ಆಸ್ಪತ್ರೆ ಇಲ್ಲದ ಊರಲ್ಲಿ ತುರ್ತುಸ್ಥಿತಿಯಲ್ಲಿ ಶ್ರೀರಾಮನೇ ದಿಕ್ಕು!
ಮೈಸೂರು

ಆಸ್ಪತ್ರೆ ಇಲ್ಲದ ಊರಲ್ಲಿ ತುರ್ತುಸ್ಥಿತಿಯಲ್ಲಿ ಶ್ರೀರಾಮನೇ ದಿಕ್ಕು!

July 3, 2020

ಮೈಸೂರು, ಜು.2(ವೈಡಿಎಸ್)- ರಾತ್ರಿ ವೇಳೆ ಮಗ ಳಿಗೆ ಹೆರಿಗೆ ನೋವು ಕಾಣಿಸಿಕೊಂಡು, ಊರಲ್ಲಿ ಆಸ್ಪತ್ರೆಯೂ ಇಲ್ಲದೇ, ಮೈಸೂರಿಗೆ ಕರೆದೊಯ್ಯಲು ವಾಹನವೂ ಇಲ್ಲದೆ ತುಂಬಾ ತೊಂದರೆ ಅನುಭವಿಸ ಬೇಕಾಯಿತು… ದೊಡ್ಡ ಮಟ್ಟದ ಆರೋಗ್ಯ ಸಮಸ್ಯೆ ಯಾದರೆ ನಗರದ ಆಸ್ಪತ್ರೆಗಳಿಗೆ ಹೋಗಿ ಚಿಕಿತ್ಸೆ ಪಡೆಯೋಣ. ಆದರೆ, ಸಣ್ಣ-ಪುಟ್ಟ ಜ್ವರ, ನೆಗಡಿ, ತಲೆನೋವು ಬಂದರೂ 7-8 ಕಿ.ಮೀ ದೂರದ ಕೆ.ಆರ್.ಆಸ್ಪತ್ರೆಗೆ ಹೋಗಬೇಕು ಅಂದರೆ…?

ಇವು, ಮೈಸೂರು-ಮಾನಂದವಾಡಿ ರಸ್ತೆಯಲ್ಲಿ ಮೈಸೂರು ನಗರಕ್ಕೆ ತಾಗಿಕೊಂಡೇ ಇರುವ ಶ್ರೀರಾಂ ಪುರ ನಿವಾಸಿಗಳ ನೋವಿನ ನುಡಿಗಳು.

ಶ್ರೀರಾಂಪುರದಲ್ಲಿ 40 ಸಾವಿರ ಜನಸಂಖ್ಯೆಯಿದ್ದು, ಗ್ರಾಮ ಪಂಚಾಯಿತಿ ಇದೆ. ಆದರೆ, ಸಣ್ಣಪುಟ್ಟ ಆರೋಗ್ಯ ಸಮಸ್ಯೆ ಕಂಡು ಬಂದರೆ ಚಿಕಿತ್ಸೆ ಪಡೆಯಲು ಆಸ್ಪತ್ರೆ ಇಲ್ಲ. 5-6 ಕಿ.ಮೀ. ದೂರದ ಜಯನಗರ, ನಂಜು ಮಳಿಗೆ ಅಥವಾ ಜೆಪಿ ನಗರದ ಆರೋಗ್ಯ ಕೇಂದ್ರಕ್ಕೆ ಹೋಗಿ ಚಿಕಿತ್ಸೆ ಪಡೆಯಬೇಕಾದ ಪರಿಸ್ಥಿತಿ ಇದೆ.

ಶ್ರೀರಾಮಪುರ ನಿವಾಸಿ ಮಮತಾ ಎಂಬವರು ಈ ಬಗ್ಗೆ `ಮೈಸೂರು ಮಿತ್ರ’ನೊಂದಿಗೆ ಮಾತನಾಡಿ, ಶ್ರೀರಾಂ ಪುರದಲ್ಲಿ ಆರೋಗ್ಯ ಕೇಂದ್ರ, ಹೆರಿಗೆ ಆಸ್ಪತ್ರೆ ಇಲ್ಲ. ಕೆಲ ದಿನಗಳ ಹಿಂದೆ ರಾತ್ರಿ 10 ಗಂಟೆ ವೇಳೆ ಮಗಳಿಗೆ ಹೆರಿಗೆ ನೋವು ಕಾಣಿಸಿಕೊಂಡು ಕರೆದೊಯ್ಯಲು ವಾಹನ ಗಳಿಲ್ಲದೆ ಪರದಾಡಬೇಕಾಯಿತು. ಈ ವೇಳೆ ನೆರೆಮನೆ ಯವರು ತಮ್ಮ ಸ್ನೇಹಿತರಿಗೆ ಫೋನ್ ಮಾಡಿ ಆಟೋ ಕರೆಸಿದರು. ತುಂಬು ಗರ್ಭಿಣಿ ಮಗಳನ್ನು ಆಟೋದಲ್ಲಿಯೇ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋದೆವು. ಸ್ವಲ್ಪ ತಡವಾಗಿದ್ದರೂ ಅಪಾಯವಾಗುತ್ತಿತ್ತು ಎಂದರು. ಹಾಗೆ ಹೇಳುವಾಗ ಅವರ ಕಣ್ಣಂಚಲ್ಲಿ ನೀರು ಜಿನುಗಿತು.

ಜಾಗ ಮಂಜೂರಿಗೆ ಪತ್ರ: ಶ್ರೀರಾಂಪುರ ಗ್ರಾಮದ ಸರ್ವೆ ನಂ.181ರಲ್ಲಿನ ಜಾಗದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ನಿರ್ಮಿಸಲು ನಿವೇಶನ ಮಂಜೂರು ಮಾಡಿಕೊಡು ವಂತೆ ತಾಲೂಕು ಪಂಚಾಯಿತಿ ಸದಸ್ಯ ಕೆ.ಹನುಮಂತ ಅವರು ತಹಸಿಲ್ದಾರ್ ಅವರಿಗೆ ಪತ್ರ ಬರೆದು ಒತ್ತಾಯಿಸಿ ದ್ದಾರೆ. ಶ್ರೀರಾಂಪುರ ಸೇರಿದಂತೆ ಸುತ್ತಮುತ್ತಲ ನಿವಾಸಿ ಗಳಿಗೆ ಆರೋಗ್ಯ ಸಮಸ್ಯೆಯಾದರೆ 8-10 ಕಿ.ಮೀ. ಪ್ರಯಾಣಿಸಿ ಕೆ.ಆರ್.ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆಯುತ್ತಿ ದ್ದಾರೆ. ಹಾಗಾಗಿ ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ಶ್ರೀರಾಂಪುರ ಗ್ರಾಮದ ಸರ್ವೆ ನಂ.181ರ ಸರ್ಕಾರಿ ಜಮೀನಿ ನಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ನಿರ್ಮಿಸಲು ಸ್ಥಳ ಗುರುತಿಸಿ, ಹದ್ದುಬಸ್ತ್ ಮಾಡಿ ಆರೋಗ್ಯ ಇಲಾಖೆಗೆ ಹಸ್ತಾಂತರಿಸುವಂತೆ ಪತ್ರದ ಮೂಲಕ ಕೋರಿದ್ದಾರೆ.

Translate »