ಮೈಸೂರು ಜಿಲ್ಲೆಯಲ್ಲಿ ಕೊರೊನಾ;   ಹೊಸದಾಗಿ 34 ಮಂದಿಗೆ ಸೋಂಕು
ಮೈಸೂರು

ಮೈಸೂರು ಜಿಲ್ಲೆಯಲ್ಲಿ ಕೊರೊನಾ;  ಹೊಸದಾಗಿ 34 ಮಂದಿಗೆ ಸೋಂಕು

December 31, 2020

ಮೈಸೂರು,ಡಿ.30(ವೈಡಿಎಸ್)-ಮೈಸೂರು ಜಿಲ್ಲೆಯಲ್ಲಿ ಬುಧವಾರ ಕೊರೊನಾ ಸೋಂಕಿತ ರಿಗಿಂತ ಗುಣವಾದವರ ಸಂಖ್ಯೆಯೇ ಹೆಚ್ಚಿತ್ತು. 34 ಮಂದಿಗೆ ಸೋಂಕು ತಗುಲಿದ್ದರೆ, 75 ಸೋಂಕಿತರು ಗುಣ ಹೊಂದಿ ವಿವಿಧ ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ. ಇದರಿಂದ ಜಿಲ್ಲೆಯಲ್ಲಿ ಈವರೆಗೆ ಒಟ್ಟು 52,346 ಮಂದಿ ಸೋಂಕು ತಗುಲಿದಂತಾ ಗಿದೆ. ಇವರಲ್ಲಿ 50,887 ಮಂದಿ ಗುಣವಾಗಿದ್ದಾರೆ. ಇಂದು ಓರ್ವ ಸೋಂಕಿತ ಸಾವನ್ನಪ್ಪಿದ್ದು, ಈವರೆಗೆ ಕೊರೊನಾಗೆ 1,013 ಮಂದಿ ಬಲಿಯಾದಂತಾಗಿದೆ. 446 ಮಂದಿಯಲ್ಲಿ ಇನ್ನೂ ಸೋಂಕು ಸಕ್ರಿಯವಾಗಿದೆ. ಇವರೆಲ್ಲಾ ಹೋಂ ಐಸೊಲೇಷನ್, ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಯಲ್ಲಿ ಶುಶ್ರೂಷೆ ಪಡೆಯುತ್ತಿದ್ದಾರೆ.

ರಾಜ್ಯದಲ್ಲೂ ತಗ್ಗಿದ ಸೋಂಕು: ರಾಜ್ಯದಲ್ಲಿಯೂ ಬುಧವಾರ ಸೋಂಕಿತರಿಗಿಂತ ಗುಣವಾದವರ ಸಂಖ್ಯೆಯೇ ಅಧಿಕವಾಗಿತ್ತು. ಬುಧವಾರ 973 ಮಂದಿಯಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. ಅದರಲ್ಲಿ ಬಾಗಲಕೋಟೆ 8, ಬಳ್ಳಾರಿ 13, ಬೆಳಗಾವಿ 25, ಬೆಂಗಳೂರು ಗ್ರಾಮಾಂತರ 8, ಬೆಂಗಳೂರು ನಗರ 554, ಬೀದರ್ 7, ಚಾಮರಾಜ ನಗರ 12, ಚಿಕ್ಕಬಳ್ಳಾಪುರ 31, ಚಿಕ್ಕಮಗಳೂರು 8, ಚಿತ್ರದುರ್ಗ 19, ದಕ್ಷಿಣಕನ್ನಡ 31, ದಾವಣಗೆರೆ 8, ಧಾರವಾಡ 19, ಹಾಸನ 31,  ಹಾವೇರಿ 6, ಕಲಬುರಗಿ 17, ಕೊಡಗು 18, ಕೋಲಾರ 7, ಕೊಪ್ಪಳ 2, ಮಂಡ್ಯ 18, ಮೈಸೂರು 34, ರಾಯಚೂರು 3, ರಾಮನಗರ 4, ಶಿವಮೊಗ್ಗ 20, ತುಮಕೂರು 28, ಉಡುಪಿ 11, ಉತ್ತರಕನ್ನಡ 7, ವಿಜಯಪುರ 19, ಯಾದಗಿರಿ 4 ಪ್ರಕರಣ ಪತ್ತೆಯಾಗಿದೆ. ಇದರೊಂದಿಗೆ ರಾಜ್ಯದಲ್ಲಿನ ಒಟ್ಟು ಸೋಂಕಿತರ ಸಂಖ್ಯೆ 9,18,544ಕ್ಕೆ ಏರಿಕೆಯಾಗಿದೆ. ಇನ್ನೊಂದೆಡೆ ಬುಧವಾರ 1,217 ಸೋಂಕಿತರು ಗುಣ ಹೊಂದಿದ್ದು, ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ. ರಾಜ್ಯದಲ್ಲಿ ಈವರೆಗೆ 8,94,834 ಮಂದಿ ಗುಣವಾದಂತಾಗಿದೆ. 11,610 ಮಂದಿ ಯಲ್ಲಿನ್ನೂ ಸೋಂಕು ಸಕ್ರಿಯವಾಗಿದ್ದು, ಇವರಿಗೆ ಚಿಕಿತ್ಸೆ ಮುಂದುವರಿದಿದೆ. ಚಿಕಿತ್ಸೆ ಫಲಕಾರಿಯಾಗದೆ ಇಂದು ಕೋವಿಡ್‍ನಿಂದಾಗಿ 7 ಮಂದಿ ಸಾವನ್ನಪ್ಪಿದ್ದಾರೆ. ರಾಜ್ಯದಲ್ಲಿ ಈವರೆಗೆ 12,081 ಮಂದಿ ಕೊರೊನಾದಿಂದ ಮೃತಪಟ್ಟಿದ್ದಾರೆ.

Translate »