ಪ್ರದರ್ಶನ ಆರಂಭವಾದರೆ ಶೂಟಿಂಗ್‍ಗೆ ರೆಡಿ
ಸಿನಿಮಾ

ಪ್ರದರ್ಶನ ಆರಂಭವಾದರೆ ಶೂಟಿಂಗ್‍ಗೆ ರೆಡಿ

July 3, 2020

ನಟ ದರ್ಶನ್ ಸತತ ಮೂರು ತಿಂಗಳ ಕಾಲ ಮನೆ, ಪ್ರಾಣಿಗಳು ಅಂತ ಲಾಕ್‍ಡೌನ್‍ನಲ್ಲಿ ಕಾಲ ಕಳೆದಿದ್ದಾರೆ. ಒಪ್ಪಿಕೊಂಡಿದ್ದ ಚಿತ್ರಗಳ ಶೂಟಿಂಗ್ ಸ್ಥಗಿತಗೊಂಡಿದೆ. ಇದನ್ನು ಸ್ವತಃ ದರ್ಶನ್ ಅವರೇ ಒಪ್ಪಿಕೊಂಡಿz್ದÁರೆ. ಈಗ ನಿರ್ಮಾಪಕರು ಸಿನಿಮಾ ಶೂಟಿಂಗ್ ಆರಂಭಿಸಲು ರೆಡಿ ಇದ್ದರೂ ಶೂಟಿಂಗ್‍ಗೆ ಬರಲು ಸ್ಟಾರ್‍ಗಳು ಹಿಂದೇಟು ಹಾಕುತ್ತಿದ್ದಾರೆ ಎಂಬ ಅಪವಾದ ಬಂದಿತ್ತು. ಈ ಸುದ್ದಿಗೆ ನಟ ದರ್ಶನ್ ಪ್ರತಿಕ್ರಿಯೆ ನೀಡಿದ್ದಾರೆ.

ಬಾಕಿ ಉಳಿಸಿಕೊಂಡಿರುವ ಚಿತ್ರಗಳ ಶೂಟಿಂಗ್ ಮಾಡಿ ಕೊಳ್ಳಲು ಚಿತ್ರರಂಗಕ್ಕೆ ಸರ್ಕಾರ ಅನುಮತಿ ನೀಡಿದೆ. ಅದಕ್ಕೆ ದರ್ಶನ್ ಪ್ರತಿಕ್ರಿಯಿಸಿ ಸಿನಿಮಾ ಶೂಟಿಂಗ್‍ಗಿಂತ ಮೊದಲು ಚಿತ್ರಮಂದಿರಗಳು ಆರಂಭವಾಗಬೇಕು. ಥಿಯೇಟರ್ ಪುನಾರಂಭ ವಾಗುವುದಕ್ಕೆ ನನ್ನ ಮೊದಲ ಆದ್ಯತೆ ಎಂದು ಹೇಳಿz್ದÁರೆ. ನನಗೆ ಇತರರ ಬಗ್ಗೆ ಗೊತ್ತಿಲ್ಲ. ಆದರೆ ಶೂಟಿಂಗ್ ಪ್ರಾರಂಭಿಸುವುದಕ್ಕೆ ಮುನ್ನ ಥಿಯೇಟರ್‍ಗಳನ್ನು ತೆರೆಯುವುದು ಬಹಳ ಮುಖ್ಯ ಎಂದು ನಾನು ನಂಬುತ್ತೇನೆ. ನಾವು ಚಿತ್ರಗಳನ್ನು ನಿರ್ಮಿಸಲು ಪ್ರಾರಂಭಿಸಿದರೆ ಹಾಗೂ ಚಿತ್ರಮಂದಿರಗಳು ಆರಂಭವಾಗುವ ಮುನ್ನವೇ ಚಿತ್ರ ಬಿಡುಗಡೆಗೆ ಸಿದ್ಧವಾದರೆ ಆಗ ದೊಡ್ಡ ಸಮಸ್ಯೆ ಆಗಲಿದೆ. ಒಂದೊಮ್ಮೆ ಥಿಯೇಟರ್ ತೆರೆದರೆ ಆಗ ನಿಯಮಿತವಾಗಿ ಚಿತ್ರಗಳ ರಿಲೀಸ್ ಆಗುವುದು ಸುಗಮವಾಗಲಿದೆ. ಮತ್ತು ಈಗಾಗಲೇ ಪೂರ್ಣ ಗೊಂಡಿರುವ ಚಿತ್ರಗಳು ಚಿತ್ರಮಂದಿರಗಳಲ್ಲಿ ಉತ್ತಮ ಪ್ರದರ್ಶನ ಕಾಣಲಿವೆ ಎಂದು ಅವರು ಹೇಳಿz್ದÁರೆ. ನಾಳೆಯಿಂದ ಥಿಯೇಟರ್ ಆರಂಭಿಸಲು ಅನುಮತಿ ಸಿಕ್ಕಿದರೆ, ಮರುದಿನವೇ ನಾನು ಚಿತ್ರೀಕರಣದಲ್ಲಿ ಪಾಲ್ಗೊಳ್ಳಲು ರೆಡಿಯಾಗುತ್ತೇನೆ ಎಂದು ದರ್ಶನ್ ಹೇಳಿದ್ದಾರೆ. ಪ್ರಸ್ತುತ ತರುಣ್ ಸುಧೀರ್ ನಿರ್ದೇಶನದ ರಾಬರ್ಟ್ ಚಿತ್ರದ ಬಿಡುಗಡೆಗಾಗಿ ಕಾಯುತ್ತಿರುವ ದರ್ಶನ್, ರಾಕ್‍ಲೈನ್ ವೆಂಕಟೇಶ್ ನಿರ್ಮಾಣದ ಐತಿಹಾಸಿಕ ಚಿತ್ರ ರಾಜವೀರ ಮದಕರಿ ನಾಯಕ ಚಿತ್ರದ ಚಿತ್ರೀಕರಣಕ್ಕೆ ಹಾಜರಾಗಬೇಕಿದೆ. ಈ ಚಿತ್ರಕ್ಕೆ ರಾಜೇಂದ್ರಸಿಂಗ್ ಬಾಬು ಆ್ಯಕ್ಷನ್‍ಕಟ್ ಹೇಳಿz್ದÁರೆ. ಈ ನಡುವೆ ದರ್ಶನ್ ಅವರು ಪ್ರಕಾಶ್ ಜಯರಾಮ್ ಅವರ ನಿರ್ದೇಶನದಲ್ಲೂ ಅಭಿನಯಿಸಬೇಕಿದೆ. ನನ್ನ ಮುಂದಿನ ಗಮನ ಈ ಎರಡೂ ಚಿತ್ರಗಳ ಮೇಲಿರುತ್ತದೆ. ರಾಜವೀರ ಮದಕರಿನಾಯಕ ಚಿತ್ರೀಕರಣವನ್ನು ನಾವು ಹೇಗೆ ಮುಂದೆ ತೆಗೆದುಕೊಂಡು ಹೋಗುತ್ತೇವೆ ಎನ್ನುವುದರ ಮೇಲೆ ಎಲ್ಲವೂ ಅವಲಂಬಿತವಾಗಿರುತ್ತದೆ. ಐತಿಹಾಸಿಕ ಚಿತ್ರ ಎಂದರೆ ಆ ಸೆಟ್‍ನಲ್ಲಿ ಕನಿಷ್ಠ ಎಂದರೂ 500ರಿಂದ 600 ಜನ ಇರಬೇಕಾದ ಅಗತ್ಯವಿರುತ್ತದೆ, ಇದು ಪ್ರಸ್ತುತ ಪರಿಸ್ಥಿತಿಯಲ್ಲಿ ಸಾಧ್ಯವಿಲ್ಲ. ರಾಕ್‍ಲೈನ್ ವೆಂಕಟೇಶ್ ಮತ್ತು ರಾಜೇಂದ್ರಸಿಂಗ್ ಬಾಬು ಅವರು ಈ ಕುರಿತು ಬೇರೆ ಪ್ಲಾನ್ ರೂಪಿಸುತ್ತಿz್ದÁರೆ, ನಾವೆಲ್ಲ ಸೇರಿ ಮುಂದಿನ ಶೂಟಿಂಗ್ ಪ್ರಕ್ರಿಯೆಯ ಬಗ್ಗೆ ಚರ್ಚಿ ಸುತ್ತೇವೆ. ಪ್ರಕಾಶ್ ಅವರ ಚಿತ್ರದ ಸ್ಕ್ರಿಪ್ಟ್ ಸಹ ಈಗಾಗಲೇ ಮುಗಿದಿದೆ ಎಂದು ನಟ ದರ್ಶನ್ ಹೇಳಿದ್ದಾರೆ.

Translate »