ಕೊರೊನಾ ಸೋಂಕಿತರ, ಅವರ ಅಕ್ಕಪಕ್ಕದ ಮನೆಗಳಿಗೆ ಸ್ಯಾನಿಟೈಸ್ ಮಾಡಿ
ಮೈಸೂರು

ಕೊರೊನಾ ಸೋಂಕಿತರ, ಅವರ ಅಕ್ಕಪಕ್ಕದ ಮನೆಗಳಿಗೆ ಸ್ಯಾನಿಟೈಸ್ ಮಾಡಿ

July 27, 2020

ಮೈಸೂರು,ಜು.26(ಆರ್‍ಕೆ)-ಕೊರೊನಾ ಸೋಂಕಿ ತರು ಹಾಗೂ ಅಕ್ಕಪಕ್ಕದ ಮನೆಗಳಿಗೆ ಸ್ಯಾನಿಟೈಸ್ ಮಾಡಿ ಕೋವಿಡ್-19 ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ನೋಡಿಕೊಳ್ಳಿ ಎಂದು ಶಾಸಕ ಎಲ್. ನಾಗೇಂದ್ರ ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ.

ಮೈಸೂರಿನ ಜಲದರ್ಶಿನಿ ಅತಿಥಿ ಗೃಹದಲ್ಲಿ ನಡೆದ ಕೋವಿಡ್-19 ಟಾಸ್ಕ್ ಫೋರ್ಸ್ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು, ಕೋವಿಡ್-19 ಪರೀಕ್ಷೆಯಲ್ಲಿ ಪಾಸಿ ಟಿವ್ ಬಂದ ತಕ್ಷಣ ಆ ವ್ಯಕ್ತಿಯನ್ನು ತಡಮಾಡದೇ ಆಸ್ಪತ್ರೆ ಅಥವಾ ಕೋವಿಡ್ ಕೇರ್ ಸೆಂಟರ್‍ಗೆ ಕರೆದೊಯ್ಯ ಬೇಕು ಹಾಗೂ ಸೋಂಕಿತರು ವಾಸವಿದ್ದ ಮನೆ ಹಾಗೂ ಅಕ್ಕಪಕ್ಕದ ಮನೆಗಳಿಗೆ ರಸಾಯನಿಕ ದ್ರಾವಣ ಸಿಂಪಡಿಸ ಬೇಕು ಎಂದರು. ಚಾಮರಾಜ ವಿಧಾನಸಭಾ ಕ್ಷೇತ್ರಕ್ಕೆ ಕನಿಷ್ಠ 3 ಆಂಬುಲೆನ್ಸ್ ಒದಗಿಸುವ ಬಗ್ಗೆ ನೋಡಲ್ ಅಧಿಕಾರಿ ಕಾರ್ಯಪ್ರವೃತ್ತರಾಗಬೇಕು. ಮಂಡಿಮೊಹಲ್ಲಾ, ತಿಲಕ್‍ನಗರಗಳಲ್ಲಿ ಹೆಚ್ಚು ಸೋಂಕಿತರು ಪತ್ತೆಯಾಗುತ್ತಿರು ವುದರಿಂದ ಅಗತ್ಯ ರ್ಯಾಪಿಡ್ ಆ್ಯಂಟಿಜೆನ್ ಕಿಟ್‍ಗಳನ್ನು ಪೂರೈಸುವಂತೆ ಡಿಹೆಚ್‍ಓ ಡಾ.ವೆಂಕಟೇಶ್ ಅವರಿಗೆ ಸೂಚನೆ ನೀಡಿದರು. ಸ್ವಯಂ ಸೇವಕರನ್ನೂ ಈ ಕಾರ್ಯಕ್ಕೆ ಬಳಸಿಕೊಂಡು ಯಶಸ್ವಿಯಾಗಿ ಕೋವಿಡ್ ನಿರ್ವಹಿಸಬೇಕು. ಪ್ರತೀ ಮೂರ್ನಾಲ್ಕು ದಿನಗಳಿಗೊಮ್ಮೆ ಟಾಸ್ಕ್‍ಫೋರ್ಸ್ ಸಮಿತಿ ಸಭೆ ನಡೆಸಿ ಕಾರ್ಯನಿರ್ವ ಹಿಸಬೇಕೆಂದ ಶಾಸಕರು, ಎಲ್ಲಾ ಮಾಹಿತಿಯನ್ನು ತಮಗೆ ಆಗಿಂದಾಗ್ಯೆ ನೀಡುತ್ತಿರಬೇಕೆಂದೂ ಅಧಿಕಾರಿ ಗಳಿಗೆ ತಾಕೀತು ಮಾಡಿದರು. ಪಾಲಿಕೆ ಸೂಪರಿಂಟೆಂ ಡಿಂಗ್ ಇಂಜಿನಿಯರ್ ಬಿಳಿಗಿರಿ ರಂಗಸ್ವಾಮಿ, ಕೊಳಚೆ ನಿರ್ಮೂಲನಾ ಮಂಡಳಿ ಎಕ್ಸಿಕ್ಯೂಟಿವ್ ಇಂಜಿನಿ ಯರ್ ಹರೀಶ್, ಮುಡಾ ಅಸಿಸ್ಟೆಂಟ್ ಇಂಜಿನಿಯರ್ ಕೆ.ಆರ್.ಮಹೇಶ್, ಪಾಲಿಕೆ ಸದಸ್ಯ ಸುಬ್ಬಯ್ಯ, ಬಿಜೆಪಿ ಮುಖಂಡರಾದ ಸೋಮಶೇಖರ್, ಕಿರಣ್‍ಗೌಡ, ವಾಣೀಶ್ ಕುಮಾರ್, ಪುನೀತ್‍ಗೌಡ, ರಮೇಶ್, ಚಿಕ್ಕವೆಂಕಟು ಹಾಗೂ ಇತರರು ಸಭೆಯಲ್ಲಿ ಉಪಸ್ಥಿತರಿದ್ದರು.

Translate »