ಕೊರೊನಾ ನಿಯಂತ್ರಣಕ್ಕೆ ಸಾರ್ವಜನಿಕರ ಸಹಕಾರ ಅವಶ್ಯ
ಮೈಸೂರು

ಕೊರೊನಾ ನಿಯಂತ್ರಣಕ್ಕೆ ಸಾರ್ವಜನಿಕರ ಸಹಕಾರ ಅವಶ್ಯ

June 30, 2020

ಮೈಸೂರು, ಜೂ.29(ಎಸ್‍ಬಿಡಿ)- ಕೊರೊನಾ ನಿಯಂತ್ರಣದಲ್ಲಿ ಸಾರ್ವಜನಿಕರ ಸಹಕಾರ ಮಹತ್ವಪೂರ್ಣವಾಗಿದೆ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಅಭಿಪ್ರಾಯಿಸಿದ್ದಾರೆ.

ದಿನೇ ದಿನೆ ಕೊರೊನಾ ಅಟ್ಟಹಾಸ ಮೆರೆಯುತ್ತಿದೆ. ಇಂತಹ ಸಂದಿಗ್ದ ಪರಿಸ್ಥಿತಿ ನಿಬಾಯಿಸುವಲ್ಲಿ ಸರ್ಕಾರ ಹಾಗೂ ಜಿಲ್ಲಾ ಡಳಿತದ ಪಾತ್ರ ಬಹಳ ಮುಖ್ಯ. ಹಾಗೆಯೇ ಇದರಲ್ಲಿ ಸಾರ್ವಜನಿಕರ ಸಹಭಾಗಿತ್ವವೂ ಅಷ್ಟೇ ಮುಖ್ಯವಾಗಿದೆ. ಕೊರೊನಾ ನಿಯಂ ತ್ರಣ ನಿಟ್ಟಿನಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ನೇತೃತ್ವದಲ್ಲಿ ರಾಜ್ಯ ಸರ್ಕಾರ ಅಚ್ಚುಕಟ್ಟಾಗಿ ಕಾರ್ಯ ನಿರ್ವ ಹಿಸುತ್ತಿದೆ. ಈ ಬಗ್ಗೆ ಕೇಂದ್ರ ಸರ್ಕಾರವೂ ಮೆಚ್ಚುಗೆ ವ್ಯಕ್ತಪಡಿಸಿದೆ. ಆದರೆ ಹಲವು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದ್ದರೂ ಪರಿಸ್ಥಿತಿ ಕೈಮೀರಿದ್ದೇಗೆ? ಎಂದು ಎಲ್ಲರೂ ಯೋಚಿಸಬೇಕು. ನಿಯಮ ಜಾರಿಗೊಳಿ ಸುವ ಸರ್ಕಾರ ಮಾತ್ರವಲ್ಲ ನಿಯಮ ಪಾಲಿಸುವ ಪ್ರತಿ ಯೊಬ್ಬರೂ ಜವಾ ಬ್ದಾರರು ಎಂದು ತಿಳಿಯಬೇಕು. ನೀವಿ ದ್ದರೆ ನಾವು, ನಾವಿ ದ್ದರೆ ನೀವು ಎಂಬು ದನ್ನು ಮರೆಯ ಬಾರದು. `ನಮ್ಮ ಜೀವ ನಮ್ಮ ಹಕ್ಕು’ ಇದು ನಮ್ಮ-ನಿಮ್ಮೆಲ್ಲರ ಮಂತ್ರ ವಾಗಬೇಕು. ಹಕ್ಕು ಎಂದಾಗ ಜವಾ ಬ್ದಾರಿಯೂ ಅರಿವಿಗೆ ಬರುತ್ತದೆ ಎಂದು ಸಚಿವರು ಪ್ರಕಟಣೆ ಮೂಲಕ ಜಿಲ್ಲೆಯ ಜನರ ಸಹಕಾರ ಕೋರಿದ್ದಾರೆ.

ಎಲ್ಲದಕ್ಕೂ ಸರ್ಕಾರದ ಕಡೆಗೆ ಬೊಟ್ಟು ಮಾಡುವುದು ಸರಿಯೇ? ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜೆಗಳ ಪಾತ್ರವೇ ಬಹಳ ದೊಡ್ಡದು. ಸರ್ಕಾರ ರಚಿಸುವ ಹಾಗೂ ಅದನ್ನು ಬೀಳಿಸುವ ಶಕ್ತಿ ಜನರಿಗಿದೆ. ವ್ಯವ ಸ್ಥೆಯ ಪ್ರತಿ ನಡೆಯಲ್ಲೂ ಜನರೇ ನಿರ್ಣಾ ಯಕ. ಸದ್ಯದ ಪರಿಸ್ಥಿತಿಯಲ್ಲಿ ಒಮ್ಮತದಿಂದ ಸಾಮಾಜಿಕ ಜವಾಬ್ದಾರಿ ನಿರ್ವಹಿಸಿದರೆ ಕೊರೊನಾ ಮಹಾಮಾರಿ ನಿರ್ನಾಮ ಸಾಧ್ಯ ಎಂಬ ನಂಬಿಕೆ ನನಗಿದೆ. ಇದಕ್ಕೆ ಪ್ರತಿ ಯೊಬ್ಬರಲ್ಲೂ ಇಚ್ಛಾಶಕ್ತಿ ಇರಬೇಕಷ್ಟೇ. ಇನ್ನು ಮೈಸೂರಿನಲ್ಲಿ ಕೊರೊನಾ ನಿಯಂ ತ್ರಣಕ್ಕಾಗಿ ಸಮರೋಪಾದಿಯಲ್ಲಿ ಕಾರ್ಯ ನಿರ್ವಹಣೆ ಮಾಡಲಾಗುತ್ತಿದೆ.

ಜಿಲ್ಲಾಧಿಕಾರಿ ನೇತೃತ್ವದÀ ತಂಡ ಉತ್ತಮ ವಾಗಿ ಕಾರ್ಯನಿರ್ವಹಿಸಿದೆ. ಜನಪ್ರತಿ ನಿಧಿಗಳು, ಪೆÇಲೀಸ್ ಇಲಾಖೆ, ವೈದ್ಯಾಧಿ ಕಾರಿಗಳು, ವೈದ್ಯಕೀಯ ಹಾಗೂ ವೈದ್ಯ ಕೀಯೇತರ ಸಿಬ್ಬಂದಿ, ಪೌರಕಾರ್ಮಿಕರು, ಆಶಾ ಕಾರ್ಯಕರ್ತೆಯರು, ಮಾಧ್ಯಮ ದವರ ಸೇವೆಯೂ ಸ್ಮರಣೀಯ. ಮುಖ್ಯ ವಾಗಿ ನಾಗರಿಕರು ತಾಳ್ಮೆಯಿಂದ ಸಹಕಾರ ನೀಡುತ್ತಿರುವುದು ಶ್ಲಾಘನೀಯ. ತಾಯಿ ಚಾಮುಂಡೇಶ್ವರಿ ಸನ್ನಿಧಿಯಲ್ಲಿ ಆಷಾಢ ಮಾಸದ ಕೈಂಕರ್ಯ ಆರಂಭವಾಗಿದ್ದರೂ ಜಿಲ್ಲಾಡಳಿತದ ನಿಯಮ ಮೀರದಂತೆ ನಡೆದುಕೊಳ್ಳುತ್ತಿರುವ ಜನರಿಗೆ ನಾನು ಆಭಾರಿಯಾಗಿದ್ದೇನೆ ಎಂದು ತಿಳಿಸಿದ್ದಾರೆ.

ಲಾಕ್‍ಡೌನ್‍ನಿಂದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದ್ದರೂ ಶನಿವಾರವೂ ಸರ್ಕಾರಿ ಕಚೇರಿಗಳಿಗೆ ರಜೆ, ರಾತ್ರಿ 8ರಿಂದ ಬೆಳಗ್ಗೆ 5ರವರೆಗೆ ಕರ್ಫ್ಯೂ ಜಾರಿಗೊಳಿಸಲಾಗಿದೆ. ಎಸ್ಸೆಸ್ಸೆಲ್ಸಿ ಪರೀಕ್ಷೆ ಬಳಿಕ ಮತ್ತಷ್ಟು ಕಠಿಣ ಕ್ರಮಗಳ ಜಾರಿಗೆ ಮುಖ್ಯಮಂತ್ರಿಗಳು ನಿರ್ಧ ರಿಸಿರುವುದು ಅಭಿನಂದನಾರ್ಹ. ಕರ್ಫ್ಯೂ ಸಮಯ ಮಾತ್ರವಲ್ಲ ಯಾವುದೇ ವೇಳೆ ತೀರಾ ಅನಿವಾರ್ಯವಿದ್ದರೆ ಮಾತ್ರ ಹೊರ ಹೋಗಿ. ವಾರಾಂತ್ಯದ ಎರಡು ದಿನ ರಜೆ ಇದೆ ಎಂದು ಬೇರೆ ಕಾರ್ಯಕ್ರಮಗಳ ಯೋಜನೆ ಮಾಡಿಕೊಳ್ಳದೆ ಮನೆಯಲ್ಲೇ ಇರಬೇಕು. ಅನಿವಾರ್ಯವಿದ್ದರೆ ಮಾತ್ರ ಸರ್ಕಾರಿ ಕಚೇರಿಗಳಿಗೆ ಹೋಗಬೇಕು.

ಯಾವುದೇ ಜನಪ್ರತಿನಿಧಿಗಳ ಭೇಟಿಗೆ ಗುಂಪಾಗಿ ಹೋಗಬೇಡಿ. ಮನೆಯಿಂದ ಹೊರಬರುವಾಗ ಕಡ್ಡಾಯವಾಗಿ ಮಾಸ್ಕ್ ಧರಿಸಿಕೊಳ್ಳುವುದರ ಜೊತೆಗೆ ಹ್ಯಾಂಡ್ ಸ್ಯಾನಿಟೈಸರ್ ಅನ್ನು ಜೇಬಿನಲ್ಲಿಟ್ಟುಕೊಳ್ಳಿ. ದೈಹಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬೇಡಿ ಎಂದು ಸಚಿವ ಎಸ್.ಟಿ. ಸೋಮಶೇಖರ್ ಮನವಿ ಮಾಡಿಕೊಂಡಿದ್ದಾರೆ.

Translate »