ಠಾಕ್ರೆ ಕನ್ನಡಕ್ಕೆ ಮ್ಯಾಕ್‍ಬೆತ್ ನಾಟಕ
ಸಿನಿಮಾ

ಠಾಕ್ರೆ ಕನ್ನಡಕ್ಕೆ ಮ್ಯಾಕ್‍ಬೆತ್ ನಾಟಕ

July 3, 2020

ಗುರು ದೇಶಪಾಂಡೆ ಇತ್ತೀಚೆಗೆ ಜಂಟಲ್‍ಮನ್ ಚಿತ್ರ ನಿರ್ಮಾಣ ಮಾಡಿದ್ದರು. ಇದರ ಜೊತೆಗೆ ಮೂರು ವರ್ಷಗಳ ಹಿಂದೆ ಷೇಕ್ಸ್‍ಪಿಯರ್ ಅವರ ನಾಟಕವನ್ನಾಧರಿಸಿದ ಠಾಕ್ರೆ ಚಿತ್ರವನ್ನು ಘೋಷಿಸಿದ್ದರು. 2017ರಲ್ಲಿಯೇ ಈ ಚಿತ್ರಕ್ಕೆ ಮುಹೂರ್ತ ನಡೆದಿತ್ತು. ನಂತರ ನಾನಾ ಕಾರಣಗಳಿಂದಾಗಿ ಆ ಸಿನಿಮಾ ಮುಂದುವರಿಯಲಿಲ್ಲ. ಈಗ ಮತ್ತೆ ಆ ಚಿತ್ರಕ್ಕೆ ಗುರು ದೇಶಪಾಂಡೆ ಮರುಜೀವ ನೀಡಿದ್ದಾರೆ.

ಪ್ರಜ್ವಲ್ ದೇವರಾಜ್ ಮತ್ತು ಕ್ರೇಜಿಸ್ಟಾರ್ ರವಿಚಂದ್ರನ್ ಇವರಿಬ್ಬರ ಕಾಂಬಿನೇಷನ್ನಿನಲ್ಲಿ ಮೂಡಿಬರಬೇಕಿದ್ದ ‘ಠಾಕ್ರೆ’ ಸಿನಿಮಾದಲ್ಲಿ ಈಗ ಕೊಂಚ ಬದಲಾವಣೆ ಮಾಡಲಾಗಿದೆ. ಪ್ರಜ್ವಲ್ ಮಾಡಬೇಕಿದ್ದ ಪಾತ್ರಕ್ಕೆ ಈಗ ಬೇರೊಬ್ಬ ಕಲಾವಿದರನ್ನು ಆಯ್ಕೆ ಮಾಡಲಾಗುತ್ತಿದ್ದು, ರವಿಚಂದ್ರನ್ ಅವರ ಪಾತ್ರದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಹೆಸರಾಂತ ಲೇಖಕ ಷೇಕ್ಸ್‍ಪಿಯರ್ ಅವರ ಪ್ರಸಿದ್ಧ ನಾಟಕ ಮ್ಯಾಕ್ಬೆತ್‍ಅನ್ನು ಆಧರಿಸಿ ಈ ಚಿತ್ರದ ಕಥೆ, ಚಿತ್ರಕಥೆ ಮಾಡಲಾಗಿದೆ.

ಪ್ರಜ್ವಲ್ ಅವರು ಸಿನಿಮಾದಲ್ಲಿ ನಟಿಸುತ್ತಿಲ್ಲ ಎಂದು ಹೇಳಲು ಬೇಸರವಾಗುತ್ತದೆ. ಈಗಾಗಲೇ ನನ್ನ ಬ್ಯಾನರ್‍ನ ಜಂಟಲ್‍ಮನ್ ಚಿತ್ರದಲ್ಲಿ ನಟಿಸಿರುವ ಪ್ರಜ್ವಲ್ ಅವರು, ಈಗ ಬೇರೆ ಚಿತ್ರಗಳಲ್ಲಿ ತೊಡಗಿಕೊಂಡಿz್ದÁರೆ. ಹಾಗಾಗಿ ಅವರು ನನಗೆ ಲಭ್ಯವಾಗುತ್ತಿಲ್ಲ. ಮುಂದಿನ ದಿನಗಳಲ್ಲಿ ಅವರ ಜೊತೆ ಮತ್ತೆ ಕೆಲಸ ಮಾಡುವೆ. ಈಗ ಅವರು ಮಾಡಬೇಕಿರುವ ಪಾತ್ರಕ್ಕೆ ಮತ್ತೋರ್ವ ಕಲಾವಿದರನ್ನು ಆಯ್ಕೆ ಮಾಡಿಕೊಳ್ಳಲಾಗುತ್ತಿದೆ. ಆ ಕಲಾವಿದರ ಹೆಸರನ್ನು ಸದ್ಯದ¯್ಲÉೀ ತಿಳಿಸುವೆ.

ಇದು ನನ್ನ ಮಹತ್ವಾಕಾಂಕ್ಷೆಯ ಸಿನಿಮಾ ಎಂದು ನಿರ್ದೇಶಕ ಗುರು ದೇಶಪಾಂಡೆ ತಿಳಿಸಿದ್ದಾರೆ. ಅಂದುಕೊಂಡಂತೆಯೇ ಆಗಿದ್ದರೆ ಈ ಸಿನಿಮಾವನ್ನು ವಿತರಕ ಹಾಗೂ ನಿರ್ಮಾಪಕ ಎನ್.ಕುಮಾರ್ ನಿರ್ಮಾಣ ಮಾಡಬೇಕಿತ್ತು. ಆ ಸಮಯದ¯್ಲÉೀ ಗುರು ದೇಶಪಾಂಡೆ ಮತ್ತು ಪ್ರಜ್ವಲ್ ದೇವರಾಜ್ ಬೇರೆ ಬೇರೆ ಚಿತ್ರಗಳ ಕೆಲಸಗಳಲ್ಲಿ ತೊಡಗಿಕೊಂಡರು. ಹಾಗಾಗಿ ಚಿತ್ರ ಆರಂಭವಾಗಲೇ ಇಲ್ಲ. ಈಗ ಮತ್ತೆ ಚಿತ್ರಕ್ಕೆ ಮರುಜೀವ ಬಂದಿದ್ದರಿಂದ, ಒಂದಷ್ಟು ಬದಲಾವಣೆಗಳೊಂದಿಗೆ ಠಾಕ್ರೆ
ಮೂಡಿಬರಲಿದೆ.

Translate »