ವೃದ್ಧರು, ವಿಶೇಷಚೇತನರಿಗೆ ಮನೆ  ಬಳಿಯೇ ಲಸಿಕೆ: ಕೇಂದ್ರ ಸರ್ಕಾರ
News

ವೃದ್ಧರು, ವಿಶೇಷಚೇತನರಿಗೆ ಮನೆ ಬಳಿಯೇ ಲಸಿಕೆ: ಕೇಂದ್ರ ಸರ್ಕಾರ

May 28, 2021

ನವದೆಹಲಿ, ಮೇ 27- ವೃದ್ಧರು ಮತ್ತು ವಿಶೇಷಚೇತನರಿಗೆ ಅವರ ಮನೆ ಸಮೀ ಪವೇ ಕೋವಿಡ್ ಲಸಿಕೆ ಪಡೆಯಬಹುದಾದ ವ್ಯವಸ್ಥೆಯನ್ನು ಕೇಂದ್ರ ಸರ್ಕಾರ ಒದಗಿಸಿದೆ. ಈ ಸಂಬಂಧ ಕೇಂದ್ರ ಸರ್ಕಾರ ಗುರುವಾರ ಅಧಿಸೂಚನೆ ಹೊರಡಿಸಿದೆ.
60 ವರ್ಷ ಮೇಲ್ಪಟ್ಟವರಿಗೆ ಮತ್ತು ವಿಶೇಷಚೇತನರಿಗೆ ಕೋವಿಡ್ ಲಸಿಕೆ ಪಡೆಯಲು ಸುಲಭವಾಗಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಈ ನಿರ್ಧಾರ ಕೈಗೊಂಡಿದೆ. ಈಗಾಗಲೇ ಮೊದಲ ಡೋಸ್ ಪಡೆದ ಮತ್ತು ಈವರೆಗೂ ಮೊದಲ ಡೋಸ್ ಪಡೆಯದ 60 ವರ್ಷ ಮೇಲ್ಪಟ್ಟವರೆಲ್ಲರೂ ಇದರ ಪ್ರಯೋಜನ ಪಡೆಯ ಬಹುದಾಗಿದೆ. ದೂರದ ಕೇಂದ್ರಗಳಿಗೆ ಹೋಗಲು ದೈಹಿಕವಾಗಿ ಅಶಕ್ತರಾದವರು ಈ ಸೇವೆ ಪಡೆಯಬಹುದು. ಈ ಲಸಿಕಾ ಕೇಂದ್ರಗಳನ್ನು ಗ್ರಾಮಗಳಲ್ಲಿ, ಸಮುದಾಯ ಭÀವನಗಳಲ್ಲಿ, ನಿವಾಸಿಗಳ ಸಂಘದ ಕಚೇರಿಗಳಲ್ಲಿ, ಪಂಚಾಯಿತಿ ಕಟ್ಟಡಗಳಲ್ಲಿ, ಶಾಲೆಗಳಲ್ಲಿ ಮತ್ತು ವೃದ್ಧಾಶ್ರಮಗಳಲ್ಲಿ ಸ್ಥಾಪಿಸಲಾಗುವುದು. ಕೋವಿನ್ ಆಪ್ ಮತ್ತು ಸದ್ಯ ಚಾಲ್ತಿಯಲ್ಲಿರುವ ಎಲ್ಲ ಪ್ಲಾಟ್‍ಫಾರ್ಮ್‍ಗಳಲ್ಲು ವೃದ್ಧರು ಲಸಿಕೆಗಾಗಿ ನೋಂದಣಿ ಮಾಡಿಕೊಳ್ಳಲು ಅವಕಾಶವಿದೆ. ಪ್ರತಿ ಗ್ರಾಮಗಳ ವೃದ್ಧರು ಮತ್ತು ವಿಶೇಷಚೇತ ನರು ಸುಲಭವಾಗಿ ಭೇಟಿ ನೀಡಬಹುದಾದ ಸ್ಥಳವನ್ನು ಗುರುತಿಸಿ ಅವುಗಳನ್ನು ಕೋವಿನ್ ಪೆÇೀರ್ಟಲ್‍ಗೆ ಸೇರಿಸ ಲಾಗುತ್ತದೆ. ಈ ಸೂಚನೆ ಅನುಷ್ಠಾನಗೊಳಿಸುವಂತೆ ಎಲ್ಲ ರಾಜ್ಯಗಳಿಗೆ ಮತ್ತು ಕೇಂದ್ರಾ ಡಳಿತ ಪ್ರದೇಶಗಳಿಗೆ ಸೂಚಿಸಲಾಗಿದೆ ಎಂದು ಸಚಿವಾಲಯದ ವರದಿ ಹೇಳಿದೆ.

Translate »