ಡಿ.ಬನುಮಯ್ಯನವರಿಗೆ ಶಾಸಕ ನಾಗೇಂದ್ರ ಅರ್ಥಪೂರ್ಣ ನಮನ
ಮೈಸೂರು

ಡಿ.ಬನುಮಯ್ಯನವರಿಗೆ ಶಾಸಕ ನಾಗೇಂದ್ರ ಅರ್ಥಪೂರ್ಣ ನಮನ

July 7, 2020

ಮೈಸೂರು, ಜು.6- ಮೈಸೂರು ಕುಂಚಿಟಿಗರ ಸಂಘದ ವತಿಯಿಂದ ಶಿವರಾಂಪೇಟೆಯಲ್ಲಿರುವ ಆಲಮ್ಮನವರ ಛತ್ರದಲ್ಲಿ ಡಿ.ಬನುಮಯ್ಯ ಅವರ ಭಾವ ಚಿತ್ರಕ್ಕೆ ಶಾಸಕ ಎಲ್.ನಾಗೇಂದ್ರ ಪುಷ್ಪ ನಮನ ಸಲ್ಲಿಸಿದರು. ಅಲ್ಲದೆ ಅವರ ಸ್ಮರ ಣಾರ್ಥ ಸಸಿ ನೆಟ್ಟು ನೀರೆರೆದರು. ನಂತರ ವಿವಿಧ ಜಾತಿಯ ಗಿಡಗಳನ್ನು ನೆಡುವ ಮೂಲಕ ಸೋಮವಾರ ಡಿ. ಬನುಮಯ್ಯ ಅವರ 160ನೇ ಜಯಂ ತ್ಯೋತ್ಸವವನ್ನು ಆಯೋಜಿಸಲಾಗಿತ್ತು.

ಬಳಿಕ ಮಾತನಾಡಿದ ಶಾಸಕ ಎಲ್. ನಾಗೇಂದ್ರ, ಬನುಮಯ್ಯ ಅವರು ಮೈಸೂ ರಲ್ಲಿ ಮೊದಲು ಶಿಕ್ಷಣ ಸಂಸ್ಥೆ ಸ್ಥಾಪನೆ ಮಾಡಿದರು. ಆ ಒಂದು ಪ್ರಾಥಮಿಕ ಶಾಲೆ ನಂತರ ಹೈಸ್ಕೂಲ್ ಆಗಿ, ತದನಂತರ ಕಾಲೇಜ್ ಆಗಿ ಪರಿವರ್ತನೆಗೊಂಡಿತು. ಅದುವೇ ಇಂದಿನ ಡಿ.ಬನುಮಯ್ಯ ಕಾಲೇಜು, ಭಾರತೀಯ ಸಂಸ್ಕೃತಿಯ ಪರಂಪರೆಯ ಪ್ರತೀಕವಾಗಿ ಭಾರತ ಸರ್ಕಾರ ಗುರುತಿಸಿ ರುವ ಕೆಲವೇ ಕೆಲವು ಭವ್ಯವಾದ ಕಟ್ಟಡ ಗಳಲ್ಲಿ (Heritage buildings in India) ಈ ಕಾಲೇಜು ಕಟ್ಟಡವು ಒಂದಾಗಿರುವುದು ಮತ್ತೊಂದು ವಿಶೇಷ. ಇಂತಹ ಮಹಾನ್ ವ್ಯಕ್ತಿ ನಮ್ಮ ರಾಜ್ಯದವರು ಎಂಬುದು ನಮ್ಮ ಹೆಮ್ಮೆ. ಅವರು ಬರೀ ಒಬ್ಬ ವ್ಯಕ್ತಿಯಲ್ಲ. ಒಂದು ಶಕ್ತಿ. ಇಂದಿನ ಪೀಳಿಗೆಗೆ ಒಂದು ಪ್ರೇರಣೆಯಾದರೆ ಮುಂದಿನ ಪೀಳಿಗೆಗೆ ಒಂದು ಸಂದೇಶ. ಧರ್ಮ, ಸಿದ್ಧಾಂತ ಎಂದು ಕಿತ್ತಾಡುವ ಜನರು, ಇಂತಹ ಮಹಾನ್ ವ್ಯಕ್ತಿಯನ್ನು ನೋಡಿ ಕಲಿಯಬೇಕಾಗಿದೆ.

ಈ ವಿದ್ಯಾಸಂಸ್ಥೆ ಮೈಸೂರು ನಗರ, ಜಿಲ್ಲೆ ಅಲ್ಲದೆ ಇಡೀ ಕರ್ನಾಟಕದಲ್ಲಿ ಒಂದು ಪ್ರತಿಷ್ಠಿತ ವಿದ್ಯಾ ಸಂಸ್ಥೆಯಾಗಿದ್ದು, ಈ ಕಾಲೇ ಜಿನಲ್ಲಿ ಓದಿದ ಏಳು ಜನ ವಿದ್ಯಾರ್ಥಿಗಳು ಮೈಸೂರು ನಗರದ ಮೇಯರ್ ಆಗಿ ದ್ದಾರೆ. ಹಾಗೆಯೇ 1989ರಲ್ಲಿ ಕರ್ನಾಟಕ ದಿಂದ ಪ್ರಥಮ ಬಾರಿಗೆ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ಆಯ್ಕೆ ಯಾದವರು ಸಹ ಈ ಸಂಸ್ಥೆಯ ವಿದ್ಯಾರ್ಥಿ ಎಂಬುದು ಹೆಮ್ಮೆ ವಿಚಾರ ಎಂದರು. ಸಂಘದ ಕಾರ್ಯದರ್ಶಿ ಯೋಗಿಶ್, ಉಪಾಧ್ಯಕ್ಷ ಗಣೇಶ್, ಖಜಾಂಚಿ ಪ್ರದೀಪ್‍ಕುಮಾರ್, ನಿರ್ದೇಶಕರಾದ ವಿ.ರವಿ, ದೀಪಕ್, ಅನಂತ್ ಕುಮಾರ್, ಕುಂಚಿಟಿಗರಾದ ಪ್ರಭಾಕರ್, ಚಂದನ್ ಇನ್ನಿತರರು ಹಾಜರಿದ್ದರು.

Translate »