ರೈತರು-ಕೇಂದ್ರದ 6ನೇ ಸುತ್ತಿನ ಸಭೆ ಅಂತ್ಯ: ಜ.4ಕ್ಕೆ ಮತ್ತೊಂದು ಸಭೆ!
ಮೈಸೂರು

ರೈತರು-ಕೇಂದ್ರದ 6ನೇ ಸುತ್ತಿನ ಸಭೆ ಅಂತ್ಯ: ಜ.4ಕ್ಕೆ ಮತ್ತೊಂದು ಸಭೆ!

December 31, 2020

ನವದೆಹಲಿ, ಡಿ.30- ಕೃಷಿ ಕಾಯ್ದೆಯ ಪೂರ್ವಾಪರ ಕುರಿತು ಚರ್ಚಿಸಲು ಕೇಂದ್ರ ಸರ್ಕಾರ ಹಾಗೂ ರೈತ ಸಂಘಟನೆಗಳ ನಡುವಿನ ಆರನೇ ಸುತ್ತಿನ ಮಾತುಕತೆ ಅಂತ್ಯವಾಗಿದೆ. ಮುಂಬರುವ(2021) ಜನವರಿ 4ಕ್ಕೆ ಏಳನೇ ಸುತ್ತಿನ ಮಾತು ಕತೆಯನ್ನು ನಿಗದಿಪಡಿಸಲಾಗಿದೆ.

ರೈತರ ಸಮಸ್ಯೆಗಳ ಕುರಿತು ಕೇಂದ್ರದ ಗಮನ ಸೆಳೆಯಲು ಒಂದು ಜಂಟಿ ಸಮಿತಿ ರಚಿಸುವ ಭರವಸೆಯನ್ನು ನೀಡ ಲಾಗಿದ್ದು, ಇದಕ್ಕೆ ರೈತ ಸಂಘಟನೆಗಳು ಒಪ್ಪಿಗೆ ಸೂಚಿಸಿವೆ. ಇಂದಿನ ಸಭೆಯಲ್ಲಿ 41 ರೈತ ಸಂಘಟನೆಗಳ ಮುಖಂಡರು ಭಾಗವಹಿಸಿದ್ದರು.

ಕೇಂದ್ರ ಸರ್ಕಾರ, ರೈತ ಸಂಘಟನೆಗಳ ಪ್ರತಿನಿಧಿಗಳನ್ನೊಳಗೊಂಡ ವಿಶೇಷ ಸಮಿತಿ ರಚನೆಯ ಭರವಸೆ ನೀಡ ಲಾಗಿದ್ದು, ಈ ಸಮಿತಿ ರೈತರ ಸಮಸ್ಯೆ ಗಳನ್ನು ಕೇಂದ್ರ ಸರ್ಕಾರಕ್ಕೆ ತಲುಪಿ ಸುವುದಷ್ಟೇ ಅಲ್ಲದೇ ಪರಿಹಾರಗಳನ್ನು ಸೂಚಿಸುವ ಕೆಲಸವನ್ನು ಮಾಡಲಿದೆ.

ಸಭೆಯ ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್, ಒಟ್ಟು ನಾಲ್ಕು ಸಮಸ್ಯೆಗಳ ಪೈಕಿ ಎರಡು ಸಮಸ್ಯೆ ಗಳ ಕುರಿತು ಒಮ್ಮತಕ್ಕೆ ಬರಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಆದರೆ ಕೃಷಿ ಕಾಯ್ದೆಗಳನ್ನು ಹಿಂಪಡೆ ಯುವುದಿಲ್ಲ ಎಂದು ಮತ್ತೊಮ್ಮೆ ಸ್ಪಷ್ಟ ಪಡಿಸಿರುವ ನರೇಂದ್ರ ಸಿಂಗ್ ತೋಮರ್, ರೈತರ ಸಮಸ್ಯೆಗಳನ್ನು ಪರಿಗಣಿಸಲು ವಿಶೇಷ ಸಮಿತಿ ರಚನೆಯ ಭರವಸೆ ನೀಡಿದರು. ತಮ್ಮ ಎಲ್ಲಾ ಬೇಡಿಕೆಗಳು ಈಡೇರದ ಹಿನ್ನೆಲೆಯಲ್ಲಿ ಪ್ರತಿಭಟನೆ ಯನ್ನು ಮುಂದುವರೆಸುವ ನಿರ್ಣಯ ಕೈಗೊಂಡಿರುವ ರೈತ ಸಂಘಟನೆಗಳು, ಜ.4ರಂದು 7ನೇ ಸುತ್ತಿನ ಮಾತು ಕತೆವರೆಗೂ ಪ್ರತಿಭಟನೆ ಮುಂದುವರೆ ಯಲಿದೆ ಎಂದಿವೆ. ರೈತ ಸಂಘಟನೆಯ ನಾಯಕ ಟಿಕಾಯತ್, ದೆಹಲಿ ಗಡಿಯಲ್ಲೇ ಈ ಬಾರಿ ಹೊಸ ವರ್ಷಾಚರಣೆ ಮಾಡಲಿದ್ದೇವೆ ಎಂದು ಮಾರ್ಮಿಕವಾಗಿ ಹೇಳಿ ದ್ದಾರೆ. ದೆಹಲಿಯಲ್ಲಿ ಭೀಕರ ಚಳಿ ಆರಂಭವಾಗಿದ್ದು, ವೃದ್ಧ ಪ್ರತಿಭಟನಾಕಾರರನ್ನು ಊರಿಗೆ ಮರಳಿ ಕಳುಹಿಸಿ ಎಂದು ಕೇಂದ್ರ ಸಚಿವ ನರೇಂದ್ರ ಸಿಂಗ್ ತೋಮರ್ ರೈತ ಸಂಘಟನೆಗಳಲ್ಲಿ ಮನವಿ ಮಾಡಿದ್ದಾರೆ.

 

 

Translate »