- ಬೆಂಗಳೂರೊಂದರಲ್ಲಿಯೇ 23,106 ಪಾಸಿಟಿವ್ ಪ್ರಕರಣ;
- ರಾಜ್ಯದಲ್ಲಿ 346 ಸೋಂಕಿತರ ಮರ
- ಮೈಸೂರು ಜಿಲ್ಲೆಯಲ್ಲಿ 2790 ಮಂದಿಗೆ ಸೋಂಕು, 2,075 ಸೋಂಕಿತರು ಗುಣಮುಖ, ಸಾವು 10
ಮೈಸೂರು,ಮೇ5 (ವೈಡಿಎಸ್)-ರಾಜ್ಯದಲ್ಲಿ ಕೊರೊನಾ ಸೋಂಕಿನ ಪ್ರಕರಣಗಳ ಜೊತೆಗೇ ಸಾವಿನ ಸಂಖ್ಯೆಯೂ ಹೆಚ್ಚುತ್ತಾ ಜನರಲ್ಲಿ ಆತಂಕ ಸೃಷ್ಟಿಸಿದೆ. ಬುಧ ವಾರ ರಾಜ್ಯದಲ್ಲಿ ಕೊರೊನಾ ಸೋಂಕಿಗೆ ಒಳಗಾದವರ ಸಂಖ್ಯೆ 50 ಸಾವಿರದ ಗಡಿ ದಾಟಿದೆ. ಮೈಸೂರು ಜಿಲ್ಲೆಯಲ್ಲೂ ಸೋಂಕು ನಿಯಂ ತ್ರಣ ಮೀರಿ ಹರಡುತ್ತಿದ್ದು, ಇಂದು 2,790 ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ.
ಬೆಂಗಳೂರು ನಗರವೊಂದರಲ್ಲೇ ಬುಧವಾರ 23,106 ಪ್ರಕರಣಗಳು ಪತ್ತೆಯಾಗಿದ್ದು, ರಾಜ್ಯದಲ್ಲಿ ಮೊದಲ ಸ್ಥಾನದಲ್ಲಿದೆ. ನಂತರದ ಸ್ಥಾನಗಳಲ್ಲಿ ಮೈಸೂರು, ತುಮಕೂರು, ಉಡುಪಿ ಜಿಲ್ಲೆಗಳಿವೆ.
ತಾಲೂಕುವಾರು: ಇಂದು ಮೈಸೂರು ನಗರದಲ್ಲಿ 1,633 ಕೊರೊನಾ ಸೋಂಕಿನ ಪ್ರಕರಣ ಪತ್ತೆಯಾಗಿದ್ದರೆ, ಮೈಸೂರು ತಾಲೂಕು 214, ತಿ.ನರಸೀಪುರ 172, ನಂಜನ ಗೂಡು 148, ಕೆ.ಆರ್.ನಗರ 217, ಹೆಚ್.ಡಿ.ಕೋಟೆ 184, ಹುಣಸೂರು 131 ಹಾಗೂ ಪಿರಿಯಾಪಟ್ಟಣ ತಾಲೂ ಕಿನಲ್ಲಿ 91 ಪ್ರಕರಣ ಕಂಡುಬಂದಿವೆ. ಜಿಲ್ಲೆಯಲ್ಲಿ ಒಟ್ಟು 2,790 ಜನರಿಗೆ ಬುಧವಾರ ಕೊರೊನಾ ಸೋಂಕು ದೃಢಪಟ್ಟಿದೆ. ಜಿಲ್ಲೆಯಲ್ಲಿ ಈವರೆಗೆ ಒಟ್ಟು 89,822 ಮಂದಿಗೆ ಸೋಂಕು ತಗುಲಿದಂತಾಗಿದೆ.
2,075 ಮಂದಿಗೆ ಗುಣ: ಮೈಸೂರು ಜಿಲ್ಲೆಯಲ್ಲಿ ಕೊರೊನಾ ಸೋಂಕಿಗೆ ಒಳಗಾಗಿ ಚಿಕಿತ್ಸೆ ಬಳಿಕ ಗುಣ ಕಂಡವರ ಸಂಖ್ಯೆಯೂ ಹೆಚ್ಚೇ ಇದೆ. ಬುಧವಾರ 2,075 ಸೋಂಕಿತರು ಗುಣಮುಖರಾಗಿದ್ದು, ಜಿಲ್ಲೆಯ ವಿವಿಧ ಆಸ್ಪತ್ರೆ ಗಳಿಂದ ಡಿಸ್ಚಾರ್ಜ್ ಆಗಿದ್ದಾರೆ. ಜಿಲ್ಲೆಯಲ್ಲಿ ಈವರೆಗೆ ಒಟ್ಟು 71,977 ಮಂದಿ ಹೋಂ ಐಸೋಲೇಷನ್, ಆಸ್ಪತ್ರೆ, ನಿಗಾ ಕೇಂದ್ರಗಳಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. ಜಿಲ್ಲೆಯಲ್ಲಿ ಇನ್ನೂ 16,591 ಸಕ್ರಿಯ ಪ್ರಕರಣಗಳಿವೆ.
ಇಂದು 10 ಮಂದಿ ಕೊರೊನಾದಿಂದಾಗಿ ಸಾವನ್ನ ಪ್ಪಿದ್ದು, ಈವರೆಗೆ ಮೈಸೂರು ಜಿಲ್ಲೆಯಲ್ಲಿ 1,254 ಮಂದಿ ಕೊರೊನಾ ಸೋಂಕಿತರು ಸಾವಿಗೀಡಾಗಿದ್ದಾರೆ.
50,112 ಪ್ರಕರಣ: ರಾಜ್ಯದಲ್ಲಿ ಬಾಗಲಕೋಟೆ ಜಿಲ್ಲೆ ಯಲ್ಲಿ 719, ಬಳ್ಳಾರಿ 927, ಬೆಳಗಾವಿ 920, ಬೆಂಗಳೂರು ಗ್ರಾಮಾಂತರ 1,033, ಬೆಂಗಳೂರು ನಗರ 23,106, ಬೀದರ್ 482, ಚಾಮರಾಜನಗರ 542, ಚಿಕ್ಕಬಳ್ಳಾಪುರ 830, ಚಿಕ್ಕಮಗಳೂರು 1,009, ಚಿತ್ರದುರ್ಗ 152, ದಕ್ಷಿಣ ಕನ್ನಡ 1,529, ದಾವಣಗೆರೆ 548, ಧಾರವಾಡ 1,030, ಗದಗ 189, ಹಾಸನ 1,604, ಹಾವೇರಿ 224, ಕಲಬುರಗಿ 1,097, ಕೊಡಗು 768, ಕೋಲಾರ 1,115, ಕೊಪ್ಪಳ 182, ಮಂಡ್ಯ 1,621, ಮೈಸೂರು 2,790, ರಾಯಚೂರು 427, ರಾಮನಗರ 475, ಶಿವಮೊಗ್ಗ 702, ತುಮಕೂರು 2,335, ಉಡುಪಿ 1,655, ಉತ್ತರ ಕನ್ನಡ 849, ವಿಜಯಪುರ 513 ಹಾಗೂ ಯಾದಗಿರಿ ಜಿಲ್ಲೆಯಲ್ಲಿ 739 ಮಂದಿ ಸೇರಿದಂತೆ ರಾಜ್ಯದಲ್ಲಿ ಬುಧವಾರ ಒಟ್ಟು 50,112 ಪಾಸಿಟಿವ್ ಪ್ರಕರಣ ಪತ್ತೆಯಾಗಿವೆ. ಇದರೊಂದಿಗೆ ರಾಜ್ಯದಲ್ಲಿ ಈವರೆಗಿನ ಸೋಂಕಿತರ ಒಟ್ಟು ಸಂಖ್ಯೆ 17,41,046ಕ್ಕೆ ಏರಿದೆ. ಇಂದು ಗುಣಮುಖರಾದ 26,841 ಮಂದಿ ಸೇರಿದಂತೆ ಈವರೆಗೆ ಒಟ್ಟು 12,36, 854 ಸೋಂಕಿತರು ಗುಣಕಂಡಿದ್ದಾರೆ. ಇದೇ ವೇಳೆ ರಾಜ್ಯದಲ್ಲಿ 346 ಸೋಂಕಿತರು ಮೃತಪಟ್ಟಿದ್ದಾರೆ. ಒಟ್ಟು ಸಾವಿನ ಸಂಖ್ಯೆ 16,884ಕ್ಕೆ ಏರಿಕೆಯಾಗಿದೆ. ಇನ್ನು 4,87,288 ಸಕ್ರಿಯ ಪ್ರಕರಣಗಳಿವೆ.