ರೋಗ ಲಕ್ಷಣವಿಲ್ಲದವರಿಗೂ ಕೊರೊನಾ ಸೋಂಕು ಮಳವಳ್ಳಿಯ ನಾಲ್ವರಿಗೆ ರೋಗ ಲಕ್ಷಣಗಳಿರಲಿಲ್ಲ
ಮಂಡ್ಯ

ರೋಗ ಲಕ್ಷಣವಿಲ್ಲದವರಿಗೂ ಕೊರೊನಾ ಸೋಂಕು ಮಳವಳ್ಳಿಯ ನಾಲ್ವರಿಗೆ ರೋಗ ಲಕ್ಷಣಗಳಿರಲಿಲ್ಲ

April 9, 2020

ಮಂಡ್ಯ, ಏ.8(ನಾಗಯ್ಯ)-ನೆಗಡಿ, ಕೆಮ್ಮು, ಜ್ವರದಂತಹ ಲಕ್ಷಣಗಳಿಲ್ಲದಿದ್ದವರಲ್ಲೂ ಕೊರೊನಾ ವೈರಸ್ ಪತ್ತೆಯಾಗಿದೆ. ಮಳವಳ್ಳಿಯ ನಾಲ್ವರಲ್ಲಿಯೂ ರೋಗ ಲಕ್ಷಣಗಳಿಲ್ಲದಿದ್ದರೂ ಕೊರೊನಾ ಸೋಂಕು ದೃಢಪಟ್ಟಿದೆ ಎಂದು ಮಂಡ್ಯ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ತಿಳಿಸಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ದೆಹಲಿಯ ತಬ್ಲಘಿ ಜಮಾತ್‍ನ 10 ಮೌಲ್ವಿಗಳ ಸಂಪರ್ಕದಲ್ಲಿದ್ದ ಮಳವಳ್ಳಿಯ 7 ಮಂದಿಯ ರಕ್ತ ಮಾದರಿ ಯನ್ನು ತಪಾಸಣೆ ಗೊಳಪಡಿಸಲಾಗಿತ್ತು, ಈ ಪೈಕಿ ಯಾವುದೇ ರೋಗ ಲಕ್ಷಣಗಳಿಲ್ಲದಿದ್ದರೂ ನಾಲ್ವರಿಗೆ ಕೊರೊನಾ ಸೋಂಕು ಪತ್ತೆಯಾಗಿದೆ ಎಂದು ತಿಳಿಸಿದರು.

ಇದುವರೆಗೂ ನೆಗಡಿ, ಕೆಮ್ಮು, ಜ್ವರದಂತಹ ಲಕ್ಷಣಗಳಿದ್ದ ವರಿಗೆ ತಪಾಸಣೆಗೊಳಪಡಿಸಿದಾಗ ಕೊರೊನಾ ವೈರಸ್ ಪತ್ತೆಯಾದ ನಿದರ್ಶನ ನೋಡುತ್ತಿದ್ದೆವು, ಆದರೆ ಇದೀಗ ಮಂಡ್ಯ ಜಿಲ್ಲೆಯ ಮಳವಳ್ಳಿಯ ನಾಲ್ವರಲ್ಲಿ ರೋಗ ಲಕ್ಷಣಗಳಿಲ್ಲದಿದ್ದರೂ ಕೊರೊನಾ ಸೋಂಕು ದೃಢವಾಗಿರುವುದು ಇದೇ ಮೊದಲು ಎಂದರು. ಶೇ. 80 ರಷ್ಟು ಮಂದಿಯಲ್ಲಿ ರೋಗ ಲಕ್ಷಣ ಇರು ವುದೇ ಇಲ್ಲ. ಶೇ. 20ರಷ್ಟು ಮಂದಿಯಲ್ಲಿ ನೆಗಡಿ, ಕೆಮ್ಮುಗಳಂತಹ ಲಕ್ಷಣಗಳು 10 ದಿನದ ಬಳಿಕ ಕಾಣಿಸಿಕೊಳ್ಳುತ್ತವೆ. ಇನ್ನೂ ಶೇ. 5 ರಷ್ಟ್ಟು ಮಂದಿಗೆ ಕೇವಲ ಐದಾರು ದಿನಗಳಲ್ಲಿಯೇ ತೀವ್ರ ರೋಗಲಕ್ಷಣ ಕಾಣಿಸಿಕೊಳ್ಳುತ್ತದೆ ಎಂದು ಅವರು ತಿಳಿಸಿದರು.

ಮೊದಲು ಸುಳ್ಳು ಹೇಳಿದ್ದರು: ಇದೀಗ ಕೊರೊನಾ ಸೋಂಕು ದೃಢ ವಾಗಿರುವ 4 ಮಂದಿಯೂ ದೆಹಲಿಗೆ ಹೋಗಿಲ್ಲ ಎಂದು ಹೇಳಿದ್ದರು. ತಾವು ಹಣ್ಣು, ತರಕಾರಿ ಮಾರಾಟ ಮಾಡಿ ವಿವಿಧೆಡೆ ಇರುವುದಾಗಿಯೂ ತಿಳಿಸಿದ್ದರು. ಆದರೆ, ಪೆÇಲೀಸ್‍ರು ವಿಚಾರಣೆ ನಡೆಸಿದಾಗ ದೆಹಲಿಯ ತಬ್ಲಿಘಿ ಜಮಾತ್‍ಗೆ ಹೋಗಿ ಬಂದಿರುವುದಾಗಿ ಒಪ್ಪಿಕೊಂಡಿದ್ದಾರೆ ಎಂದು ತಿಳಿಸಿದರು.

ಪ್ರತಿ ಮನೆ ತಪಾಸಣೆ: ಇದೀಗ ರೋಗ-ಲಕ್ಷಣಗಳಿಲ್ಲದವ ರಿಗೂ ಕೊರೊನಾ ವೈರಸ್ ಪತ್ತೆಯಾದ ಹಿನ್ನೆಲೆಯಲ್ಲಿ ದರ್ಗಾ ಇರುವ ಮಳವಳ್ಳಿ ಪಟ್ಟಣ ಹಾಗೂ ದೆಹಲಿಯ 10 ಮೌಲ್ಚಿಗಳು ಸುತ್ತಾಡಿ ರುವ ಎಲ್ಲಾ ಕಡೆಗಳಲ್ಲೂ ಮನೆಯಲ್ಲಿನ ಜನರನ್ನು ತಪಾಸಣೆಗೆ ಒಳಪಡಿಸಲಾಗುತ್ತಿದೆ. ದೆಹಲಿ ಜಮಾತ್‍ಗೆ ಮಾರ್ಚ್‍ನಲ್ಲಿ ಹೋಗಿಬಂದವರಷ್ಟೇ ಅಲ್ಲದೆ, ಜನವರಿ ಮತ್ತು ಫೆಬ್ರವರಿಯಲ್ಲಿ ಹೋಗಿ ಬಂದಿರುವ ಜನರು ಸಹ ಸ್ವಯಂ ತಪಾಸಣೆಗೊ ಳಪಡಬೇಕು. ತಪ್ಪಿದ್ದಲ್ಲಿ ಪೆÇಲೀಸ್ ಮೂಲಕ ತಪಾಸಣೆ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಇದುವರೆಗೂ ಬೆಂಗಳೂರು- ಮೈಸೂರು ಹೆದ್ದಾರಿ ನಡುವೆ ಇದ್ದರೂ ಕೊರೊನಾ ಭೀತಿಯಿಲ್ಲದೆ ನೆಮ್ಮದಿಯಿಂದಿದ್ದ ಮಂಡ್ಯದಲ್ಲೀಗ ಲಕ್ಷಣ ರಹಿತ ಸೋಂಕು ಪತ್ತೆಯಾಗಿರೋದು ಜಿಲ್ಲೆಯ ಜನರ ನೆಮ್ಮದಿಯನ್ನೇ ಕೆಡಿಸಿದೆ.

Translate »