ಮನುಷ್ಯ ಸಂಬಂಧ ಕಡಿದ ಕೊರೊನಾ
ಮಂಡ್ಯ

ಮನುಷ್ಯ ಸಂಬಂಧ ಕಡಿದ ಕೊರೊನಾ

April 28, 2021

ನಾಗಮಂಗಲ, ಏ.27(ಮಹೇಶ್)- ಕಳೆದ ಒಂದು ವರ್ಷದಿಂದ ಮಹಾಮಾರಿ ಕೊರೊನಾ ವೈರಸ್ ಮನುಷ್ಯ ಸಂಬಂಧಗಳಿಗೆ ಕೊಳ್ಳಿಯಿಡುತ್ತಿದೆ.
ಸಂಬಂಧಿಯೋ, ಸ್ನೇಹಿತರು, ಆಪ್ತರು ಗಳು ಮೃತಪಟ್ಟರೆ ದೂರದಿಂದಲೇ ನಿಂತು ಒಂದೆರಡು ಹನಿ ಕಣ್ಣೀರು ಸುರಿಸಿ ಅಯ್ಯೋ ಎಂದು ಲೊಚಗುಡುವಷ್ಟರ ಮಟ್ಟಿಗೆ ಕೊರೊನಾ ಬಾಂಧವ್ಯಗಳನ್ನು ದೂರಮಾಡಿ ಬಿಟ್ಟಿದೆ.

ಮನುಷ್ಯನಲ್ಲಿದ್ದ ಅಹಂಕಾರದ ಮಾತು ಗಳಿಗೂ ಬಹುತೇಕ ಕಡಿವಾಣ ಬಿದ್ದಿದ್ದು, ಯಾರದೊ ಶವಕ್ಕೆ ಇನ್ಯಾರೋ ಕೊಳ್ಳಿಯಿಡುವ ಸ್ಥಿತಿ ನಿರ್ಮಾಣವಾಗಿದೆ. ಈ ನಡುವೆ ಕೊರೊನಾ ಹೆಮ್ಮಾರಿ ಒಂದು ಹೊಸ ಪದವೊಂದನ್ನು ಹುಟ್ಟು ಹಾಕಿದೆ ವಾರಿಯರ್ಸ್ ಎಂದು. ಆ ಪದ ಸಾಕಷ್ಟು ಅರ್ಥವನ್ನು ಕೊಡುತ್ತಿದೆ. ನಿಜವಾದ ಕೊರೊನಾ ವಾರಿಯರ್ಸ್ ಪೌರಕಾರ್ಮಿಕರು. ಸಾರ್ವಜನಿಕ ರಿಗೆ ಶೇ 50 ಆರೋಗ್ಯದಾತರು ಅವರು. ಶವಗಳಿಗೆ ಸಂಸ್ಕಾರ ಮಾಡಿ ನಿಜವಾದ ವಾರಿಯರ್ಸ್‍ಗಳಾಗಿದ್ದಾರೆ. ನಾಗಮಂಗಲ ಪಟ್ಟಣದ ಸುತ್ತಮುತ್ತ ಹಾವು ಹಿಡಿದು ಜೀವನ ಮಾಡುತ್ತಿದ್ದ ವ್ಯಕ್ತಿಯೋರ್ವ ಸೋಮವಾರ ಮೃತಪಟ್ಟಿದ್ದಾನೆ.

ಆದರೆ ಸಂಸ್ಕಾರ ಮಾಡಲು ಯಾರೂ ಮುಂದೆ ಬಾರದ ಕಾರಣ ಪೌರಕಾರ್ಮಿಕರ ಕಾಲೋನಿಯ ಡಾ. ಬಿ.ಆರ್.ಅಂಬೇಡ್ಕರ್ ಯುವಕ ಸಂಘದ ರವಿ, ಮಾರ, ಸುಬ್ರಹ್ಮಣ್ಯ ಇತರರು ತಕ್ಷಣವೇ ಪುರಸಭಾ ಮುಖ್ಯಾಧಿ ಕಾರಿ ಮಹಾದೇವಯ್ಯ ಹಾಗೂ ತಹಸಿಲ್ದಾರ್ ಕುಂ.ಞ ಅಹಮದ್‍ಗೆ ವಿಷಯ ತಿಳಿಸಿ, ತಾವೇ ಪಿಪಿಇ ಕಿಟ್ ಧರಿಸಿ ಆ ವೃದ್ಧನ ಸಂಸ್ಕಾರವನ್ನು ನೆರವೇರಿಸಿದರು.

ಆ ಸಮಯದಲ್ಲಿ ಮೃತನ ಪತ್ನಿ ಎರಡೂ ಕೈ ಮುಗಿದು ಕೃತಜ್ಞತೆ ಸಲ್ಲಿಸಿದರೂ ಸಿನಿಮಾ ಹಾಡೊಂದು ನೆನಪಾಯಿತು. ಯಾರಿಗೆ ಯಾರುಂಟು … ಎರವಿನ ಸಂಸಾರ… ನೀರಿನ ಮೇಲಿನ ಗುಳ್ಳೆ …. ನೆರೆದಿದ್ದವರ ಹಲವರಲ್ಲಿ ಕಣ್ಣೀರ ಹನಿಗಳು ಹೊರಬಂದವು.

Translate »