ತಜ್ಞರ ಸಲಹೆ ಆಧರಿಸಿ ಕೊರೊನಾ ಮಾರ್ಗಸೂಚಿ ಬದಲಾವಣೆ: ಇಂದು ಪ್ರಕಟ
ಮೈಸೂರು

ತಜ್ಞರ ಸಲಹೆ ಆಧರಿಸಿ ಕೊರೊನಾ ಮಾರ್ಗಸೂಚಿ ಬದಲಾವಣೆ: ಇಂದು ಪ್ರಕಟ

July 3, 2020

ಬೆಂಗಳೂರು, ಜು.2(ಕೆಎಂಶಿ)-ಕೊರೊನಾ ಮಾರ್ಗ ಸೂಚಿಗಳನ್ನು ನಾವು ಬದಲಾವಣೆ ಮಾಡುತ್ತಿದ್ದು, ಅಂತಿಮ ರೂಪುರೇಷೆಯನ್ನು ನಾಳೆ ಬಿಡುಗಡೆ ಮಾಡುತ್ತೇವೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ತಿಳಿಸಿದರು.

ನಿನ್ನೆ ಪರಿಣಿತರ ಜೊತೆ ಚರ್ಚೆ ಮಾಡಿದ ಮೇಲೆ ಕೆಲ ಸಲಹೆ ಕೊಟ್ಟಿದ್ದಾರೆ. ಅದರ ಸಾಧಕ ಬಾಧಕ ಚರ್ಚೆ ಆಗು ತ್ತಿದೆ. ಟಾಸ್ಕ್ ಫೋರ್ಸ್ ಜೊತೆ ಚರ್ಚೆ ಮಾಡಿ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಸುದ್ದಿಗಾರರಿಗೆ ತಿಳಿಸಿದರು.

ಕೊರೊನಾ ಕೇರ್ ಸೆಂಟರ್ ಅನ್ನೋದು ಡೈನಮಿಕ್ ನಂಬರ್ಸ್. ಸೊಂಕಿತರು ಹೆಚ್ಚು ಆದ ಹಾಗೆ ಕೇರ್ ಸೆಂಟರ್ ಹೆಚ್ಚಳ ಮಾಡಬೇಕು. ಕೊರೊನಾದಿಂದ ಮೃತಪಟ್ಟವರ ಅಂತ್ಯಸಂಸ್ಕಾರ ಅಮಾನವೀಯವಾಗಿ ಮಾಡುತ್ತಿರುವ ಕುರಿತು ನಮಗೆ ಎರಡು ಮೂರು ಕಡೆಯಿಂದ ದೂರ ಬಂದಿದೆ.

ಬಳ್ಳಾರಿಯ ಘಟನೆಗೆ ತಕ್ಷಣ ಕ್ರಮವಹಿಸಲಾಗಿದೆ. ಅದೊಂದು ಅಮಾನವೀಯ ಘಟನೆ. ಜಿಲ್ಲಾಧಿಕಾರಿ ಕೂಡ ಕ್ಷಮೆ ಕೇಳಿದ್ದಾರೆ. ಪ್ರಕರಣದ ಸಂಬಂಧ 6 ಜನರನ್ನು ಅಮಾನತು ಮಾಡಲಾಗಿದೆ ಎಂದರು.

ಅಂತ್ಯಸಂಸ್ಕಾರಕ್ಕೆ ಸ್ಪಷ್ಟ ಕಾನೂನು ಜಾರಿಗೆ ತರುತ್ತೇವೆ. ಯಾರೇ ಆದರೂ ಮಾನವೀಯ ಅಂಶ ಇರಬೇಕು. ಶವ ಅಂದ ಕೂಡಲೇ ಅಮಾನವೀಯವಾಗಿ ನೋಡೋದು ಮನುಷ್ಯತ್ವ ಅಲ್ಲ. ಇಂತಹ ಘಟನೆಗೆ ಸರ್ಕಾರ ಖಂಡಿ ಸುತ್ತದೆ. ಮತ್ತೆ ಇಂತಹ ಘಟನೆಗೆ ಸರ್ಕಾರ ಆಸ್ಪದ ಕೊಡೋದಿಲ್ಲ. ಇನ್ನು ಮೇಲೆ ಇಂತಹ ಅಚಾತುರ್ಯ ಆಗದ ಹಾಗೇ ನೋಡಿಕೊಳ್ಳುತ್ತೇವೆ. ಶೀಘ್ರವೇ ಇದಕ್ಕಾಗಿ ವಿಶೇಷ ಕಾನೂನು ಜಾರಿಗೆ ತರುತ್ತೇವೆ ಎಂದು ಹೇಳಿದರು.

ಬೆಂಗಳೂರಿನಲ್ಲಿ ಅಂತ್ಯಸಂಸ್ಕಾರಕ್ಕೆ ಜಾಗದ ಕೊರತೆ ಇಲ್ಲ. ಅಂತಹ ಸ್ಥಿತಿ ಇನ್ನು ಬೆಂಗಳೂರಿನಲ್ಲಿ ನಿರ್ಮಾಣ ಆಗಿಲ್ಲ. ಮುಂದೆಯೂ ಆಗೊಲ್ಲ. ಆ ಪ್ರಮಾಣದಲ್ಲಿ ಸಾವು ಕೂಡಾ ಆಗ್ತಿಲ್ಲ. ನಿನ್ನೆ ಎಕ್ಸ್‍ಪರ್ಟ್ ಜೊತೆ ಚರ್ಚೆ ಮಾಡಿದ್ದೇವೆ. ರೋಗದ ಲಕ್ಷಣ ಇರೋರು, ಲಕ್ಷಣ ಇಲ್ಲದೆ ಇರೋರಿಗೆ ಪಾಸಿಟಿವ್ ಇರುತ್ತೆ. ಅವರಿಗೆ ಯಾವುದೇ ರೋಗ ಲಕ್ಷಣ ಇರೋ ದಿಲ್ಲ. ಅಂತಹವರನ್ನು ಎ ಕ್ಯಾಟಗರಿ ಅಂತ ಮಾಡಲು ನಿರ್ಧಾರ ಮಾಡಲಾಗಿದೆ. ಮೈಲ್ಡ್ ಮತ್ತು ಎ ಸಿಂಟಂಮ್ಸ್ ಇರೋರಿಗೆ ಮನೆಯಲ್ಲಿ ಚಿಕಿತ್ಸೆ ಕೊಡುವ ಸಲಹೆ ಎಕ್ಸ್ ಪರ್ಟ್‍ಗಳಿಂದ ಬಂದಿದೆ. ವಿಶ್ವದಲ್ಲಿ ಅನೇಕ ಕಡೆ ಹೀಗೆ ಮಾಡಿದ್ದಾರೆ. ನಾವು ಹಾಗೆ ಮಾಡಿ ಅಂತಹವರ ಮೇಲೆ ನಿಗಾ ಇಡುವ ಕೆಲಸ ಮಾಡುತ್ತೇವೆ. ರೋಗದ ಲಕ್ಷಣ ತೀವ್ರವಾದರೆ ಅವರನ್ನು ತಕ್ಷಣ ಆಸ್ಪತ್ರೆಗೆ ಸೇರಿಸುವ ಕೆಲಸ ಮಾಡುತ್ತೇವೆ ಎಂದು ಡಾ.ಸುಧಾಕರ್ ಹೇಳಿದರು

Translate »