ಕೊರೊನಾ ಸೋಂಕು  ಸಂಪೂರ್ಣ ತಡೆಗಟ್ಟಲಾಗಲಿಲ್ಲ
ಮೈಸೂರು

ಕೊರೊನಾ ಸೋಂಕು ಸಂಪೂರ್ಣ ತಡೆಗಟ್ಟಲಾಗಲಿಲ್ಲ

May 28, 2021

ಮೈಸೂರು, ಮೇ 27(ಆರ್‍ಕೆಬಿ)- ಕೊರೊನಾ ಸೋಂಕು ಸಂಪೂರ್ಣ ತಡೆಗಟ್ಟಲು ನಮಗೆ ಸಾಧ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ ಸಂಪೂರ್ಣ ಲಾಕ್‍ಡೌನ್ ಅನಿವಾರ್ಯತೆ ಬಂದಿದೆ. ವಾರದಲ್ಲಿ 2 ದಿನ ಸಡಿಲಿಸಿದ್ದೇವೆ. ಅನಿವಾರ್ಯವಿದ್ದರೆ ಮಾತ್ರ ಹೊರಗೆ ಬನ್ನಿ, ಮನೆಯಲ್ಲೇ ಇದ್ದು ಕೊರೊನಾ ತಡೆಗೆ ನಮ್ಮೊಂದಿಗೆ ಸಹಕರಿಸಿ ಎಂದು ಮೈಸೂರು-ಕೊಡಗು ಸಂಸದ ಪ್ರತಾಪ್‍ಸಿಂಹ ಇಂದಿಲ್ಲಿ ಮೈಸೂರು ನಗರ ಮತ್ತು ಜಿಲ್ಲೆಯ ಜನ ರಲ್ಲಿ ಮನವಿ ಮಾಡಿಕೊಂಡರು.

ಮೈಸೂರಿನ ಜಲದರ್ಶಿನಿ ಅತಿಥಿಗೃಹದ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತ ನಾಡಿದ ಅವರು, ಲಾಕ್‍ಡೌನ್ ಅನುಷ್ಠಾನ ಗೊಳಿಸುವ ಸಂದರ್ಭದಲ್ಲಿ ಜನರು ಮತ್ತೇ ಹೊರಬರುವುದು, ಪೊಲೀಸರ ಮೇಲೆ ಆರೋಪ ಮಾಡುವುದು, ಆಡಳಿತ ಮತ್ತು ಜನರ ನಡುವೆ ಅಪನಂಬಿಕೆ, ಸಂಘರ್ಷದ ವಾತಾವರಣ ನಿರ್ಮಿಸುವುದು ಬೇಡ ಎಂದು ಮನವಿ ಮಾಡಿದರು.

ಸಂಪೂರ್ಣ ಲಾಕ್‍ಡೌನ್ ಘೋಷಣೆ ಯಿಂದ ಮುಂದಿನ 15 ದಿನದೊಳಗೆ ಕೊರೊನಾ ಪ್ರಕರಣಗಳನ್ನು ಮೈಸೂರು ನಗರ ಮತ್ತು ಗ್ರಾಮಾಂತರ ಭಾಗದಲ್ಲಿ ಗಣನೀಯ ಪ್ರಮಾಣದಲ್ಲಿ ನಿಯಂತ್ರಣಕ್ಕೆ ತರಲಿದ್ದೇವೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಗ್ರಾಮೀಣ ಭಾಗದಲ್ಲಿ ಸೋಂಕಿತರ ಸಂಖ್ಯೆ ದಿನೇದಿನೆ ಹೆಚ್ಚುತ್ತಿದೆ. ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮ ಶೇಖರ್ ಜಿಲ್ಲೆಯ ಎಲ್ಲಾ ತಾಲೂಕು ಪ್ರದೇಶ ಗಳಿಗೂ ಭೇಟಿ ನೀಡಿ ಪರಿಸ್ಥಿತಿಯನ್ನು ಅವ ಲೋಕಿಸಿದ್ದಾರೆ. ಮಾಹಿತಿ, ಜಾಗೃತಿಯ ಕೊರತೆ ಕಾರಣದಿಂದ ಕೊರೊನಾ ಸೋಂಕಿತರು ಸರಿಯಾದ ಚಿಕಿತ್ಸೆ ತಡೆ ಯದೇ ಸೋಂಕು ಉಲ್ಬಣವಾಗಿದೆ. ಸಾವು-ನೋವು ಜಾಸ್ತಿಯಾಗಿದೆ ಎಂದು ಅವರಿಗೆ ಮನವರಿಕೆಯಾಗಿದೆ. ಹೀಗಾಗಿ ಜನಪ್ರತಿನಿಧಿಗಳೊಂದಿಗೆ ಚರ್ಚಿಸಿ, ಸಂಪೂರ್ಣ ಲಾಕ್‍ಡೌನ್ ಘೋಷಿಸ ಲಾಗಿದೆ ಎಂದು ಹೇಳಿದರು.

ಕೊರೊನಾ ಉಲ್ಬಣಕ್ಕೆ ನಮ್ಮ ಮತ್ತು ಜನರ ನಿರ್ಲಕ್ಷ್ಯ ಕಾರಣ

ಮೈಸೂರಿನಲ್ಲಿ ಎರಡು ಹಂತದ ಜನತಾ ಕಫ್ರ್ಯೂ ಮತ್ತು ಲಾಕ್‍ಡೌನ್ ವೇಳೆ ಪ್ರಯೋಜನವಾಗಿಲ್ಲ ಎಂಬುದನ್ನು ಜನಪ್ರತಿನಿಧಿಯಾಗಿ ಒಪ್ಪಲು ತಯಾರಿ ಲ್ಲವೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಕೋವಿಡ್ ಪರೀಕ್ಷೆ ಮಾಡು ವುದನ್ನು ಕಡಿಮೆ ಮಾಡಬಾರದಿತ್ತು. ಖಂಡಿತ, ಕಡಿಮೆ ಮಾಡಿದ್ದರಿಂದಲೇ ನಮಗೆ ಲೆಕ್ಕ ಸಿಗದೇ ಕೊರೊನಾ ಪ್ರಕರಣ ಗಳು ಹೆಚ್ಚಲು ದಾರಿಯಾಯಿತು ಎಂಬು ದನ್ನು ಮುಕ್ತವಾಗಿ ಒಪ್ಪಿಕೊಳ್ಳುವುದಾಗಿ ಪ್ರತಾಪ್‍ಸಿಂಹ ತಿಳಿಸಿದರು.

ಲಸಿಕೆ ಹಾಕಿಸಿಕೊಳ್ಳಿ ಎಂದರೆ ಜನರೇ ಬರುತ್ತಿರಲಿಲ್ಲ. ಈಗ ಸಾವಿನ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಜನರೇ ಲಸಿಕೆ ಬೇಕು ಎನ್ನುತ್ತಿದ್ದಾರೆ. ಕೋವಿಡ್ ಮಿತ್ರಕ್ಕೆ ಬಹಳಷ್ಟು ಜನ ಬರುತ್ತಿದ್ದಾರೆ. ಕೆಮ್ಮು, ಶೀತ, ನೆಗಡಿ ಏನೇ ಬಂದರೂ ನಾವು ಕೋವಿಡ್ ಪರೀಕ್ಷೆಗೆ ಹೋಗಬೇಕೆಂದು ಅವರೇ ಮುಂದೆ ಬರುತ್ತಿದ್ದಾರೆ. ಈ ಮಧ್ಯೆ ಸ್ವಲ್ಪ ಉದಾಸೀನ ಪ್ರವೃತ್ತಿ ಇರುತ್ತಿತ್ತು. ಪಾಸಿಟಿವ್ ಇದ್ದರೂ ಗೊತ್ತಿಲ್ಲದೇ ಬೇಜ ವಾಬ್ದಾರಿ ತೋರಿದ್ದರಿಂದಾಗಿ ಅದು ಹರಡುವ ಸಂಖ್ಯೆ ಜಾಸ್ತಿಯಾಗಿತ್ತು. ಇದರಲ್ಲಿ ನಮ್ಮ ಮತ್ತು ಜನರ ಇಬ್ಬರ ನಿರ್ಲಕ್ಷ್ಯ ಕೂಡ ಕಾರಣ ಎಂದು ಹೇಳಿದರು.

ಕಟ್ಟುನಿಟ್ಟಿನ ಲಾಕ್‍ಡೌನ್ ನಮ್ಮಲ್ಲಿ ಸ್ವಲ್ಪ ತಡವಾಗಿ ಮಾಡುತ್ತಿದ್ದೇವಷ್ಟೆ. ಲಾಕ್ ಡೌನ್‍ನಲ್ಲಿಯೇ ನಾವು ಪರಿಸ್ಥಿತಿಯನ್ನು ತಹಬದಿಗೆ ತರಬಹುದಾ ಎಂದು ಯೋಚನೆ ಮಾಡಿದ್ದೆವು. ಆದರೆ ಮೈಸೂರು ನಗರ ದಲ್ಲಿ ತಹಬದಿಗೆ ಬಂದಿತು. ಗ್ರಾಮಾಂತರ ದಲ್ಲಿ ಆಗಲಿಲ್ಲ. ನಗರದಲ್ಲಿ ಜನರ ಓಡಾಟ ಪೊಲೀಸರ ಕಣ್ಣಿಗೆ ಬೀಳುತ್ತದೆ. ಆದರೆ ಹಳ್ಳಿಯಲ್ಲಿ ಓಡಾಡಿದರೆ ಗೊತ್ತಾಗುವು ದಿಲ್ಲ. ನಿಗಾ ಇಡಲಾಗುವುದಿಲ್ಲ. ಹಾಗಾಗಿ ಈಗ ಸಂಪೂರ್ಣ ಲಾಕ್‍ಡೌನ್ ತೀರ್ಮಾನ ಮಾಡಲಾಗಿದೆ. ಕಟ್ಟುನಿಟ್ಟಾಗಿ ಅನುಷ್ಠಾನ ಗೊಳಿಸಲು ಪೊಲೀಸರಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

ಮೈಸೂರಿಗೆ ಮತ್ತೊಂದು ಆಕ್ಸಿಜನ್ ಉತ್ಪಾದನಾ ಘಟಕ

ಕೇಂದ್ರ ಸರ್ಕಾರ ಪಿಎಂ ಕೇರ್ ಅಡಿ ಮೈಸೂರಿಗೆ ಒಂದು ನಿಮಿಷಕ್ಕೆ 1000 ಲೀಟರ್ ಪಿಎಸ್‍ಎ (Pಡಿessuಡಿe Sತಿiಟಿg ಂಜsoಡಿಠಿಣioಟಿ) ವಿಧಾನದ ಆಕ್ಸಿಜನ್ ಉತ್ಪಾ ದನಾ ಘಟಕ ಮಂಜೂರು ಮಾಡಿದೆ. ಇದನ್ನು ಕೆ.ಆರ್.ಆಸ್ಪತ್ರೆ ಅಥವಾ ಜಿಲ್ಲಾಸ್ಪತ್ರೆ ಆವರಣದಲ್ಲಿ ಸ್ಥಾಪಿಸಬೇಕೇ ಅಥವಾ ಈಗಾಗಲೇ ಕೆ.ಆರ್.ಆಸ್ಪತ್ರೆಯಲ್ಲಿ 13 ಕೆಎಲ್ ಸಾಮಥ್ರ್ಯದ ಟ್ಯಾಂಕ್ ಇದೆ. ಇದು ಜನರೇಟ್ ಮಾಡುವಂಥದ್ದು, ಎಲ್ಲಿ ಸ್ಥಾಪಿಸಿದರೆ ಮುಂದಿನ ದಿನಗಳಲ್ಲಿ ಅನು ಕೂಲವಾಗುತ್ತದೆ ಎಂಬ ಬಗ್ಗೆ ಪರಾ ಮರ್ಶೆ ನಡೆಸುತ್ತಿದ್ದೇವೆ. ಇದು ಮೈಸೂ ರಿಗೆ ಜೂ.15ರೊಳಗೆ ಬರಲಿದ್ದು, ಬಂದ ಕೂಡಲೇ ಅದನ್ನು ಸ್ಥಾಪಿಸಲಾಗುವುದು ಎಂದರು. ಅಲ್ಲದೆ ತುಳಸಿದಾಸ್ ಆಸ್ಪತ್ರೆ ಯಲ್ಲಿ ಒಂದು ನಿಮಿಷಕ್ಕೆ 160 ಲೀಟರ್ ಆಕ್ಸಿಜನ್ ಸರಬರಾಜು ಮಾಡುವ ಆಕ್ಸಿಜನ್ ಉತ್ಪಾದನಾ ಘಟಕವನ್ನು ಬಿಲ್ಡರ್ಸ್ ಅಸೋಸಿಯೇಷನ್ ಮುಂದಿನ ವಾರ ಕೊಡುಗೆ ನೀಡಲಿದೆ. ಅಲ್ಲದೆ, ಜೂನ್ ಅಂತ್ಯದಲ್ಲಿ ಅಥವಾ ಜುಲೈನಲ್ಲಿ ಮೈಸೂರು ಜಿಲ್ಲೆಯ ಎಲ್ಲಾ ತಾಲೂಕು ಕೇಂದ್ರಗಳಲ್ಲಿಯೂ ಆಕ್ಸಿಜನ್ ಉತ್ಪಾದನಾ ಘಟಕ ಸ್ಥಾಪಿಸುವ ಉದ್ದೇಶ ಹೊಂದಿ ದ್ದೇವೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮುಡಾ ಅಧ್ಯಕ್ಷ ಹೆಚ್.ವಿ.ರಾಜೀವ್, ಜಂಗಲ್ ಲಾಡ್ಜಸ್ ಅಂಡ್ ರೆಸಾರ್ಟ್ಸ್ ಅಧ್ಯಕ್ಷ ಎಂ.ಅಪ್ಪಣ್ಣ, ಮೈಲ್ಯಾಕ್ ಅಧ್ಯಕ್ಷ ಎನ್.ವಿ.ಫಣೀಶ್ ಉಪಸ್ಥಿತರಿದ್ದರು.

Translate »