ಬೆಂಗಳೂರು ಟೋಲ್ ಸಿಬ್ಬಂದಿಗೆ ಕೊರೊನಾ ಸೋಂಕು: ಮೈಸೂರಲ್ಲೂ ಶುಲ್ಕ ಸಂಗ್ರಹ ಸ್ಥಗಿತ
ಮೈಸೂರು

ಬೆಂಗಳೂರು ಟೋಲ್ ಸಿಬ್ಬಂದಿಗೆ ಕೊರೊನಾ ಸೋಂಕು: ಮೈಸೂರಲ್ಲೂ ಶುಲ್ಕ ಸಂಗ್ರಹ ಸ್ಥಗಿತ

July 20, 2020

ಮೈಸೂರು, ಜು.19(ಎಂಟಿವೈ)- ಬೆಂಗ ಳೂರು ಸೇರಿದಂತೆ ವಿವಿಧೆಡೆ ಟೋಲ್ ಸಂಗ್ರಹ ಸಿಬ್ಬಂದಿಗೆ ಕೊರೊನಾ ಸೋಂಕು ತಗುಲಿದ ಹಿನ್ನೆಲೆಯಲ್ಲಿ ಮೈಸೂರು-ನಂಜನ ಗೂಡು ಹಾಗೂ ಮೈಸೂರು-ಕೊಳ್ಳೇಗಾಲ ರಸ್ತೆಯ ಟೋಲ್ ಸಂಗ್ರಹ ಸ್ಥಗಿತಗೊಳಿಸ ಲಾಗಿದೆ. ವಾಹನಗಳು ಶುಲ್ಕ ಪಾವತಿಸುವ ಗೋಜಿಲ್ಲದೇ ಸರಾಗ ಸಂಚರಿಸುತ್ತಿವೆ.

ಸೋಂಕಿತ ವ್ಯಕ್ತಿಗಳಿಂದ ಶುಲ್ಕ ಪಡೆದಿ ದ್ದರಿಂದ ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳ ರಾಷ್ಟ್ರೀಯ ಹೆದ್ದಾರಿಗಳಲ್ಲಿನ ಟೋಲ್ ಪಾಯಿಂಟ್‍ಗಳ ಸಿಬ್ಬಂದಿಯಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ 766 (212)ರಲ್ಲಿ ಮೈಸೂರು-ನಂಜನಗೂಡು ರಸ್ತೆ, ತಿ.ನರಸೀಪುರ, ಕೊಳ್ಳೇಗಾಲದಲ್ಲಿ ನಿರ್ಮಿಸಿರುವ ಟೋಲ್ ಸಂಗ್ರಹ ಕೇಂದ್ರ ವನ್ನು ಕಳೆದ 10 ದಿನಗಳಿಂದ ಸ್ಥಗಿತಗೊಳಿಸ ಲಾಗಿದೆ. ಇದರಿಂದ, ಮೈಸೂರಿನಿಂದ ನಂಜನ ಗೂಡು, ಗುಂಡ್ಲುಪೇಟೆ ಮಾರ್ಗವಾಗಿ ಊಟಿ, ಕೇರಳಕ್ಕೆ ಹೋಗುವ ವಾಹನಗಳು ಶುಲ್ಕ ನೀಡಬೇಕಾದ ಅಗತ್ಯವಿಲ್ಲದೇ ಸಂಚ ರಿಸುತ್ತಿವೆ. ಮೈಸೂರು-ನಂಜನಗೂಡು ರಸ್ತೆ ಯಲ್ಲಿ ದಿನಕ್ಕೆ ಅಂದಾಜು 40 ಸಾವಿರ ವಾಹನಗಳು ಕೆ.ಎನ್.ಪುರ(ಮಂಡಕಳ್ಳಿ) ಬಳಿ ನಿರ್ಮಿಸಿದ ಟೋಲ್ ಪಾಯಿಂಟ್ ಹಾದು ಹೋಗುತ್ತಿದ್ದವು. ಮೈಸೂರು-ನರಸೀ ಪುರ ರಸ್ತೆಯಲ್ಲಿ ಗರ್ಗೇಶ್ವರಿ ಬಳಿ ನಿರ್ಮಿ ಸಿರುವ ಟೋಲ್‍ನಲ್ಲಿ ನಿತ್ಯ 5-10 ಸಾವಿರ ವಾಹನ ಸಂಚರಿಸುತ್ತವೆ. ಕೊಳ್ಳೇಗಾಲ ಬಳಿಯ ಟೋಲ್‍ಗೇಟ್‍ನಲ್ಲಿ ದಿನಕ್ಕೆ 4-5 ಸಾವಿರ ವಾಹನ ಸಂಚರಿಸುತ್ತವೆ. ಕೇರಳ ದಿಂದ ಬರುವ ವಾಹನಗಳು ಗುಂಡ್ಲುಪೇಟೆ -ಮೂಲೆಹೊಳೆ ನಡುವೆ ನಿರ್ಮಿಸಿದ ಟೋಲ್ ಸಂಗ್ರಹ ಕೇಂದ್ರದ ಮೂಲಕವೇ ರಾಜ್ಯ ಪ್ರವೇಶಿಸುತ್ತವೆ. ಈಗ ಕೊರೊನಾ ಹರಡು ತ್ತದೆಂಬ ಕಾರಣಕ್ಕೆ 4 ಟೋಲ್ ಪಾಯಿಂಟ್ ಗಳಲ್ಲಿ ಶುಲ್ಕ ಸಂಗ್ರಹ ಕಾರ್ಯವನ್ನು ತಾತ್ಕಾ ಲಿಕವಾಗಿ ಸ್ಥಗಿತಗೊಳಿಸಲಾಗಿದೆ.

ಆದರೆ ಟೋಲ್‍ನ ಎಲ್ಲಾ ಗೇಟ್‍ಗಳನ್ನೂ ತೆರೆದಿಲ್ಲ. `ಫಾಸ್ಟ್ಯಾಗ್’ ಇರುವ ವಾಹನಗಳಿಗೆ ಮೀಸಲಿಟ್ಟ ಟ್ರಾಕ್‍ನಲ್ಲಷ್ಟೇ ಸಂಚಾರಕ್ಕೆ ಅವಕಾಶ ನೀಡಲಾಗಿದೆ. ಇದರಿಂದ `ಫಾಸ್ಟ್ಯಾಗ್’ ಅಳವಡಿಸಿದ ವಾಹನಗಳಿಂದಷ್ಟೇ ಹಣ ಕಡಿತವಾಗಿ ಟೋಲ್ ಸಂಗ್ರಹಗಾರರ ಖಾತೆ ಸೇರುತ್ತಿದೆ. ಉಳಿದ ವಾಹನಗಳವರಿಗೆ ಉಚಿತ ಸಂಚಾರದ ಅವಕಾಶವಾಗಿದೆ

Translate »