ಮೈಸೂರು ಡಿಡಿಪಿಐ, ಕಚೇರಿ 4 ಸಿಬ್ಬಂದಿ, 25 ಶಿಕ್ಷಕರಿಗೂ ಸೋಂಕು
ಮೈಸೂರು

ಮೈಸೂರು ಡಿಡಿಪಿಐ, ಕಚೇರಿ 4 ಸಿಬ್ಬಂದಿ, 25 ಶಿಕ್ಷಕರಿಗೂ ಸೋಂಕು

September 30, 2020

ಮೈಸೂರು, ಸೆ.29(ಎಸ್‍ಪಿಎನ್)- ಮೈಸೂರು ಜಿಲ್ಲೆಯ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರು (ಡಿಡಿಪಿಐ) ಮತ್ತು ಕಚೇರಿಯ ನಾಲ್ವರು ಗುಮಾಸ್ತರು ಹಾಗೂ 25ಕ್ಕೂ ಹೆಚ್ಚು ಶಿಕ್ಷಕರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಇದು ಶಿಕ್ಷಕ ಸಮೂಹದಲ್ಲಿ ತೀವ್ರ ಆತಂಕಕ್ಕೆ ಕಾರಣ ವಾಗಿದೆ. ಮೈಸೂರು ನಗರದ ಉತ್ತರ, ದಕ್ಷಿಣ ಹಾಗೂ ತಾಲೂಕಿನ 500ಕ್ಕೂ ಹೆಚ್ಚು ಶಿಕ್ಷಕರಿಗೆ ಕೋವಿಡ್-19 ಪರೀಕ್ಷೆ ನಡೆಸಲಾಗಿದ್ದು, 25 ಶಿಕ್ಷಕರಿಗೆ ಸೋಂಕು ಇರುವುದು ಕಂಡುಬಂದಿದೆ ಎಂದು ಮೈಸೂರು ಜಿಲ್ಲೆ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯ ದರ್ಶಿ ಟಿ.ಎ.ಸೋಮೇಗೌಡ `ಮೈಸೂರು ಮಿತ್ರ’ನಿಗೆ ಮಾಹಿತಿ ನೀಡಿದರು.

ಡಿಡಿಪಿಐ ಪಾಂಡುರಂಗ ಹಾಗೂ ಕಚೇರಿಯ ನಾಲ್ವರು ಗುಮಾಸ್ತರಿಗೆ ಕಳೆದ ಭಾನುವಾರ ಕೊರೊನಾ ಸೋಂಕು ದೃಢ ಪಟ್ಟಿದೆ. ಹುಣಸೂರು ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ವ್ಯಾಪ್ತಿಯ `ನಲಿ-ಕಲಿ’ ತರಬೇತಿ ಯಲ್ಲಿದ್ದ ಇಬ್ಬರು ಶಿಕ್ಷಕರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಈ ಬೆಳವಣಿಗೆ ಕಂಡು ಶಿಕ್ಷಕ ವಲಯ ಆತಂಕಕ್ಕೀಡಾಗಿದೆ. ಡಿಡಿಪಿಐ ಕಚೇರಿ ಸಿಬ್ಬಂದಿ ಜಾಗದ ಸಮಸ್ಯೆಯಿಂದಾಗಿ ಒತ್ತೊತ್ತಿಗೆ ಕುಳಿತು ಕೆಲಸ ಮಾಡುತ್ತಿದ್ದು ದರಿಂದ ಸೋಂಕು ಒಬ್ಬರಿಂದೊಬ್ಬರಿಗೆ ಹರ ಡಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳ ಬೇಕಿದ್ದುದನ್ನು ನಿರ್ವಹಿಸುವಲ್ಲಿ ಕಚೇರಿ ಸಿಬ್ಬಂದಿ ಮತ್ತು ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ತರಬೇತಿ-ಭೀತಿ: ಕೊರೊನಾ ನಡುವೆ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದೆಂಬ ಉದ್ದೇಶದಿಂದ ರಾಜ್ಯ ಸರ್ಕಾರ ವಿದ್ಯಾಗಮ ಯೋಜನೆ ಮೂಲಕ ಶಿಕ್ಷಕರು ಮನೆಮನೆಗೆ ಭೇಟಿ ನೀಡಿ (ಕೋವಿಡ್-19 ನಿಯಮಗಳನ್ನು ಪಾಲಿಸಿ) ವಿದ್ಯಾರ್ಥಿಗಳನ್ನು ಶಿಕ್ಷಣದಲ್ಲಿ ತೊಡಗಿಸುತ್ತಿರುವುದು ಒಳ್ಳೆಯ ಬೆಳವಣಿಗೆ. ಆದರೆ, ಕೊರೊನಾ ಸೋಂಕಿತನ ತೀವ್ರತೆ ನಡುವೆಯೂ ಎಲ್ಲಾ ತಾಲೂಕಿನಲ್ಲಿ `ನಲಿ-ಕಲಿ’ ಮತ್ತು `ಜೀವನ ಕೌಶಲ’ ತರಬೇತಿ ಗಳನ್ನು ಶಿಕ್ಷಕರಿಗೆ ಹಮ್ಮಿಕೊಂಡಿರುವುದು ಎಷ್ಟರಮಟ್ಟಿಗೆ ಸರಿ? ಎಂದು ಪ್ರಶ್ನಿಸಿದರು.
ಶಿಕ್ಷಕ ಸಮುದಾಯದಲ್ಲಿ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಬಗ್ಗೆ ಶಿಕ್ಷಣಾಧಿಕಾರಿಗಳು ತಲೆ ಕೆಡಿಸಿಕೊಳ್ಳುತ್ತಿಲ್ಲ. ಕೊರೊನಾ ಬಗ್ಗೆ ಶಿಕ್ಷಕ ಸಮುದಾಯ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುತ್ತಿದೆ. ಈಗ ಅವರಿಗೇ ಸೋಂಕು ಹರಡಿರುವುದು ಆತಂಕದ ವಿಷಯ. ಹಾಗಾಗಿ ಮೈಸೂರು ಜಿಲ್ಲೆಯಲ್ಲಿ ಶಿಕ್ಷಕರಿಗಾಗಿ ಹಮ್ಮಿಕೊಂಡಿರುವ ತರಬೇತಿ ಶಿಬಿರವನ್ನು ಕೂಡಲೇ ರದ್ದುಪಡಿಸಬೇಕು. ಕೋವಿಡ್-19 ನಿಯಂತ್ರಣಕ್ಕೆ ಬರುವವರೆಗೂ ಯಾವುದೇ ತರಬೇತಿ ಹಮ್ಮಿಕೊಳ್ಳಬಾರದು ಎಂದು ಒತ್ತಾಯಿಸಿದರು.

ಶುಚಿತ್ವಕ್ಕೆ ಆದ್ಯತೆ ಇಲ್ಲ: ಡಿಡಿಪಿಐ ಕಚೇರಿ ಸಿಬ್ಬಂದಿ ಸಾಮಾಜಿಕ ಅಂತರ ಕಾಪಾಡಿ ಕೊಂಡು ಕರ್ತವ್ಯ ನಿರ್ವಹಿಸದ ಹಿನ್ನೆಲೆಯಲ್ಲಿ ಹಾಗೂ ಕೆಲ ಅಧಿಕಾರಿಗಳು ಮಾಸ್ಕ್ ಧರಿಸದೇ ನಿರ್ಲಕ್ಷ್ಯ ತೋರಿದ್ದರಿಂದ ಕೊರೊನಾ ಸೋಂಕು ಹರಡಿದೆ. ಕಚೇರಿಯಲ್ಲಿ ಶುಚಿತ್ವಕ್ಕೆ ಗಮನ ನೀಡುತ್ತಿಲ್ಲ ಎಂಬ ಆರೋಪವೂ ಕೇಳಿ ಬರುತ್ತಿದೆ. ಇದು ಬೇಸರದ ಸಂಗತಿ ಎಂದರು.

 

 

Translate »