ಕೊರೊನಾ ವಾರಿಯರ್ಸ್‍ಗೆ ಮೈಸೂರು ತಾಪಂನಿಂದ ಗೌರವ ಸಮರ್ಪಣೆ
ಮೈಸೂರು

ಕೊರೊನಾ ವಾರಿಯರ್ಸ್‍ಗೆ ಮೈಸೂರು ತಾಪಂನಿಂದ ಗೌರವ ಸಮರ್ಪಣೆ

June 9, 2020

ಮೈಸೂರು, ಜೂ.8(ಆರ್‍ಕೆಬಿ)- ಕೊರೊನಾ ಸೋಂಕಿನ ವಿರುದ್ಧ ಜೀವದ ಹಂಗು ತೊರೆದು ಹೋರಾಡುತ್ತಿರುವ ಮೈಸೂರು ತಾಲೂಕಿನ ವೈದ್ಯರು, ವೈದ್ಯ ಕೀಯ ಸಿಬ್ಬಂದಿ, ಪೊಲೀಸ್ ಅಧಿಕಾರಿ ಗಳಿಗೆ ಮೈಸೂರು ತಾಲೂಕು ಪಂಚಾಯ್ತಿ ವತಿಯಿಂದ ಜಿಲ್ಲಾ ಪಂಚಾಯತಿ ಸಭಾಂ ಗಣದಲ್ಲಿ ಸೋಮವಾರ ಗೌರವಿಸಲಾಯಿತು.

ಕಂಟೈನ್ಮೆಂಟ್ ವಲಯ, ಕ್ವಾರಂಟೈನ್ ಸ್ಥಳಗಳಲ್ಲಿ ಕರ್ತವ್ಯ ನಿರ್ವಹಿಸಿರುವ ತಾಲೂಕು ವ್ಯಾಪ್ತಿಯ ವೈದ್ಯಾಧಿಕಾರಿ, ಪ್ರಾಥ ಮಿಕ ಆರೋಗ್ಯ ಕೇಂದ್ರಗಳ ವೈದ್ಯರು, ಹಿರಿಯ ಮತ್ತು ಕಿರಿಯ ಆರೋಗ್ಯ ಸಹಾ ಯಕರುಗಳಿಗೆ ತಾಪಂ ಅಧ್ಯಕ್ಷೆ ಕಾಳಮ್ಮ ಕೆಂಪರಾಮಯ್ಯ, ಉಪಾಧ್ಯಕ್ಷ ಎನ್.ಬಿ. ಮಂಜು, ತಾಪಂ ಇಓ ಕೃಷ್ಣಕುಮಾರ್ ಅವರು ಶಾಲು ಹೊದಿಸಿ, ಪೇಟ ತೊಡಿಸಿ, ಫಲ ತಾಂಬೂಲ ನೀಡಿ ಗೌರವ ಸಲ್ಲಿಸಿದರು.

ಕೊರೊನಾ ವಾರಿಯರ್ಸ್‍ಗಳಾದ ಎಸ್‍ಐ ಲೋಲಾಕ್ಷಿ, ವರುಣಾ ಠಾಣೆ ಎಸ್‍ಐ ಚೇತನ್, ತಹಸೀಲ್ದಾರ್ ರಕ್ಷಿತ್, ತಾಪಂ ಇಒ ಕೃಷ್ಣಕುಮಾರ್, ತಾಲೂಕು ಆರೋ ಗ್ಯಾಧಿಕಾರಿ ಡಾ.ಮಹದೇವ ಪ್ರಸಾದ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಎಸ್.ಪ್ರಕಾಶ್, ಪ್ರಾಥಮಿಕ ಆರೋಗ್ಯ ಕೇಂದ್ರಗಳ ಆಡಳಿತ ವೈದ್ಯಾಧಿಕಾರಿಗಳಾದ ಉದ್ಭೂರಿನ ಡಾ.ಬಿ.ಜಿ. ಕುಮಾರಸ್ವಾಮಿ, ದೂರ ಕೇಂದ್ರದ ಡಾ. ಬಿ.ಎನ್.ಶಿವಶಂಕರ್, ಸಾಗರಕಟ್ಟೆಯ ಡಾ. ಕೇಶವಮೂರ್ತಿ, ಬೀರಿಹುಂಡಿಯ ಡಾ. ಮಮತಾ, ಕೇರ್ಗಳ್ಳಿ ಸಾಲುಂಡಿಯ ಡಾ. ಬೃಂದಾ, ಸಿದ್ದರಾಮನಹುಂಡಿಯ ಡಾ. ವಿನುತಾ, ಹಂಚ್ಯಾದ ಡಾ.ರವೀಂದ್ರ, ಕೀಳನ ಪುರದ ಡಾ.ಸುರೇಶ್, ನಾಗನಹಳ್ಳಿಯ ಡಾ. ಧರ್ಮೇಶ್, ಮೆಲ್ಲಹಳ್ಳಿಯ ಡಾ.ಗಣೇಶ್ ಪ್ರಸಾದ್, ಕಡಕೊಳದ ಡಾ.ನಾಗಕನ್ಯೆ, ವರುಣಾದ ಡಾ.ಎ.ಎನ್.ಕಾಂತರಾಜು, ಮದ್ದೂರು ಕಲ್ಲಹಳ್ಳಿಯ ಡಾ.ಚಂಪಾ, ಇಲ ವಾಲದ ಡಾ.ರೇಖಾ, ಜಯಪುರ ಸಮು ದಾಯ ಆರೋಗ್ಯ ಕೇಂದ್ರದ ಪ್ರಸೂತಿ ಮತ್ತು ಸ್ತ್ರೀ ರೋಗ ತಜ್ಞೆ ಡಾ. ಪೂರ್ಣಿಮಾ, ದಂತ ವೈದ್ಯೆ ಡಾ.ಚೈತ್ರಾ, ತಾಲೂಕು ಆರೋಗ್ಯಾಧಿಕಾರಿ ಕಚೇರಿಯ ಹಿರಿಯ ಆರೋಗ್ಯ ಸಹಾಯಕರಾದ ವೆಂಕಟೇಶ್, ಸುಂದರಿ, ಜಿಲ್ಲಾ ಆರೋಗ್ಯಾಧಿಕಾರಿ ಕಚೇ ರಿಯ ಕಿರಿಯ ಆರೋಗ್ಯ ಸಹಾಯಕ ರಾದ ಶಿವಕುಮಾರ್, ಸಾಗರ್, ವಿವಿಧ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕಿರಿಯ ಆರೋಗ್ಯ ಸಹಾಯಕರಾಗಿರುವ ಮಹೇಂದ್ರ, ಯೋಗೇಶ್ ಹಾಗೂ ಹೆಚ್.ಎನ್.ರಶ್ಮಿ ಅವರನ್ನು ಗೌರವಿಸಲಾಯಿತು.

ಗೌರವ ಸ್ವೀಕರಿಸಿ ಮಾತನಾಡಿದ ತಾಲೂಕು ಆರೋಗ್ಯಾದಿಕಾರಿ ಡಾ.ಮಹದೇವಪ್ರಸಾದ್, ಕೊರೊನಾ ಸೋಂಕು ವಿಶ್ವಾದ್ಯಂತ ವ್ಯಾಪಿ ಸಿದೆ. ನಾವು ಸೋಂಕು ನಿಯಂತ್ರಣಕ್ಕೆ ವಿವಿಧ ಇಲಾಖೆಗಳ ಸಮನ್ವಯತೆಯೊಂ ದಿಗೆ ಕೆಲಸ ಮಾಡಿದ್ದೇವೆ. ಜಿಲ್ಲೆಯಲ್ಲಿ 97 ಪಾಸಿಟಿವ್ ಪ್ರಕರಣಗಳು ಕಂಡು ಬಂದರೂ, ಅದನ್ನು ಮೂರಂಕಿ ದಾಟಲು ಬಿಟ್ಟಿಲ್ಲ. ಎಲ್ಲಾ ವೈದ್ಯರು, ಸಿಬ್ಬಂದಿ ಶ್ರಮವಹಿಸಿದ್ದು, ಇದ ರಲ್ಲಿ ಜಿಲ್ಲಾಧಿಕಾರಿಗಳ ಪಾತ್ರ ಮಹತ್ವದ್ದಾ ಗಿದೆ. ಪೊಲೀಸ್ ಇಲಾಖೆ ಸೇರಿದಂತೆ ಎಲ್ಲರೂ ಸಹಕಾರ ನೀಡಿದ್ದರಿಂದ ಪಾಸಿ ಟಿವ್ ಪ್ರಕರಣಗಳು ನೂರರ ಗಡಿ ದಾಟ ದಂತೆ ನಿಯಂತ್ರಿಸಲು ಶ್ರಮಿಸಿದ್ದೇವೆ. ಇದು ಇನ್ನೂ ಜಾಸ್ತಿಯಾಗುತ್ತದೆಂದು ತಜ್ಞರು ಅಭಿಪ್ರಾಯಪಟ್ಟಿದ್ದು, ಇನ್ನೂ ಹೆಚ್ಚಿನ ಶ್ರಮ ವಹಿಸಲು ನಾವೆಲ್ಲರೂ ಸಿದ್ಧರಿದ್ದೇವೆ ಎಂದರು.

ತಾಪಂ ಸದಸ್ಯರಾದ ಹನುಮಂತು, ಶಂಕರ್, ಶ್ರೀಕಂಠ, ಇಒ ಕೃಷ್ಣಕುಮಾರ್, ತಹಸೀಲ್ದಾರ್ ರಕ್ಷಿತ್, ತಾಲೂಕು ಆರೋ ಗ್ಯಾಧಿಕಾರಿ ಡಾ.ಮಹದೇವ ಪ್ರಸಾದ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಎಸ್.ಪ್ರಕಾಶ್ ಇನ್ನಿತರರು ಉಪಸ್ಥಿತರಿದ್ದರು.

Translate »