ಸೋಂಕಿತೆಗೆ ಹೆರಿಗೆ: ಚೆಲುವಾಂಬ ಆಸ್ಪತ್ರೆ ಒಂದು ದಿನ ಸೀಲ್‍ಡೌನ್
ಮೈಸೂರು

ಸೋಂಕಿತೆಗೆ ಹೆರಿಗೆ: ಚೆಲುವಾಂಬ ಆಸ್ಪತ್ರೆ ಒಂದು ದಿನ ಸೀಲ್‍ಡೌನ್

July 5, 2020

ಮೈಸೂರು, ಜು.4(ಎಂಟಿವೈ)- ಮೈಸೂರು ಜಿಲ್ಲೆಯಲ್ಲಿ ಗರ್ಭಿಣಿಯರನ್ನು ಕೊರೊನಾ ಸೋಂಕು ಬಿಟ್ಟೂಬಿಡದೆ ಕಾಡು ತ್ತಿದೆ. ಈ ಮಧ್ಯೆ ಮೈಸೂರಿನ ಚೆಲು ವಾಂಬ ಹೆರಿಗೆ ಆಸ್ಪತ್ರೆ ವೈದ್ಯರ ತಂಡ ತುಂಬು ಗರ್ಭಿಣಿಯೊಬ್ಬರಿಗೆ ಹೆರಿಗೆ ಮಾಡಿ ಸಿದ್ದು, ಆ ಬಳಿಕವಷ್ಟೇ ಆಕೆಗೆ ಕೋವಿಡ್-19 ಸೋಂಕು ತಗುಲಿರುವುದು ದೃಢ ಪಟ್ಟಿದೆ. ಪರಿಣಾಮ ಆಸ್ಪತ್ರೆಯನ್ನು ಸ್ಯಾನಿ ಟೈಸ್ ಮಾಡಿಸಿ, 24 ಗಂಟೆ ಸೀಲ್‍ಡೌನ್ ಮಾಡಲಾಗಿದೆ. ರೋಗಿಗಳ ಹಿತರಕ್ಷಣೆ ದೃಷ್ಟಿಯಿಂದ ಆಸ್ಪತ್ರೆ ಸುತ್ತ ಅಗತ್ಯ ಸುರ ಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿದೆ.

ಹೆರಿಗೆಗೆ ದಾಖಲಾಗುವ ಗರ್ಭಿಣಿ ಯರಿಗೆ ಕೋವಿಡ್-19 ಮಾರ್ಗಸೂಚಿ ಪ್ರಕಾರ ಸ್ವ್ಯಾಬ್‍ಟೆಸ್ಟ್ ಕಡ್ಡಾಯ. ಮೈಸೂ ರಿನ ಸಿದ್ದಿಖಿ ನಗರದ ಗರ್ಭಿಣಿ ಎರಡು ದಿನದ ಹಿಂದೆ ಚೆಲುವಾಂಬ ಹೆರಿಗೆ ಆಸ್ಪ ತ್ರೆಗೆ ದಾಖಲಾದಾಗ ಗಂಟಲು ದ್ರವ ಸಂಗ್ರ ಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾ ಗಿತ್ತು. ಪ್ರಯೋಗಾಲಯ ವರದಿ ಬರುವ ಮುನ್ನವೇ ಅಂದರೆ, ಶುಕ್ರವಾರ ರಾತ್ರಿ ಹೆರಿಗೆ ನೋವು ಕಾಣಿಸಿಕೊಂಡು ರಾತ್ರಿ 9.15ಕ್ಕೆ ಹೆರಿಗೆಯಾಗಿದೆ. ರಾತ್ರಿ 10ರ ವೇಳೆಗೆ ಪ್ರಯೋಗಾಲಯದಿಂದ ವರದಿ ಬಂದಿದ್ದು, ಆಕೆಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ.

ಕೂಡಲೇ ಎಚ್ಚೆತ್ತ ವೈದ್ಯರು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದಾರೆ. ಹೆರಿಗೆ ವಾರ್ಡ್ ಪಕ್ಕದ ವಾರ್ಡ್‍ಗಳಲ್ಲಿದ್ದ ಗರ್ಭಿಣಿಯರು, ಬಾಣಂತಿಯರನ್ನು ಮಕ್ಕಳ ವಾರ್ಡ್‍ಗೆ ಸ್ಥಳಾಂ ತರಿಸಿದ್ದಾರೆ. ಸೋಂಕಿತ ಬಾಣಂತಿ ಮತ್ತು ನವಜಾತ ಶಿಶುವನ್ನು ಮಧ್ಯರಾತ್ರಿ 12.30ರ ವೇಳೆಗೆ ಆಂಬುಲೆನ್ಸ್‍ನಲ್ಲಿ ಜಯಲಕ್ಷ್ಮೀ ಪುರಂನ `ಕೋವಿಡ್ ಹೆರಿಗೆ ಆಸ್ಪತ್ರೆ’ಗೆ ಕಳುಹಿಸಿಕೊಟ್ಟಿದ್ದಾರೆ. ಬಳಿಕ ಚೆಲುವಾಂಬ ಆಸ್ಪತ್ರೆಗೆ ವೈರಾಣುನಾಶಕ ರಾಸಾಯನಿಕ ದ್ರಾವಣ ಸಿಂಪಡಿಸಿ, ಸೀಲ್‍ಡೌನ್ ಮಾಡಲಾ ಗಿದೆ. ಆ ಬಳಿಕ ಗ್ರಾಮೀಣ ಪ್ರದೇಶದಿಂದ ಹೆರಿಗೆಗಾಗಿ ಚೆಲುವಾಂಬ ಆಸ್ಪತ್ರೆಗೆ ಬಂದ ವರನ್ನು ಜಯನಗರ, ನಜರ್‍ಬಾದ್ ಮತ್ತಿತರ ಹೆರಿಗೆ ಆಸ್ಪತ್ರೆಗಳಿಗೆ ಕಳುಹಿಸಲಾಗಿದೆ. ಪಾಲಿಕೆ ಅಭಯ ತಂಡ ಶನಿವಾರ ಬೆಳಿಗ್ಗೆ ವಾರ್ಡ್, ಆಸ್ಪತ್ರೆ ಆವರಣ, ವಾಹನ ನಿಲುಗಡೆ ಸ್ಥಳ, ರೋಗಿಗಳ ಮನೆಯವರು ವಿಶ್ರಾಂತಿ ಪಡೆ ಯುವ ಸ್ಥಳ, ಕ್ಯಾಂಟೀನ್ ಸುತ್ತಮುತ್ತ ಮತ್ತೊಂದು ಸುತ್ತು ರಾಸಾಯನಿಕ ದ್ರಾವಣ ಸಿಂಪಡಿಸಿದೆ.

Translate »