ಮೈಸೂರು, ಡಿ.30(ಆರ್‍ಕೆ)- ಬ್ರಿಟಿಷರ ಕಾಲದಲ್ಲಿ ಪರಿಚಯಿಸಿ ಮುಂದುವರಿಸಿ ಕೊಂಡು ಬಂದಿದ್ದ ಪ್ರತಿಷ್ಠಿತ ಮೈಸೂರು ಘಟಿಕೋತ್ಸವದ ಗೌನ್ ಬದಲಾಯಿಸುವ ಪ್ರಸ್ತಾವನೆಗೆ ಸಿಂಡಿಕೇಟ್ ಸಭೆ ಸಮ್ಮತಿಸಿದೆ.
ಮೈಸೂರು ವಿಶ್ವವಿದ್ಯಾನಿಲಯದ ಕುಲ ಪತಿ ಪ್ರೊ.ಜಿ.ಹೇಮಂತ್‍ಕುಮಾರ್ ಅವರ ಅಧ್ಯಕ್ಷತೆಯಲ್ಲಿ ಕ್ರಾಫರ್ಡ್ ಭವನದಲ್ಲಿ ನಡೆದ ಸಿಂಡಿಕೇಟ್ ಸಭೆಯು ಈ ಸಂಬಂಧ ಚರ್ಚಿಸಿ, ಘಟಿಕೋತ್ಸವದಲ್ಲಿ ಭಾಗವಹಿಸುವ ಗಣ್ಯರು, ಸಿಂಡಿಕೇಟ್ ಮತ್ತು ಶೈಕ್ಷಣಿಕ ಮಂಡಳಿ ಸದಸ್ಯರು ಧರಿಸುವ ಗೌನ್‍ಗಳ ಶೈಲಿ ಬದ ಲಾಯಿಸಲು ತೀರ್ಮಾನಿಸಲಾಯಿತು.
ವಿಶ್ವವಿದ್ಯಾನಿಲಯಗಳ ಅನುದಾನ ಆಯೋಗ (ಯುಜಿಸಿ)ವು ಸಹ ಭಾರ ತೀಯ ಸಂಸ್ಕøತಿ, ಪರಂಪರೆ ಬಿಂಬಿಸುವ ಖಾದಿ ಬಟ್ಟೆಯಿಂದ ತಯಾರಿಸಿದ ಗೌನ್ ಅನ್ನು ಬಳಸುವುದಕ್ಕೆ ಪ್ರೋತ್ಸಾಹ ನೀಡ ಬೇಕೆಂದು ಸಲಹೆ ನೀಡಿರುವ ಹಿನ್ನೆಲೆಯಲ್ಲಿ ಸದಸ್ಯರು ಸುದೀರ್ಘ ಚರ್ಚೆ ನಡೆಸಿ ಅಂತಿಮ ವಾಗಿ ಮುಂದಿನ ಘಟಿಕೋತ್ಸವದಲ್ಲಿ ಗೌನ್ ಬದಲಿಸಲು ಒಪ್ಪಿಗೆ ಸೂಚಿಸಿದರು.
ಮೈಸೂರು ಪೇಟವನ್ನು ಯಥಾವತ್ತಾಗಿ ಉಳಿಸಿಕೊಂಡು ಕೇವಲ ಗೌನ್ ಅನ್ನು ಮಾತ್ರ ಬದಲಾಯಿಸಲು ಅಭಿಪ್ರಾಯ ಕೇಳಿಬಂದ ಹಿನ್ನೆಲೆಯಲ್ಲಿ ವಿಶ್ವವಿದ್ಯಾನಿಲಯದ ಪರೀ ಕ್ಷಾಂಗ ಕುಲಸಚಿವ ಪ್ರೊ. ಜ್ಞಾನಪ್ರಕಾಶ್ ನೇತೃತ್ವದಲ್ಲಿ ಉಪಸಮಿತಿಯೊಂದನ್ನು ಸಿಂಡಿಕೇಟ್ ಸಭೆಯು ರಚಿಸಿತು.
ಗೌನ್‍ಗೆ ಯಾವ ಬಟ್ಟೆ ಬಳಸಬೇಕು, ವಿನ್ಯಾಸ ಹೇಗಿರಬೇಕು, ಬಣ್ಣ ಯಾವುದಿ ರಬೇಕೆಂಬುದರ ಬಗ್ಗೆ ಬೇರೆ ಯೂನಿ ವರ್ಸಿಟಿಗಳಿಗೆ ಭೇಟಿ ನೀಡಿ ಪರಿಶೀಲಿಸಿ ಅಂತಿಮಗೊಳಿಸಿ ವರದಿ ನೀಡುವಂತೆ ಸಮಿತಿಗೆ ಜವಾಬ್ದಾರಿ ವಹಿಸಲಾಯಿತು ಎಂದು ಕುಲಪತಿ ಪ್ರೊ. ಜಿ.ಹೇಮಂತ್ ಕುಮಾರ್ ತಿಳಿಸಿದರು. ಇನ್ನೂ ಸಾಕಷ್ಟು ವಿದ್ಯಾರ್ಥಿಗಳು ಪ್ರವೇಶಾತಿ ಪಡೆಯ ದಿರುವುದರಿಂದ ದ್ವಿತೀಯ ಮತ್ತು ಅಂತಿಮ ವರ್ಷದ ಪದವಿಗೆ ಶುಲ್ಕ ಪಾವತಿಸಲು 15 ದಿನಗಳವರೆಗೆ ಹೆಚ್ಚುವರಿ ಕಾಲಾವಕಾಶ ನೀಡಲು ಇಂದಿನ ಸಿಂಡಿ ಕೇಟ್ ಸಭೆಯು ಒಪ್ಪಿಗೆ ನೀಡಿದೆ ಎಂದು ಅವರು ತಿಳಿಸಿದರು.