ಬೆಂಗಳೂರು, ಅ.8(ಕೆಎಂಶಿ)- ಮುಂದಿನ ವರ್ಷದ ಮಾರ್ಚ್ ಅಂತ್ಯದವರೆಗೂ ಕೊರೊನಾ ಸೋಂಕು ಹೀಗೆ ಮುಂದುವರೆಯಲಿದೆ. ಸಾರ್ವ ಜನಿಕರು ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳುವ ಮೂಲಕವಷ್ಟೇ ಈ ವೈರಾಣುವಿನಿಂದ ದೂರ ಉಳಿಯಬಹುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಎಚ್ಚರಿಸಿದ್ದಾರೆ.
ಗೃಹ ಕಚೇರಿ ಕೃಷ್ಣಾದಲ್ಲಿ ಸೋಂಕಿನ ಪ್ರಮಾಣ ಹೆಚ್ಚಿರುವ ಮೈಸೂರು, ಹಾಸನ, ತುಮಕೂರು, ಬಳ್ಳಾರಿ, ದಕ್ಷಿಣ ಕನ್ನಡ, ಶಿವಮೊಗ್ಗ, ಧಾರವಾಡ, ಬೆಳಗಾವಿ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳು, ಪೊಲೀಸ್ ವರಿ ಷ್ಠಾಧಿಕಾರಿಗಳು ಮತ್ತು ಜಿಲ್ಲಾ ಆರೋಗ್ಯಾ ಧಿಕಾರಿಗಳೊಂದಿಗೆ ವಿಡಿಯೋ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಮುಖ್ಯಮಂತ್ರಿ ಗಳು ಸದ್ಯಕ್ಕೆ ವೈರಾಣುವನ್ನೇ ಕೊಲ್ಲು ವಂತಹ ಔಷಧಿಗಳು ನಮ್ಮಲ್ಲಿ ಬಂದಿಲ್ಲ.
ಮುಂದಿನ ವರ್ಷ ಲಸಿಕೆಯ ಮೊದಲ ಭಾಗವಷ್ಟೇ ಬರಲಿದೆ. ಅಲ್ಲಿಯವರೆಗೂ ಸೋಂಕಿನೊಂದಿಗೆ ಜೀವನ ಕಳೆಯಬೇಕು. ಹಾಗೆಂದು ನಾವುಗಳು ಸುಮ್ಮನೆ ಕೂರಲಾಗದು. ಸೋಂಕು ನಿಯಂತ್ರಣಕ್ಕೆ ವಿಶ್ವಸಂಸ್ಥೆ ಮತ್ತು ಕೇಂದ್ರ ಸರ್ಕಾರ ಸೂಚಿಸಿರುವ ಮಾರ್ಗ ಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಿ ದ್ದೇವೆ. ದಿನದಿಂದ ದಿನಕ್ಕೆ ಈ ಜಿಲ್ಲೆಗಳಲ್ಲಿ ಹೆಚ್ಚಾಗುತ್ತಿದೆ. ಇದನ್ನು ನಿಯಂತ್ರಿಸಲು ಸಾರ್ವ ಜನಿಕರ ಸಹಕಾರವನ್ನು ಪಡೆದುಕೊಳ್ಳಿ ಎಂದಿ ದ್ದಾರೆ. ಸ್ವಚ್ಛತೆಗೆ ಆದ್ಯತೆ ನೀಡಿ, ಯಾವ ಪ್ರದೇಶದಲ್ಲಿ ಸೋಂಕಿನ ಪ್ರಮಾಣ ಹೆಚ್ಚಾಗಿ ಕಾಣುತ್ತದೆಯೋ ಅಂತಹ ಕಡೆ ಕೋವಿಡ್-19 ಪರೀಕ್ಷೆಗಳನ್ನು ಹೆಚ್ಚಳ ಮಾಡಿ, ಪರೀಕ್ಷೆ ಮಾಡಿಸಿಕೊಳ್ಳಲು ಜನರಲ್ಲಿ ಭಯವಿದೆ, ಅದನ್ನು ಹೋಗಲಾಡಿಸಿ. ಮಾರುಕಟ್ಟೆ ಮತ್ತು ಜನದಟ್ಟಣೆ ಪ್ರದೇಶಗಳಲ್ಲಿ ಎಚ್ಚರವಹಿಸಿ, ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಿ. ಯಾವುದೇ ಸೋಂಕಿತನಿಗೂ ಆಸ್ಪತ್ರೆಗಳಲ್ಲಿ ಚಿಕಿತ್ಸೆ ದೊರೆಯುತ್ತಿಲ್ಲ ಎಂಬ ಮಾತುಗಳು ಬರಬಾರದು. ಕೋವಿಡ್-19 ನಿಯಂತ್ರಿಸಲು ಹಣಕಾಸಿನ ಮುಗ್ಗಟ್ಟಿಲ್ಲ. ಅಗತ್ಯವಾದ ಔಷಧಿ ಮತ್ತು ಇತರೆ ಪರಿಕರಗಳನ್ನು ಸರ್ಕಾರದ ವತಿಯಿಂದ ಪಡೆದುಕೊಳ್ಳಿ. ನಿಮಗೆ ಏನೇ ತೊಂದರೆ ಇದ್ದರೂ, ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತನ್ನಿ. ಮಾಸ್ಕ್ ಧರಿಸುವಿಕೆ, ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಜನರಿಗೆ ತಿಳುವಳಿಕೆ ನೀಡಿ, ಮಾಸ್ಕ್ ಹಾಕದೇ ರಸ್ತೆಗಿಳಿಯುವವರ ವಿರುದ್ಧ ದಂಡ ವಿಧಿಸಿ, ಪೊಲೀಸರಿಗೆ ಇದರ ಹೊಣೆಗಾರಿಕೆ ನೀಡಿ. ಹಾಗೆಂದು ಜನರನ್ನು ಹೆದರಿಸುವುದು ಮಾಡಬೇಡಿ. ತಿಳುವಳಿಕೆ ನೀಡುವುದರ ಮೂಲಕ ಅವರ ಮನಸ್ಸು ಗೆದ್ದುಕೊಳ್ಳಿ ಎಂದು ಹೇಳಿದ್ದಾರೆ. ತಜ್ಞರು ಅಕ್ಟೋಬರ್ ಅಂತ್ಯಕ್ಕೆ ಸೋಂಕು ನಿಯಂತ್ರಣಕ್ಕೆ ಬರುತ್ತಿದೆ ಎನ್ನುತ್ತಿದ್ದರು. ನಂತರ ಡಿಸೆಂಬರ್‍ಗೆ ಹೋಗಿ, ಈಗ ಮಾರ್ಚ್ ಎನ್ನುತ್ತಿದ್ದಾರೆ. ಏನೇ ಆಗಲಿ, ನಾವು ನಿಯಂತ್ರಿ ಸಲು ಅನುಸರಿಸಬೇಕಾದ ಕ್ರಮಗಳನ್ನು ಚಾಚೂ ತಪ್ಪದೇ ಮಾಡಿ, ಎಲ್ಲಿಯೂ ಲೋಪ ದೋಷಗಳು ಉಂಟಾಗುವುದು ಬೇಡ ಎಂದಿದ್ದಾರೆ. ಅಗತ್ಯವೆನಿಸಿದರೆ, ಈ ರೋಗಿಗಳಿಗಾಗಿ ಆಸ್ಪತ್ರೆಗಳಲ್ಲಿ ಹೆಚ್ಚು ಹಾಸಿಗೆಗಳನ್ನು ಅಳವಡಿಸಿಕೊಳ್ಳಿ ಎಂದು ಸೂಚಿಸಿದ್ದಾರೆ.