ಹಿಂದೂ ಎನ್ನಲು ಕೀಳರಿಮೆ ಏಕೆ?
ಮೈಸೂರು

ಹಿಂದೂ ಎನ್ನಲು ಕೀಳರಿಮೆ ಏಕೆ?

December 31, 2020

ಮೈಸೂರು,ಡಿ.30(ಎಸ್‍ಪಿಎನ್)-ಭಾರತೀಯ ಪರಂ ಪರೆಯ ಮೂಲ ಸೆಲೆ ಹಿಂದೂ ಧರ್ಮ. ಈ ಧರ್ಮ ದಲ್ಲಿ ಹುಟ್ಟಿರುವ ನಾವು-ನೀವು `ಹಿಂದೂ’ ಎಂದು ಹೇಳಲು ಕೀಳರಿಮೆ ಏಕೆ? ಎಂದು ಸಂಸದ ಪ್ರತಾಪ ಸಿಂಹ ಅವರು ಬಿಜೆಪಿ ಕಾರ್ಯಕರ್ತರಿಗೆ ಪ್ರಶ್ನೆ ಮಾಡಿದರು.

ಮೈಸೂರು ನಜರ್‍ಬಾದ್‍ನಲ್ಲಿರುವ ಖಾಸಗಿ ಹೋಟೆಲ್ ನಲ್ಲಿ ಆಯೋಜಿತವಾಗಿದ್ದ ಬಿಜೆಪಿ ಜಿಲ್ಲಾ ಪ್ರಕೋಷ್ಠಗಳ ಜಿಲ್ಲಾ ಕಾರ್ಯಕಾರಿಣಿ ಉದ್ಘಾಟಿಸಿದ ಅವರು, ಅನ್ಯಧರ್ಮೀ ಯರು ಯಾವುದೇ ಒಳಪಂಗಡವಿರಲಿ ಅವರ ಧರ್ಮದ ವಿಚಾರ ಬಂದಾಗ ಒಗ್ಗೂಡುತ್ತಾರೆ. ತಾವು ಹುಟ್ಟಿದ ಧರ್ಮದ ಹೆಸರನ್ನು ಎದೆಯುಬ್ಬಿಸಿ ಹೇಳುತ್ತಾರೆ. ಆದರೆ, ನಾವು ಹಿಂದೂಗಳು ಸಾರ್ವಜನಿಕವಾಗಿ `ಹಿಂದೂ’ ಎಂದು ಹೇಳಲು ಹಿಂಜರಿಯುತ್ತೇವೆ. ಹಿಂದೂ ಧರ್ಮ ಈ ನೆಲದ ಮೂಲ ಪರಂಪರೆ. `ಹಿಂದೂ’ ಎಂದು ಹೇಳಿಕೊಳ್ಳಲು ಯಾವುದೇ ಹಿಂಜರಿಕೆ ಬೇಡ. ಧರ್ಮದ ವಿಚಾರ ಬಂದಾಗ ಸಣ್ಣ-ಪುಟ್ಟ ಭಿನ್ನಾಭಿಪ್ರಾಯಗಳನ್ನು ಬದಿಗಿರಿಸಿ ಒಗ್ಗೂಡಬೇಕು ಎಂದು ಕಿವಿಮಾತು ಹೇಳಿದರು.

ಹೆದ್ದಾರಿ ಸಾಧನೆ: ಕಾಂಗ್ರೆಸ್ 5 ದಶಕಕ್ಕೂ ಅಧಿಕ ಕಾಲದ ಆಡಳಿತದಲ್ಲಿ ದೇಶದಲ್ಲಿ ಕೇವಲ 30 ಸಾವಿರ ಕಿ.ಮೀ. ಹೆದ್ದಾರಿ ನಿರ್ಮಿಸಿದೆ. ಆದರೆ, ಅಟಲ್ ಬಿಹಾರಿ ವಾಜಪೇಯಿ ಅವರು ಅಧಿಕಾರಕ್ಕೆ ಬಂದ 6 ವರ್ಷಗಳಲ್ಲೇ 23 ಸಾವಿರ ಕಿ.ಮೀ.ನಷ್ಟು ಹೆದ್ದಾರಿ ನಿರ್ಮಾಣ ಮಾಡಿ ದರು. ಪ್ರಧಾನಿ ಗ್ರಾಮ ಸಡಕ್ ಯೋಜನೆಯಡಿ ಪ್ರತಿ ಗ್ರಾಮಕ್ಕೂ ರಸ್ತೆ ನಿರ್ಮಾಣಕ್ಕೆ ಒತ್ತು ನೀಡಿದರು ಎಂದರು.

ಹೊಸ ರೈಲು: ನಮ್ಮ ರಾಜ್ಯಕ್ಕೆ ಹೊಸದಾಗಿ ಒಂದು ರೈಲು ಗಾಡಿ ಹಾಕಿಸಿಕೊಳ್ಳಲು ಬಜೆಟ್‍ನಲ್ಲಿಯೇ ಪ್ರಕಟಿಸ ಬೇಕಿತ್ತು. ನಂತರ ರಾಜ್ಯದ ಜನರು ಆ ಬೇಡಿಕೆಗೆ ರೈಲ್ವೆ ಬಜೆಟ್ ಹಿಂದಿನ ದಿನ ಪ್ರತಿಭಟನೆ ಮಾಡುವ ಕಾಲವಿತ್ತು. ಆದರೆ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ರೈಲ್ವೆ ಬಜೆಟ್ ತೆಗೆದು ಹಾಕಲಾಯಿತು. ನನ್ನ ಕ್ಷೇತ್ರಕ್ಕೆ 8 ಹೊಸ ರೈಲುಗಳನ್ನು ಸರ್ಕಾರ ಮಂಜೂರು ಮಾಡಿದೆ. ಅದಕ್ಕಾಗಿ ನಾನು ಯಾವುದೇ ಪ್ರತಿಭಟನೆ ಮಾಡಲಿಲ್ಲ. ಬಜೆಟ್‍ನಲ್ಲಿ ಪ್ರಕಟಿಸಲಿಲ್ಲ. ಇಂತಹ ಹತ್ತು-ಹಲವು ಕೆಲಸಗಳು ಸದ್ದು-ಗದ್ದಲವಿಲ್ಲದೇ ದೇಶದ ವಿವಿಧ ರಾಜ್ಯಗಳಲ್ಲಿ ನಡೆಯುತ್ತಿವೆ. ಈ ಚಮತ್ಕಾರ ಮೋದಿ ಆಡಳಿತಾವಧಿಯಲ್ಲಿ ಮಾತ್ರ ಸಾಧ್ಯ ಎಂದು ಬಣ್ಣಿಸಿದರು.

ಪ್ರಸ್ತುತ ಕರ್ನಾಟಕದಲ್ಲಿ 1.46 ಲಕ್ಷ ಕೋಟಿ ರೂ. ಅನು ದಾನದಲ್ಲಿ ರಾಜ್ಯದ ವಿವಿಧ ಭಾಗಗಳಿಗೆ ಸಂಪರ್ಕ ಕಲ್ಪಿಸುವ ಹೆದ್ದಾರಿ ನಿರ್ಮಾಣವಾಗುತ್ತಿವೆ. ಮೈಸೂರು-ಬೆಂಗಳೂರು, ಬೆಂಗಳೂರು-ಶಿವಮೊಗ್ಗ ಸೇರಿದಂತೆ ಇತರೆ ಭಾಗಗಳ ಹೆದ್ದಾರಿ ಕಾಮಗಾರಿಗಳು ನಡೆಯುತ್ತಿವೆ. 10 ವರ್ಷದ ಯುಪಿಎ ಆಡಳಿತಾವಧಿಯಲ್ಲಿ ಕೇವಲ 10 ಸಾವಿರ ಕಿ.ಮೀ ನಷ್ಟು ಹೆದ್ದಾರಿ ಕಾಮಗಾರಿ ನಡೆದಿದ್ದು, ಮೋದಿ ಅಧಿಕಾರಕ್ಕೆ ಬಂದ ಮೇಲೆ 45 ಸಾವಿರ ಕಿ.ಮೀ ನಷ್ಟು ಹೆದ್ದಾರಿಗಳ ಅಭಿವೃದ್ಧಿಗೊಂಡಿದೆ. ಮತ್ತಷ್ಟು ಹೆದ್ದಾರಿಗಳ ಕಾಮಗಾರಿ ಪ್ರಗತಿಯಲ್ಲಿದೆ ಎಂದರು.

ಪ್ರಧಾನಿ ನರೇಂದ್ರ ಮೋದಿ ಅವರು ಅಧಿಕಾರಕ್ಕೆ ಬರುವ ಮುನ್ನ ದೇಶದಲ್ಲಿ ಕೇವಲ 50 ವಿಮಾನ ನಿಲ್ಲಾಣಗಳಿ ದ್ದವು. ಈಗ ನೂರರ ಗಡಿ ದಾಟಿದೆ. ಪ್ರಾದೇಶಿಕ ವಾಗಿಯೂ ವಿಮಾನ ಹಾರಾಟಕ್ಕೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ `ಉಡಾನ್’ ಯೋಜನೆ ಮೂಲಕ ಒತ್ತು ನೀಡಿದೆ. ಸಾಮಾನ್ಯ ಮನುಷ್ಯನೂ ವಿಮಾನದಲ್ಲಿ ಪ್ರಯಾಣಿಸಬಹುದು ಎಂಬುದನ್ನು ಕೇಂದ್ರ ಸರ್ಕಾರ ತೋರಿಸಿಕೊಟ್ಟಿದೆ ಎಂದರು. ಬಿಜೆಪಿ ರಾಜ್ಯ ಉಪಾಧ್ಯಕ್ಷ ರಾಜೇಂದ್ರ, ಎಂಎಲ್‍ಸಿ ರವಿಕುಮಾರ್, ಮಾಜಿ ಸಚಿವ ಸಿ.ಎಚ್.ವಿಜಯಶಂಕರ್, ಭಾನು ಪ್ರಕಾಶ್, ಸಿದ್ದರಾಜು, ಬಿಜೆಪಿ ನಗರ ಘಟಕ ಅಧ್ಯಕ್ಷ ಶ್ರೀವತ್ಸ, ಮೈಸೂರು ಪ್ರಭಾರಿ ಮೈ.ವಿ.ರವಿಶಂಕರ್, ಮುಡಾ ಅಧ್ಯಕ್ಷ ಹೆಚ್.ವಿ.ರಾಜೀವ್ ಸೇರಿದಂತೆ ಇತರರಿದ್ದರು.

 

 

Translate »