ಕೊರೊನಾದಿಂದ ಗುಣಮುಖರಾದವರ ಪ್ರಮಾಣ ಶೇ.59.52ಕ್ಕೆ ಏರಿಕೆ
ಮೈಸೂರು

ಕೊರೊನಾದಿಂದ ಗುಣಮುಖರಾದವರ ಪ್ರಮಾಣ ಶೇ.59.52ಕ್ಕೆ ಏರಿಕೆ

July 3, 2020

ನವದೆಹಲಿ: ಕಳೆದ 24 ಗಂಟೆಗಳ ಅವಧಿಯಲ್ಲಿ 11 ಸಾವಿರದ 881 ಕೋವಿಡ್-19 ರೋಗಿಗಳು ಗುಣಮುಖರಾಗಿದ್ದು, ಒಟ್ಟು 3 ಲಕ್ಷದ 59 ಸಾವಿರದ 859 ಮಂದಿ ಚೇತರಿಸಿಕೊಂಡಿದ್ದಾರೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ. ದೇಶದಲ್ಲಿ ಪ್ರಸ್ತುತ ಚೇತರಿಕೆ ಪ್ರಮಾಣ 59.52ರಷ್ಟಿದ್ದು, 2 ಲಕ್ಷದ 26 ಸಾವಿರದ 947 ಸಕ್ರಿಯ ಪ್ರಕರಣಗಳಿವೆ. ಇವೆಲ್ಲವೂ ವೈದ್ಯಕೀಯ ನಿಗಾವಣೆಯಲ್ಲಿರುವುದಾಗಿ ಆರೋಗ್ಯ ಸಚಿವಾಲಯ ತಿಳಿಸಿದೆ.

ಕೋವಿಡ್‍ನಿಂದ ಚೇತರಿಸಿಕೊಂಡ 15 ಪ್ರಮುಖ ರಾಜ್ಯಗಳ ರೋಗಿಗಳ ಸಂಖ್ಯೆ ಹೀಗಿದೆ: ಮಹಾರಾಷ್ಟ್ರ (93, 154) ದೆಹಲಿ (59,992) ತಮಿಳುನಾಡು (52,926) ಗುಜರಾತ್ (24,030) ಉತ್ತರ ಪ್ರದೇಶ (16,629) ರಾಜಸ್ಥಾನ (14,574)ಪಶ್ಚಿಮ ಬಂಗಾಳ (12,528)ಮಧ್ಯ ಪ್ರದೇಶ (10,665) ಹರಿಯಾಣ (10,499) ತೆಲಂಗಾಣ (8,082) ಕರ್ನಾಟಕ (8.063) ಬಿಹಾರ (7,946) ಆಂಧ್ರ ಪ್ರದೇಶ (6,988) ಅಸ್ಸಾಂ (5,851) ಮತ್ತು ಒಡಿಶಾ (5,353) ರೋಗಿಗಳು ಗುಣಮುಖರಾಗಿದ್ದಾರೆ. ಚೇತರಿಕೆ ಪ್ರಮಾಣ ದಲ್ಲಿ ಚಂಡೀಗಢ (ಶೇ.82.3) ಮೇಘಾಲಯ (ಶೇ. 80.8) ರಾಜಸ್ಥಾನ (ಶೇ.79.6) ಉತ್ತರಾಖಂಡ್ (ಶೇ.78.6) ಛತ್ತೀಸ್‍ಗಢ (ಶೇ.78.3)ತ್ರಿಪುರಾ (ಶೇ.78.3) ಬಿಹಾರ (ಶೇ.77.5) ಮಿಜೋರಾಂ (ಶೇ. 76.9) ಮಧ್ಯ ಪ್ರದೇಶ (ಶೇ.76.9) ಜಾರ್ಖಂಡ್ (ಶೇ.76.6) ಒಡಿಶಾ ಶೇ.73.2) ಗುಜರಾತ್ (ಶೇ.72.3) ಉತ್ತರ ಪ್ರದೇಶ (ಶೇ.69.1) ರಷ್ಟಿದೆ.

Translate »