ಮೈಸೂರು, ಜು.2(ಎಂಕೆ)- ವಾರ ಪೂರ್ತಿ ರೈಸ್‍ಬಾತ್, ಎರಡು ದಿನ ತಿಂದರೆ ಮೂರನೇ ದಿನ ಹೊಟ್ಟೆನೋವು, ಕೆಲಸ ಮಾಡಲು ಕೈಕಾಲುಗಳಲ್ಲಿ ಶಕ್ತಿ ಇಲ್ಲದಂತಾ ಗುತ್ತದೆ ಎಂಬುದು ಮೈಸೂರು ಮಹಾ ನಗರಪಾಲಿಕೆ ಪೌರಕಾರ್ಮಿಕರ ಅಳಲು…
ಮೈಸೂರು ನಗರದ ಸ್ವಚ್ಛತೆಯಲ್ಲಿ ತೊಡಗಿರುವ 2400ಕ್ಕೂ ಹೆಚ್ಚು ಪೌರ ಕಾರ್ಮಿಕರಿಗೆ ಬೆಳಗಿನ ಉಚಿತ ಉಪಾ ಹಾರವನ್ನು ಪಾಲಿಕೆಯಿಂದ ಒದಗಿಸಲಾಗು ತ್ತಿದ್ದು, ವಾರ್ಷಿಕ 1.83 ಕೋಟಿ ರೂ. ವೆಚ್ಚದ ಈ ಯೋಜನೆಯನ್ನು ಹೈದರಾಬಾದ್ ಮೂಲದ ರಾವ್ ರಘುವೀರಸಿಂಗ್ ಸೇವಾ ಸಮಿತಿಗೆ ನೀಡಲಾಗಿದೆ. ಯೋಜನೆಯಂತೆ ವಾರದಲ್ಲಿ ಉಪ್ಪಿಟ್ಟು, ರೈಸ್‍ಬಾತ್, ಚಿತ್ರಾನ್ನ, 4 ಇಡ್ಲಿ-ಚಟ್ನಿ, ಟೊಮಾಟೊ ಬಾತ್, ಬಿಸಿಬೇಳೆ ಬಾತ್, ಮೊಸರನ್ನ ಪೈಕಿ ದಿನ ಕ್ಕೊಂದು ರೀತಿಯ ಉಪಾಹಾರವನ್ನು ನೀಡ ಬೇಕು ಎಂದಾಗಿತ್ತು. ಆದರೆ, ವಾರಪೂರ್ತಿ ರೈಸ್ ಬಾತ್ ಒಂದನ್ನೇ ನೀಡಲಾಗುತ್ತಿದ್ದು, ರುಚಿಯೂ ಇಲ್ಲ, ಗುಣಮಟ್ಟದಿಂದಲೂ ಕೂಡಿಲ್ಲ ಎಂದು ಹಲವಾರು ಪೌರಕಾರ್ಮಿ ಕರು ‘ಮೈಸೂರು ಮಿತ್ರ’ನಲ್ಲಿ ದೂರಿದರು.
ಒಂದಷ್ಟು ದಿನ ಮಾತ್ರ: ಆರಂಭದಲ್ಲಿ ಮಾತ್ರ ಒಂದಷ್ಟು ದಿನ ಚೆನ್ನಾಗಿತ್ತು. ನಂತ ರದ ದಿನಗಳಲ್ಲಿ ಉಪಾಹಾರದಲ್ಲಿ ಯಾವುದೇ ರುಚಿಯೂ ಇಲ್ಲ. ಚೆನ್ನಾಗಿಯೂ ಇಲ್ಲ. ತಿಂದರೆ ಅನಾರೋಗ್ಯ ಉಂಟಾಗುತ್ತದೆ. ಎರಡು ದಿನ ತಿಂದರೆ ಮೂರನೇ ದಿನ ಹೊಟ್ಟೆ ನೋವು ಉಂಟಾಗುತ್ತದೆ. ಕೆಲಸಕ್ಕೆ ಬರು ವುದಕ್ಕೆ ಆಗುವುದಿಲ್ಲ. ಕೊರೊನಾ ಟೈಂ ನಲ್ಲಿ ಈ ರೀತಿಯಾದರೆ ನಮ್ಮ ಆರೋ ಗ್ಯದ ಸ್ಥಿತಿ ಹೇಗೆ? ಎಂದು ಹೆಸರು ಹೇಳಲಿ ಚ್ಛಿಸದ ಪೌರಕಾರ್ಮಿಕರೊಬ್ಬರು ತಮ್ಮ ಅಳಲು ತೋಡಿಕೊಂಡರು.
65ರಿಂದ 20ಕ್ಕೆ: 2019ರ ನವೆಂಬರ್ ತಿಂಗಳಿನಲ್ಲಿ ಪ್ರಾರಂಭವಾದ ಬೆಳಗಿನ ಉಪ ಹಾರ ವಿತರಣೆಯ ವಾರ್ಷಿಕ ಯೋಜ ನೆಯೂ 8 ತಿಂಗಳಲಷ್ಟರಲ್ಲೇ ಪೌರಕಾರ್ಮಿಕ ರಲ್ಲಿ ಬೇಸರ ತರಿಸಿದ್ದು, ತಿನ್ನಲು ಆಗದೆ ಇತ್ತ ಬಿಸಾಡಲು ಆಗದಂತೆ ಮಾಡಿದೆ. ಆರಂಭದಲ್ಲಿ 65 ವಾರ್ಡ್‍ಗಳಿಗೂ ಪೂರೈಕೆ ಯಾಗುತ್ತಿದ್ದ ಉಪಾಹಾರವನ್ನು ಹಲವು ವಾರ್ಡ್‍ಗಳಲ್ಲಿ ಪೌರಕಾರ್ಮಿಕರು ತಿರಸ್ಕರಿಸಿ ದ್ದರಿಂದ ಸದ್ಯ 20 ವಾರ್ಡ್‍ಗಳಿಗೆ ಮಾತ್ರ ವಿತರಣೆಯಾಗುತ್ತಿದೆ ಪೌರಕಾರ್ಮಿಕರ ಸಂಘದ ಮುಖಂಡ ಎನ್.ಮಾರ ತಿಳಿಸಿದರು.
ಗುಣಮಟ್ಟವಿಲ್ಲದ ಉಪಾಹಾರವನ್ನು ನಿಲ್ಲಿಸಿ ಅಥವಾ ಬೇರೆಯವರಿಗೆ ಟೆಂಡರ್ ನೀಡಿ ಎಂದು ಪಾಲಿಕೆ ಆಯುಕ್ತರಲ್ಲಿ ಮನವಿ ಮಾಡ ಲಾಗಿದೆ. ಸಾಧ್ಯವಾದರೆ ಉಪಾಹಾರಕ್ಕೆ ಖರ್ಚು ಮಾಡುವ ಹಣವನ್ನು ನೀಡಿ ಎಂದು ಪಾಲಿಕೆ ಆರೋಗ್ಯಾಧಿಕಾರಿ ಹಾಗೂ ಆಯುಕ್ತರಿಗೆ ಮನವಿ ಮಾಡಲಾಗಿದೆ ಎಂದರು.