‘ರಾಧಾ ಸರ್ಚಿಂಗ್ ರಮಣ ಮಿಸ್ಸಿಂಗ್’ ಫಸ್ಟ್‍ಲುಕ್
ಸಿನಿಮಾ

‘ರಾಧಾ ಸರ್ಚಿಂಗ್ ರಮಣ ಮಿಸ್ಸಿಂಗ್’ ಫಸ್ಟ್‍ಲುಕ್

July 3, 2020

ಪುರುಷಪ್ರಧಾನ ಕಥಾನಕ ಇರುವ ಸಿನಿಮಾಗಳೇ ವಿಜೃಂಭಿಸುತ್ತಿರುವ ಸಂದರ್ಭದಲ್ಲಿ ಮಹಿಳಾ ಕೇಂದ್ರೀಕೃತ ಕಥೆ ಹೊಂದಿದ ಚಿತ್ರಗಳು ಆಗಾಗ ನಿರ್ಮಾಣವಾಗಿ ತೆರೆಗೆ ಬರುತ್ತಿವೆ. ಅಂಥಾ ಚಿತ್ರಗಳ ಸಾಲಿಗೆ ಸೇರಲಿರುವ ಮತ್ತೊಂದು ಚಿತ್ರ ‘ರಾಧಾ ಸರ್ಚಿಂಗ್ ರಮಣ ಮಿಸ್ಸಿಂಗ್’. ಈ ಚಿತ್ರದಲ್ಲಿ ನಾಯಕ ಒಬ್ಬ ಹಿಂದೂ ಯುವಕ ನಾದರೆ, ನಾಯಕಿ ಒಬ್ಬ ಕ್ರಿಶ್ಚಿಯನ್ ಯುವತಿ. ಇವರಿಬ್ಬರೂ ಒಂದೇ ಕಾಲೇಜಿನಲ್ಲಿ ಓದುತ್ತಿದ್ದು, ಇಬ್ಬರ ನಡುವೆ ಆಕಸ್ಮಿಕವಾಗಿ ಹುಟ್ಟುವ ಪ್ರೀತಿ, ಇವರಿಬ್ಬರ ಪ್ರೀತಿಗೆ ಎದುರಾಗುವ ಹಲವಾರು ಅಡ್ಡಿ ಆತಂಕಗಳು, ನಂತರ ಯಾವುದೋ ಒಂದು ಕಾರಣದಿಂದ ಸಹಪಾಠಿ ವಿದ್ಯಾರ್ಥಿ ಗಳಿಂದಲೇ ನಾಯಕನ ಅಪಹರಣ ವಾಗುತ್ತದೆ. ಆಗ ನಾಯಕಿ ತನ್ನ ದಿಟ್ಟತನದಿಂದ ಅವರನ್ನೆಲ್ಲ ಎದುರಿಸಿ, ಪ್ರೇಮಿಯನ್ನು ಹೇಗೆ ಅವರಿಂದ ಬಿಡಿಸಿಕೊಂಡು ಬರುತ್ತಾಳೆ, ಪ್ರೀತಿಯ ಹುಡುಕಾಟದಲ್ಲಿ ನಾಯಕಿ ಹೇಗೆ ಸಫಲ ಳಾಗುತ್ತಾಳೆ ಎಂಬುದನ್ನು ಸಸ್ಪೆನ್ಸ್, ಥ್ರಿಲ್ಲರ್ ಕಥೆಯ ಮೂಲಕ ಈ ಚಿತ್ರದಲ್ಲಿ ನಿರ್ದೇಶಕ ಎಂ. ಎನ್. ಶ್ರೀಕಾಂತ್ ತೋರಿಸಿದ್ದಾರೆ. ಇತ್ತೀಚೆಗೆ ನಾಯಕನಟ ರಾಘವ ರಮಣ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ ರಾಧಾ ಸರ್ಚಿಂಗ್ ರಮಣ ಮಿಸ್ಸಿಂಗ್ ಸಿನಿಮಾದ ಹೊಸ ಪೆÇೀಸ್ಟರನ್ನು ಚಿತ್ರತಂಡ ಬಿಡುಗಡೆ ಮಾಡಿತು.

ಮೈಸೂರು, ಬೆಂಗಳೂರು, ಮಂಗಳೂರು ಮತ್ತು ಹಾಸನ ಸುತ್ತಮುತ್ತ ಸುಮಾರು 60 ದಿನಗಳ ಕಾಲ ಈ ಚಿತ್ರಕ್ಕೆÀ ಚಿತ್ರೀ ಕರಣ ನಡೆಸಲಾಗಿದೆ. ಇದುವರೆಗೆ ಸೆಲಬ್ರಿಟಿ ಫೋಟೋಗ್ರಾಫರ್ ಆಗಿದ್ದ ರಾಘವ್ ರಮಣ ಈ ಚಿತ್ರದ ಮೂಲಕ ನಾಯಕನಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ವೀಕೆಂಡ್ ಚಿತ್ರದಲ್ಲಿ ನಟಿಸಿದ್ದ ನಟಿ ಸಂಜನಾ ಬುರ್ಲಿ ಈ ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿ ಕೊಂಡಿದ್ದಾರೆ. ಅಲ್ಲದೆ ದೃಶ್ಯವೊಂದರಲ್ಲಿ ವಿಶೇಷವಾಗಿ ಬುಲೆಟ್ ಚಲಾಯಿಸಿದ್ದಾರೆ. ಉಳಿದಂತೆ ಈ ಚಿತ್ರದಲ್ಲಿ ಗೋಪಿನಾಥ್ ಭಟ್, ಯಮುನಾ ಶ್ರೀನಿಧಿ, ರೇಖಾ, ಜಾನ್, ಪ್ರದೀಪ್ ತಿಪಟೂರು, ಖಳನಟರು ಗಳಾಗಿ ಚಿರಾಗ್‍ಗೌಡ, ಗುರು ಹೆಗಡೆ ಮುಂತಾದವರು ನಟಿಸಿದ್ದಾರೆ. ಕನ್ನಡ ಸೇರಿದಂತೆ ಮೂರು ಭಾಷೆಯ ಚಿತ್ರರಂಗದಲ್ಲಿ ಕೆಲಸ ಮಾಡಿರುವ ಮೈಸೂರಿನ ಎಂ.ಎನ್. ಶ್ರೀಕಾಂತ್ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಜೊತೆಗೆ ಸಾಹಸ ನಿರ್ದೇಶಕ ನಾಗಿಯೂ ಕೆಲಸ ಮಾಡಿದ್ದಾರೆ. ಸಂತೋಷ್‍ನಾಯಕ್ ಅವರ ಸಾಹಿತ್ಯಕ್ಕೆ, ಟಾಲಿವುಡ್‍ನ ನವನೀತ್ ಚರಿ ಸಂಗೀತ ಸಂಯೋಜಿಸಿದ್ದಾರೆ.

Translate »