ಆನೆ ಸಾರೋಟು ರಸ್ತೆಯಲ್ಲಿ ಬಿದ್ದಿದ್ದ ನಾಣ್ಯ ಸಂಗ್ರಹಿಸಿದ ಟೀ ಅಂಗಡಿ ಮಾಲೀಕನಿಗೆ ಕೊರೊನಾ ಭೀತಿ!
ಮೈಸೂರು

ಆನೆ ಸಾರೋಟು ರಸ್ತೆಯಲ್ಲಿ ಬಿದ್ದಿದ್ದ ನಾಣ್ಯ ಸಂಗ್ರಹಿಸಿದ ಟೀ ಅಂಗಡಿ ಮಾಲೀಕನಿಗೆ ಕೊರೊನಾ ಭೀತಿ!

April 23, 2020
  • ಮೈಸೂರು ನಗರ ಪಾಲಿಕೆಯಿಂದ ರಾಸಾಯನಿಕ ದ್ರಾವಣ ಸಿಂಪಡಣೆ, ಪರಿಶೀಲನೆಗೆ ರವಾನೆ
  • ಸಿಸಿಟಿವಿ ಫುಟೇಜ್ ವೀಕ್ಷಿಸಿ ಕಿಡಿಗೇಡಿಗಳ ಪತ್ತೆ: ಪೊಲೀಸರ ಭರವಸೆ

ಮೈಸೂರು,ಏ.22(ಎಂಟಿವೈ)- ಕೊರೊನಾ ಸೋಂಕಿನ ಭೀತಿ ಜನರಲ್ಲಿ ಬಹಳಷ್ಟು ಬದಲಾವಣೆಗಳನ್ನು ತಂದಿದೆ. ರಸ್ತೆಯಲ್ಲಿ ಹಣ, ಬೆಲೆಬಾಳುವ ವಸ್ತು ಬಿದ್ದಿದ್ದರೂ ತಿರುಗಿ ನೋಡದಂತೆ ಮಾಡಿದೆ! ಆದರೆ ಬುಧವಾರ ಮುಂಜಾನೆ ಮೈಸೂರಿನ ಆನೆ ಸಾರೋಟು ರಸ್ತೆಯಲ್ಲಿ(ಬೋಟಿ ಬಜಾರ್) ಕಿಡಿಗೇಡಿಗಳು ಚೆಲ್ಲಾಡಿದ್ದ 200 ರೂ. ಗಳಷ್ಟು ನಾಣ್ಯಗಳನ್ನು ಆಸೆಯಿಂದ ಆಯ್ದು ಕೊಂಡ ಟೀ ಅಂಗಡಿ ಮಾಲೀಕ, ಬಳಿಕ ಕೊರೊನಾ ಭೀತಿಯಲ್ಲಿ ತೊಳಲಾಡುತ್ತಿದ್ದಾನೆ.

ಆನೆ ಸಾರೋಟು ರಸ್ತೆಯ ಹಣ್ಣುಗಳ ಮಂಡಿಯಲ್ಲಿ ಮುಂಜಾನೆ 2 ಗಂಟೆಯಿಂ ದಲೇ ವ್ಯಾಪಾರ-ವಹಿವಾಟು ಆರಂಭ ವಾಗುತ್ತದೆ. ಎಂದಿನಂತೆ ಬುಧವಾರ ಮುಂಜಾ ನೆಯೂ ಬೋಟಿ ಬಜಾರ್ ರಸ್ತೆಯ ಮಂಡಿ ಗಳು ಬಾಗಿಲು ತೆರೆದು ಲವಲವಿಕೆಯಿಂ ದಲೇ ದಿನಚರಿ ಆರಂಭಿಸಿದ್ದವು. ದೇವ ರಾಜ ಮಾರುಕಟ್ಟೆಗೆ ಸಂಪರ್ಕ ಕಲ್ಪಿಸುವ ಕಾಲುದಾರಿ ಸಮೀಪದ ಟೀ ಅಂಗಡಿ ಎದುರು ರಸ್ತೆಯಲ್ಲಿ 200 ರೂ.ಗಳಷ್ಟು ನಾಣ್ಯಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಟೀ ಅಂಗಡಿ ಬಾಗಿಲು ತೆರೆಯಲು ಬಂದ ಮಾಲೀಕ ನಾಣ್ಯಗಳನ್ನು ಆತುರದಲ್ಲಿ ಹೆಕ್ಕಿ ಗಲ್ಲಾಪೆಟ್ಟಿಗೆಗೆ ತುಂಬಿಸಿ ಬೆಳಿಗ್ಗೆ 9 ಗಂಟೆವ ರೆಗೂ ವ್ಯಾಪಾರದಲ್ಲಿ ಪೂರ್ಣ ಮಗ್ನನಾದ.

ಬಳಿಕ ಕೊರೊನಾ ಸೋಂಕಿನ ಬಗ್ಗೆ ಭಯಗೊಂಡ ಟೀ ಅಂಗಡಿ ಮಾಲೀಕ, ಪರಿಚಿತರೊಬ್ಬರ ಬಳಿ ಘಟನೆಯ ವಿವರ ಹಂಚಿಕೊಂಡ. ಕೂಡಲೇ ಎಚ್ಚೆತ್ತ ಪರಿಚಿತ ವ್ಯಕ್ತಿ ಅಲ್ಲಿಯೇ ಬಂದೋಬಸ್ತ್‍ನಲ್ಲಿದ್ದ ದೇವರಾಜ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪಾಲಿಕೆ ಸಿಬ್ಬಂದಿ ಹಾಗೂ ಅಭಯ ತಂಡದ ಸದಸ್ಯರೊಂದಿಗೆ ಸ್ಥಳಕ್ಕೆ ಧಾವಿಸಿದ ಪೊಲೀಸರು ಟಿ ಅಂಗಡಿ ಸುತ್ತ ಮುತ್ತ ಜನ-ವಾಹನ ಸಂಚಾರ ನಿರ್ಬಂ ಧಿಸಿದ್ದಾರೆ. ನಾಣ್ಯಗಳನ್ನು ವಶಕ್ಕೆ ಪಡೆದು ಪರಿಶೀಲನೆಗೆ ರವಾನಿಸಿದ್ದಾರೆ. ಬಳಿಕ ಪಾಲಿ ಕೆಯ ಆರೋಗ್ಯಾಧಿಕಾರಿ ಸೂಚನೆ ಮೇರೆಗೆ ಆನೆ ಸಾರೋಟ್ ರಸ್ತೆಯಲ್ಲಿ ವೈರಾಣು ನಾಶದ ರಾಸಾಯನಿಕ ದ್ರಾವಣ ಸಿಂಪಡಿಸಲಾಗಿದೆ. ಅಲ್ಲದೆ ನಾಣ್ಯ ಸಂಗ್ರಹಿಸಿದ ಟೀ ಅಂಗಡಿ ಮಾಲೀಕನಿಗೂ ಸ್ಯಾನಿಟೈಸ್ ಮಾಡಲಾಗಿದೆ.

ಆತಂಕ ಬೇಡ: ಸುದ್ದಿ ಹರಡುತ್ತಿದ್ದಂ ತೆಯೇ ಮಂಡಿಯ ವ್ಯಾಪಾರಿಗಳಲ್ಲಿನ ಆತಂಕ ಹೆಚ್ಚಾಗಿದೆ. ವರ್ತಕರಲ್ಲಿನ ಭಯ ನಿವಾರಿಸಲು ಆರೋಗ್ಯಾಧಿಕಾರಿ ಮತ್ತು ಪೊಲೀಸರು ಧ್ವನಿವರ್ಧಕದಲ್ಲಿ ಧೈರ್ಯ ಹೇಳಿದ್ದಾರೆ. ಕೆಲವು ಸೂಚನೆಗಳನ್ನೂ ನೀಡಿದ್ದಾರೆ.

`ಕಿಡಿಗೇಡಿಗಳು ಜನರಲ್ಲಿ ಭೀತಿ ಮೂಡಿ ಸಲು ಈ ದುಷ್ಕøತ್ಯ ನಡೆಸಿದ್ದಾರೆ. ಜನತೆ ಭಯಪಡಬೇಕಿಲ್ಲ. ನಾಣ್ಯಗಳನ್ನು ಪರಿಶೀಲ ನೆಗೆ ಕಳುಹಿಸಲಾಗಿದೆ. ಆನೆ ಸಾರೋಟ್ ರಸ್ತೆಯಲ್ಲಿನ ಸಿಸಿಟಿವಿ ಫೂಟೇಜ್‍ಗಳನ್ನು ವೀಕ್ಷಿಸಿ ಕಿಡಿಗೇಡಿಗಳನ್ನು ಪತ್ತೆ ಮಾಡಲಾಗು ವುದು. ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ’ ಎಂದು ಭರವಸೆ ನೀಡಿದರು.

ಈ ಹಿಂದೆ: ಕೊರೊನಾ ಹಿನ್ನೆಲೆಯ ಲಾಕ್‍ಡೌನ್ ಸಂದರ್ಭದಲ್ಲೇ ಮೊದಲು ಹೆಬ್ಬಾಳು ಸಮೀಪದ ರಿಂಗ್ ರಸ್ತೆಯಲ್ಲಿ 50 ರೂ. ನೋಟು ಕಾಣಿಸಿತ್ತು. ನಂತರ ನಜರ್‍ಬಾದ್ ರಸ್ತೆಯಲ್ಲಿ 100 ರೂ. ನೋಟು ಪತ್ತೆಯಾಗಿ ಜನರಲ್ಲಿ ಆತಂಕ ಸೃಷ್ಟಿಸಿತ್ತು. ಈಗ ರಸ್ತೆಯಲ್ಲಿ ನಾಣ್ಯ ಪತ್ತೆಯಾಗಿ ಜನರಲ್ಲಿ ಭಯ ಹುಟ್ಟಿಸಿದೆ.

Translate »