ಮೈಸೂರಲ್ಲಿ ರಾತ್ರಿ 8ರಿಂದ ಮುಂಜಾನೆ 5ರವರೆಗೆ ನಿಷೇಧಾಜ್ಞೆ
ಮೈಸೂರು

ಮೈಸೂರಲ್ಲಿ ರಾತ್ರಿ 8ರಿಂದ ಮುಂಜಾನೆ 5ರವರೆಗೆ ನಿಷೇಧಾಜ್ಞೆ

June 30, 2020

ಮೈಸೂರು, ಜೂ.29(ಎಂಕೆ)- ಕೊರೊನಾ ಸೋಂಕು ಹರಡುವುದನ್ನು ತಡೆ ಗಟ್ಟುವ ನಿಟ್ಟಿನಲ್ಲಿ ಸರ್ಕಾರದ ಹೊಸ ನಿಯಮಾವಳಿಯಂತೆ ಮೈಸೂರು ನಗರದಲ್ಲಿ ನಿಷೇಧಾಜ್ಞೆಯನ್ನು ಮುಂದುವರೆಸಿ ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ಆದೇಶ ಹೊರಡಿಸಿದ್ದಾರೆ.

ಅಗತ್ಯ ವಸ್ತುಗಳ ಮಾರಾಟ ಹಾಗೂ ಸಾಗಾಣಿಕೆ ಹೊರತು ಪಡಿಸಿ, ಜುಲೈ 5ರಿಂದ ಆಗಸ್ಟ್ 2ರವರೆಗಿನ ಎಲ್ಲಾ ಭಾನು ವಾರಗಳಂದು ಪೂರ್ಣ ದಿನದ ಲಾಕ್‍ಡೌನ್ ಹಾಗೂ ಮುಂದಿನ ಆದೇಶದವರೆಗೆ ಪ್ರತಿದಿನ ರಾತ್ರಿ 8ರಿಂದ ಬೆಳಿಗ್ಗೆ 5 ರವರೆಗೆ ರಾತ್ರಿ ಕಫ್ರ್ಯೂ ಜಾರಿಯಲ್ಲಿರಲಿದೆ ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.

ರಾತ್ರಿ 8 ಗಂಟೆಯಿಂದಲೇ ಕಫ್ರ್ಯೂ ಜಾರಿಯಾಗುವುದರಿಂದ ಸಾರ್ವಜನಿಕರು 8 ಗಂಟೆಯೊಳಗೆ ತಮ್ಮ ತಮ್ಮ ಮನೆಗಳಿಗೆ ತಲುಪುವಂತೆ ಸೂಚಿಸಿದ್ದು, ನಗರದಾ ದ್ಯಂತ ಸಂಜೆ 7.30ರ ವೇಳೆಗೆ ಎಲ್ಲಾ ವ್ಯಾಪಾರ ಮಳಿಗೆಗಳನ್ನು ಮುಚ್ಚುವಂತೆ ಆದೇಶಿಸಿದ್ದಾರೆ. ಈ ಆದೇಶವು ತುರ್ತು ವೈದ್ಯಕೀಯ ಸೇವೆಗಳು, ಎಲ್ಲಾ ರೀತಿಯ ಸರಕು ಸಾಗಿಸುವ ವಾಹನಗಳು, ಅಗತ್ಯ ಸೇವೆಗಳ ಪೂರೈಕೆಯಲ್ಲಿ ನಿರತವಾಗಿರುವ ಪಾಸ್ ಹೊಂದಿರುವ ಖಾಸಗಿ ವಾಹನಗಳು, ಸರ್ಕಾರಿ ವಾಹನಗಳು, ಕರ್ತವ್ಯ ನಿರತ ಸರ್ಕಾರಿ ನೌಕರರ ವಾಹನಗಳು, ಹಾಪ್‍ಕಾಮ್ಸ್, ಪಡಿತರ, ಆಹಾರ ಪದಾರ್ಥ ಗಳ ಹೋಂ ಡೆಲಿವರಿ, ಕಿಚನ್ ಸೇವೆಗಳು (ರಾತ್ರಿ 09.00 ಗಂಟೆಯವರೆಗೆ ಮಾತ್ರ) ಹಾಗೂ ಕೃಷಿ ಚಟುವಟಿಕೆಗಳಿಗೆ ಸಂಬಂಧಿಸಿದ ಸೇವೆಗಳಿಗೆ ಅನ್ವಯಿಸುವು ದಿಲ್ಲ ಎಂದು ಪೊಲೀಸ್ ಆಯುಕ್ತರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

 

Translate »