ಕೊರೊನಾ: ಆರೋಗ್ಯ ಇಲಾಖೆ ಸುತ್ತೋಲೆ
ಮೈಸೂರು

ಕೊರೊನಾ: ಆರೋಗ್ಯ ಇಲಾಖೆ ಸುತ್ತೋಲೆ

July 19, 2020

ಮೈಸೂರು, ಜು.18(ಎಸ್‍ಪಿಎನ್)- ಕೊರೊನಾ ಸೋಂಕಿಲ್ಲದ ವ್ಯಕ್ತಿಗಳ ಪ್ರಯೋಗಾಲಯ ಫಲಿತಾಂಶವನ್ನು ಎಸ್‍ಎಂಎಸ್ ಮೂಲಕ ಕಳುಹಿಸುವಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಇಲಾಖೆ ಶನಿವಾರ ಸುತ್ತೋಲೆ ಹೊರಡಿಸಿದೆ.

ಪರೀಕ್ಷೆಗೊಳಪಟ್ಟ ವ್ಯಕ್ತಿಗೆ ಸೋಂಕಿಲ್ಲ ಎಂದು ತಿಳಿದ ಕೂಡಲೇ ಎಲ್ಲಾ ಕೋವಿಡ್-19 ಪ್ರಯೋಗಾಲಯಗಳ ನೋಡೆಲ್ ಅಧಿಕಾರಿಗಳು ಆಂಗ್ಲ ಮತ್ತು ಕನ್ನಡ ಭಾಷೆಯಲ್ಲಿ ಎಸ್‍ಎಂಎಸ್ ಮೂಲಕ ಸಂದೇಶ ರವಾನಿಸುವಂತೆ ತಿಳಿಸಿದ್ದಾರೆ.

ಕನ್ನಡದಲ್ಲಿ ಎಸ್.ಆರ್.ಎಫ್. ಐಡಿ: ಎಕ್ಸ್‍ವೈಝಡ್, ಫಲಿತಾಂಶ: ಕೋವಿಡ್-19 ಸೋಂಕು ಇಲ್ಲ ಎಂದು ನಮೂದಿಸಬೇಕು. ಜ್ವರ, ಕೆಮ್ಮು ಅಥವಾ ಉಸಿರಾಟದ ತೊಂದರೆ ಇದ್ದಲ್ಲಿ ಸಹಾಯವಾಣಿ 14410 ಅಥವಾ 104ಕ್ಕೆ ಕರೆ ಮಾಡಬೇಕು ಎಂದು ರಾಷ್ಟ್ರೀಯ ಆರೋಗ್ಯ ಅಭಿಯಾನ ನಿರ್ದೇಶಕಿ ಡಾ.ಆರುಂಧತಿ ಸುತ್ತೋಲೆಯಲ್ಲಿ ಶನಿವಾರ ತಿಳಿಸಿದ್ದಾರೆ.

Translate »