ವಿಧಾನಸೌಧದ ಸಿಬ್ಬಂದಿಗೆ ಕೊರೊನಾ: ಮಧ್ಯಾಹ್ನ 12 ಗಂಟೆಗೆ ಕಚೇರಿ ಕಾರ್ಯಾರಂಭ
ಮೈಸೂರು

ವಿಧಾನಸೌಧದ ಸಿಬ್ಬಂದಿಗೆ ಕೊರೊನಾ: ಮಧ್ಯಾಹ್ನ 12 ಗಂಟೆಗೆ ಕಚೇರಿ ಕಾರ್ಯಾರಂಭ

July 7, 2020

ಬೆಂಗಳೂರು: ವಿಧಾನಸೌಧದ ಪಹರೆ ಮತ್ತು ನಿಗಾವಣೆ ಶಾಖೆಯಲ್ಲಿ ಕೆಲಸ ನಿರ್ವಹಿಸುತ್ತಿರುವ ಪೊಲೀಸ್ ಸಿಬ್ಬಂದಿಗೆ ಕೊರೊನಾ ಪಾಸಿಟಿವ್ ಬಂದಿರುವುದರಿಂದ ಸೋಮವಾರ ಬೆಳಗ್ಗೆಯೇ ಸಚಿವಾಲಯದ ಎಲ್ಲಾ ಶಾಖೆಗಳನ್ನು ಸ್ಯಾನಿಟೈಸ್ ಮಾಡಿಸಲಾಯಿತು.

ವಿಧಾನಸೌಧದ ಎಲ್ಲಾ ಸಿಬ್ಬಂದಿ ಇಂದು ಮಧ್ಯಾಹ್ನ 12 ಗಂಟೆಗೆ ಕೆಲಸಕ್ಕೆ ಕಚೇರಿಗೆ ಹಾಜರಾಗುವಂತೆ ಸೂಚಿಸಲಾಯಿತು ಎಂದು ರಾಜ್ಯ ನೌಕರರ ಸಂಘದ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಧಾನಸೌಧ ಮೊದಲನೇ ಮಹಡಿಯಲ್ಲಿರುವ ಕಾವಲುಗಾರರ ಕೊಠಡಿಯಲ್ಲಿ ಕಾರ್ಯ ನಿರ್ವ ಹಿಸುತ್ತಿದ್ದ ಪೊಲೀಸ್ ಪೇದೆಗೆ ಕೊರೊನಾ ಪಾಸಿಟಿವ್ ಬಂದಿದೆ. ಈ ಹಿನ್ನೆಲೆಯಲ್ಲಿ ಕಚೇರಿಯನ್ನು ಸ್ಯಾನಿಟೈಸ್ ಮಾಡಿದ ನಂತರ 55 ವರ್ಷ ದಾಟಿದ ಅಧಿಕಾರಿ ಹಾಗೂ ನೌಕರರಿಗೆ ಇಂದು ಒಂದು ದಿನ ಮಾತ್ರ ರಜೆ ಘೋಷಿಸಲಾಗಿದೆ.

Translate »