ದೇಶಾದ್ಯಂತ ಒಂದೇ ದಿನ 18,522 ಮಂದಿಗೆ ಕೊರೊನಾ
ಮೈಸೂರು

ದೇಶಾದ್ಯಂತ ಒಂದೇ ದಿನ 18,522 ಮಂದಿಗೆ ಕೊರೊನಾ

July 1, 2020

ಸೋಂಕಿತರ ಸಂಖ್ಯೆ 5.66 ಲಕ್ಷಕ್ಕೆ ಏರಿಕೆ, 16,893 ಮಂದಿ ಸಾವು
ನವದೆಹಲಿ: ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 18,522 ಮಂದಿಯಲ್ಲಿ ಕೊರೊನಾ ವೈರಸ್ ಪತ್ತೆಯಾಗಿದ್ದು, ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 5,66,840ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಂಗಳವಾರ ಮಾಹಿತಿ ನೀಡಿದೆ. ಇನ್ನು ನಿನ್ನೆ ಒಂದೇ ದಿನ 418 ಮಂದಿ ಬಲಿ ಪಡೆದಿದ್ದು, ಈವರೆಗೂ ವೈರಸ್‍ನಿಂದ ಸಾವನ್ನಪ್ಪಿದವರ ಸಂಖ್ಯೆ 16,893ಕ್ಕೆ ತಲುಪಿದೆ. ಇನ್ನು 5,66,840 ಮಂದಿ ಸೋಂಕಿತರ ಪೈಕಿ 3,34,822 ಮಂದಿ ಸೋಂಕಿ ನಿಂದ ಗುಣಮುಖರಾಗಿದ್ದು, ಆಸ್ಪತ್ರೆಗಳಿಂದ ಬಿಡುಗಡೆಗೊಂಡಿದ್ದಾರೆ. ಪ್ರಸ್ತುತ ದೇಶದಲ್ಲಿನ್ನೂ 2,15,125 ಮಂದಿ ಸೋಂಕಿನಿಂದ ಬಳಲುತ್ತಿದ್ದಾರೆಂದು ಸಚಿವಾಲಯ ತಿಳಿಸಿದೆ. ಈ ನಡುವೆ ದೇಶದ ವಿವಿಧ ರಾಜ್ಯಗಳಿಗೆ ಹೋಲಿಕೆ ಮಾಡಿದರೆ ಮಹಾರಾಷ್ಟ್ರದಲ್ಲಿ ಅತೀ ಹೆಚ್ಚು ಅಂದರೆ 5,257 ಜನರಲ್ಲಿ ಸೋಂಕು ಪತ್ತೆಯಾಗಿದ್ದು, 181 ಜನರು ಸಾವನ್ನಪ್ಪಿದ್ದಾರೆ. ಇನ್ನು ತಮಿಳು ನಾಡಿನಲ್ಲಿ 3949 ಜನರಿಗೆ ಸೋಂಕು ಹಬ್ಬಿದ್ದು, 62 ಮಂದಿ ಬಲಿಯಾಗಿದ್ದಾರೆ. ದೆಹಲಿಯಲ್ಲಿ 2084 ಜನರಲ್ಲಿ ಸೋಂಕು ಪತ್ತೆಯಾಗಿದ್ದು, 54 ಮಂದಿ ಬಲಿಯಾಗಿದ್ದಾರೆ.

Translate »