಹಾಗೂ ಭಕ್ತರನ್ನು ಸೂಜಿಗಲ್ಲಂತೆ ಸೆಳೆಯುವ ಮೈಸೂ ರಿನ ಚಾಮುಂಡಿಬೆಟ್ಟ ಶಕ್ತಿ ದೇವಿಯ ಆರಾ ಧನೆಯ ಧಾರ್ಮಿಕ ಕೇಂದ್ರವಾಗಿಯೂ ಹಾಗೂ ಪ್ರವಾಸಿ ತಾಣವೂ ಆಗಿದೆ. ಧಾರ್ಮಿಕ ವಾಗಿ ಕ್ಷೇತ್ರವಾಗಿರುವ ಹಿನ್ನೆಲೆಯಲ್ಲಿ ಹೊರ ರಾಜ್ಯ ಹಾಗೂ ವಿವಿಧ ಜಿಲ್ಲೆಗಳಿಂದ ಅಪಾರ ಸಂಖ್ಯೆಯಲ್ಲಿ ಭಕ್ತರು ಚಾಮುಂಡಿಬೆಟ್ಟಕ್ಕೆ ಬರುವ ಸಂಪ್ರದಾಯ ಹೊಂದಿದ್ದರೆ, ಮೈಸೂ ರಿನ ಪ್ರವಾಸಿ ತಾಣವನ್ನು ನೋಡಲು ಬರುವ ಸಾವಿರಾರು ಪ್ರವಾಸಿಗರೂ ಬೆಟ್ಟದ ಸೌಂದರ್ಯ ಕಣ್ತುಂಬಿಕೊಳ್ಳಲು ಬರುವ ವಾಡಿಕೆಯಿದೆ. ಆದರೆ ಈ ಬಾರಿ ಕೊರೊನಾ ಭಕ್ತರು ಹಾಗೂ ಪ್ರವಾಸಿಗರ ಪ್ರವೇಶಕ್ಕೆ ತಡೆಯೊಡ್ಡಿದೆ. ಇದರಿಂದ ಬೆಟ್ಟದ ದೇವಾ ಲಯಕ್ಕೆ ಸಂಗ್ರಹವಾಗುತ್ತಿದ್ದ ಆದಾಯಕ್ಕೆ ಭಾರೀ ಪೆಟ್ಟು ಬಿದ್ದಿದೆ. ಬೆಟ್ಟಕ್ಕೆ ಬಂದ ಭಕ್ತರು ನಾಡದೇವಿಗೆ ಚಾಮುಂಡೇಶ್ವರಿ ದರ್ಶನ ಪಡೆದು, ಹುಂಡಿಗೆ ಕಾಣಿಕೆ ಹಾಕುವ ಸಂಪ್ರ ದಾಯ ಹೊಂದಿದ್ದರು. ಇದರಿಂದ ಅಪಾರ ಪ್ರಮಾಣದ ಆದಾಯ ಸಂಗ್ರಹವಾಗು ತ್ತಿತ್ತು. ಈ ಬಾರಿ ಮಾರ್ಚ್‍ನಿಂದ ಜುಲೈ ವರೆಗೂ ದೇವಾಲಯದಲ್ಲಿ ಆದಾಯ ಸಂಗ್ರಹದಲ್ಲಿ ಕುಸಿತ ಕಂಡಿದೆ.

ಆದಾಯದಲ್ಲಿ 8,36,15,574 ರೂ. ಕುಸಿತ: ಫೆಬ್ರವರಿ ಅಂತ್ಯ ಹಾಗೂ ಮಾರ್ಚ್ ಮೊದಲ ವಾರದಲ್ಲಿ ಕೊರೊನಾ ಹಾವಳಿ ದೇಶದಲ್ಲಿ ಹೆಚ್ಚಾಯಿತು. ಉತ್ತರದಿಂದ ದಕ್ಷಿಣಕ್ಕೂ ವೇಗವಾಗಿ ಪಸರಿಸಿದ ಹಿನ್ನೆಲೆ ಯಲ್ಲಿ ಮಾ.24ರಿಂದ ಲಾಕ್‍ಡೌನ್ ಮಾಡ ಲಾಯಿತು. ಆದರೆ ಫೆಬ್ರವರಿಯಿಂದಲೇ ಮೈಸೂರಿಗೆ ಪ್ರವಾಸಿಗರ ಆಗಮನ ಕ್ಷೀಣಿ ಸಿತ್ತು. ಲಾಕ್‍ಡೌನ್ ಹಿನ್ನೆಲೆ ಚಾಮುಂಡಿ ಬೆಟ್ಟದ ಆದಾಯ ಗಣನೀಯ ಪ್ರಮಾಣದಲ್ಲಿ ಕುಸಿತ ಕಂಡಿದೆ. ಕೇವಲ ಮೂರೇ ತಿಂಗಳಲ್ಲಿ 8,36,15,574 ರೂ. ಕ್ಷೀಣಿಸಿದೆ. ಮಾ.22 ರಿಂದ ಜೂನ್‍ವರೆಗೂ ಭಕ್ತರು ಹಾಗೂ ಪ್ರವಾಸಿಗರು ದೇವಾಲಯಕ್ಕೆ ಪ್ರವೇಶಿಸಲು ನಿರ್ಬಂಧ ಹೇರಲಾಗಿತ್ತು. ಇದರಿಂದ ದೇವಾಲಯದ ಹುಂಡಿ(ಗೋಲಕ)ಯಲ್ಲಿ ಸಂಗ್ರಹವಾಗುತ್ತಿದ್ದ ಮೊತ್ತಕ್ಕೆ ಕೊರೊನಾ ಮಹಾಮಾರಿ ಕತ್ತರಿ ಹಾಕಿದೆ.

2019ರ ಏಪ್ರಿಲ್ ತಿಂಗಳು 1,44, 78,219 ದೇವಾಲಯದಲ್ಲಿ ಆದಾಯ ಸಂಗ್ರಹವಾಗಿತ್ತು. ಆದರೆ 2020ರ ಏಪ್ರಿಲ್‍ನಲ್ಲಿ ಕೇವಲ 1,75,841 ರೂ. ಸಂಗ್ರಹವಾಗಿದ್ದು, 1,43, 02,378 ಕಳೆದ ಸಾಲಿಗಿಂದ ಕಡಿಮೆ ಯಾಗಿದೆ. ಕಳೆದ ಮೇ ತಿಂಗಳಲ್ಲಿ 2,81,75, 921 ರೂ. ಈ ಸಾಲಿನಲ್ಲಿ 9,08,433 ರೂ. (2,72,67,488 ರೂ. ಕೊರತೆ) ಹಾಗೂ ಕಳೆದ ಜೂನ್‍ನಲ್ಲಿ 4,29,61,173 ರೂ. ಸಂಗ್ರಹವಾಗಿತ್ತು. ಈ ಸಾಲಿನ ಜೂನ್‍ನಲ್ಲಿ ಕೇವಲ 9,15,465 ರೂ. ಸಂಗ್ರಹವಾಗಿದ್ದು, 4,20,45,708 ರೂ. ಆದಾಯ ಕಡಿಮೆ ಯಾಗಿದೆ. ಈ 3 ತಿಂಗಳ ಅಂಕಿಅಂಶವನ್ನು ಅವಲೋಕಿಸಿದಾಗ ಕಳೆದ ಸಾಲಿನಲ್ಲಿ (3 ತಿಂಗಳು) 8,56,15,313 ರೂ. ಸಂಗ್ರಹ ವಾಗಿತ್ತು. ಈ ಸಾಲಿನಲ್ಲಿ 19,99,739 ರೂ. ಸಂಗ್ರಹವಾಗಿದೆ. ಒಟ್ಟಾರೆ 8,36,15,574 ರೂ. ಆದಾಯ ಕಡಿಮೆಯಾದಂತಾಗಿದೆ. ಪ್ರಸ್ತುತ 3 ತಿಂಗಳು ಸಂಗ್ರಹವಾಗಿರುವ ಆದಾಯ ವನ್ನು ಭಕ್ತರು ಆನ್‍ಲೈನ್ ಹಾಗೂ ಎಂಒ ಮೂಲಕ ಕಾಣಿಕೆ ನೀಡಿರುವ ಹಾಗೂ ಎಫ್‍ಡಿ ಮೇಲಿನ ಬಡ್ಡಿಯಿಂದ ಸಂಗ್ರಹ ವಾದ ಆದಾಯವಾಗಿದೆ.

ಜುಲೈನಲ್ಲಿ ತೀರಾ ಕುಸಿತ: ಪ್ರತಿವರ್ಷ ಜುಲೈ ತಿಂಗಳಲ್ಲಿ ಚಾಮುಂಡೇಶ್ವರಿ ದೇವಾ ಲಯಕ್ಕೆ ಆದಾಯ ದಾಖಲೆ ಪ್ರಮಾಣ ದಲ್ಲಿ ಹರಿದು ಬರುತ್ತಿತ್ತು. ಆದರೆ ಈ ವರ್ಷ ಆದಾಯದಲ್ಲಿ ಭಾರೀ ಪ್ರಮಾಣದ ಕುಸಿತ ಕಂಡಿದೆ. ಆಷಾಢ ಮಾಸದ ಶುಕ್ರವಾರ, ಮಂಗಳವಾರ ಹಾಗೂ ವರ್ಧಂತಿ ಮಹೋ ತ್ಸವದ ದಿನದಂದು ಸಾಗರೋಪಾದಿಯಲ್ಲಿ ಬೆಟ್ಟಕ್ಕೆ ಬರುತ್ತಿದ್ದ ಭಕ್ತರು ದೇವಿ ದರ್ಶನ ಪಡೆಯಲು ಟಿಕೆಟ್ ಪಡೆದು ಸಾಲುಗಟ್ಟಿ ನಿಲ್ಲುತ್ತಿದ್ದರು. ಅಲ್ಲದೆ ಶಕ್ತಿ ದೇವರ ಆರಾ ಧನೆ ಮಾಸವೂ ಆಗಿದ್ದರಿಂದ ವಿವಿಧ ಸ್ವರೂಪ ಕಾಣಿಕೆ, ಹರಕೆ ಹೊತ್ತವರಿಂದ ಕಾಣಿಕೆ ಸಲ್ಲಿಕೆಯಾಗುತ್ತಿತ್ತು. ಇದರಿಂದ ಆಷಾಢ ಮಾಸದ ಶುಕ್ರವಾರ ಒಂದೇ ದಿನ 20 ರಿಂದ 30 ಲಕ್ಷ ರೂ. ಸಂಗ್ರಹವಾಗುತ್ತಿತ್ತು. ಆದರೆ ಈ ಬಾರಿ ಗಣ್ಯರು ಹಾಗೂ ದೇವಾ ಲಯದ ಸಿಬ್ಬಂದಿ ಸಮ್ಮುಖದಲ್ಲಿ ನಡೆದ ಆಷಾಢ ಶುಕ್ರವಾರದ ಪೂಜಾ ಮಹೋ ತ್ಸವದಲ್ಲಿ ಪಾಲ್ಗೊಳ್ಳಲು ಭಕ್ತರಿಗೆ ಅವಕಾಶ ನಿರ್ಬಂಧಿಸಿರುವುದರಿಂದ ಈ ಬಾರಿ ಜುಲೈನಲ್ಲಿ ಸಂಗ್ರಹವಾಗಬೇಕಾಗಿದ್ದ ಆದಾಯವೂ ಕ್ಷೀಣಿಸಿದೆ.

ಎಂ.ಟಿ.ಯೋಗೇಶ್‍ಕುಮಾರ್

Translate »