ಮಂಡ್ಯ, ಏ.27- ದೇಶವನ್ನು ಕಾಡುತ್ತಿರುವ ಕೊರೊನಾ ಸೋಂಕಿನಿಂದ ಪಾರಾಗಲು ಪ್ರತಿಯೊಬ್ಬರೂ ಲಸಿಕೆ ಪಡೆಯುವಂತೆ ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಜೆ. ವಿಜಯಕುಮಾರ್ ಸಲಹೆ ನೀಡಿದರು.
ಭಾರತೀಯ ಜನತಾ ಪಾರ್ಟಿ ಯುವ ಮೋರ್ಚಾ ವತಿಯಿಂದ ನಗರದ ಕ್ಯಾತುಂಗೆರೆ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ ನಡೆದ ಕೋವಿಡ್-19 ಲಸಿಕಾ ಜಾಗೃತಿ ಅಭಿಯಾನ ದಲ್ಲಿ ಮಾತನಾಡಿದ ಅವರು, ಕೋವಿಡ್ ಮಹಾಮಾರಿ ನಿಯಂತ್ರಿಸಲು ಮಾಸ್ಕ್ ಧರಿಸು ವುದು ಮತ್ತು ಸಾಮಾಜಿಕ ಅಂತರ ಕಾಯ್ದು ಕೊಳ್ಳುವುದೇ ಬ್ರಹ್ಮಾಸ್ತ್ರವಾಗಿದೆ ಎಂದರು.
ಈಗಾಗಲೇ ಬಿಜೆಪಿ ವತಿಯಿಂದ ಕೋವಿಡ್ ಸಹಾಯವಾಣಿಯನ್ನು ತೆರೆಯಲಾಗಿದೆ, ಜಿಲ್ಲೆಯಲ್ಲೂ ಸಹ ಸಹಾಯವಾಣಿ ಸ್ಥಾಪಿಸ ಲಾಗಿದೆ. ಹಲವರನ್ನು ಈ ಕಾರ್ಯಕ್ಕೆ ನಿಯೋಜಿ ಸಲಾಗಿದೆ. ಜನತೆ ಇದನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಹೇಳಿದರು.
ಕೇಂದ್ರ ಸರ್ಕಾರ 18 ವರ್ಷದಿಂದ 45 ವರ್ಷ ದವರಿಗೆ ಉಚಿತ ಲಸಿಕೆ ನೀಡಲು ನಿರ್ಧರಿಸಿದೆ. ರಾಜ್ಯ ಸರ್ಕಾರವೂ ಉಚಿತವಾಗಿ ನೀಡಲುz್ದÉೀಶಿಸಿದೆ. ಮೇ 1ರಿಂದ 18 ವರ್ಷ ಮೇಲ್ಪಟ್ಟ ಎಲ್ಲರೂ ಲಸಿಕೆ ಪಡೆಯುವ ಮೂಲಕ ಅಭಿಯಾನ ದಲ್ಲಿ ಪಾಲ್ಗೊಳ್ಳುವಂತೆ ಸಲಹೆ ನೀಡಿದರು.
ಈಗ ಕೇಂದ್ರ ಸರ್ಕಾರ ಬಡವರೆ ಲ್ಲರಿಗೂ 2 ತಿಂಗಳು ಉಚಿತ ಪಡಿತರ, 5 ಕೆ.ಜಿಯಂತೆ ಪ್ರತಿಯೊಬ್ಬ ಬಡ ವ್ಯಕ್ತಿಗೂ ನೀಡುವ ಯೋಜನೆ ಘೋಷಿಸಿದೆ. ಕೋವಿಡ್ ಸೋಂಕಿತರು ನಮ್ಮ ಸಹಾಯವಾಣಿಯನ್ನು ಸಂಪರ್ಕಿಸಿದಲ್ಲಿ ಅಂತಹವರಿಗೆ ಆಸ್ಪತ್ರೆಗಳಲ್ಲಿ ಆಕ್ಸಿಜನ್, ಬೆಡ್‍ಗಳು, ರೆಮ್ಡಿಸಿವಿಯರ್ ಇಂಜಕ್ಷನ್ ಗಳು, ಐಸಿಯು ಹಾಸಿಗೆಗಳ ಕೊರತೆ ಯಿದ್ದಲ್ಲಿ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಸಂಪರ್ಕ ಸಾಧಿಸುವ ಪ್ರಯತ್ನ ಮಾಡಲಾಗುವುದು ಎಂದು ಭರವಸೆ ನೀಡಿದರು.
ಕೊರೊನಾವಿಲ್ಲದ ಇತರೆ ರೋಗಿಗಳಿಗೆ ಆಸ್ಪತ್ರೆಗಳ ಸಮಸ್ಯೆಗಳಿದ್ದಲ್ಲಿ ಅಂತಹವರು ನಮ್ಮ ಗಮನಕ್ಕೆ ತಂದಲ್ಲಿ ಸಹಾಯ ಮಾಡಲಾಗುವುದು. ಶವ ಸಂಸ್ಕಾರಕ್ಕೂ ಸಹ ತೊಂದರೆಯಾದಲ್ಲಿ ನಮ್ಮ ಸಹಾಯ ವಾಣಿಯನ್ನು ಸಂಪರ್ಕಿಸಿದಲ್ಲಿ ನಮ್ಮ ಕಾರ್ಯಕರ್ತರು ಅದಕ್ಕೆ ಸ್ಪಂದಿಸುವ ಪ್ರಾಮಾಣಿಕ ಪ್ರಯತ್ನ ಮಾಡಲಿದ್ದಾರೆ ಎಂದು ಹೇಳಿದರು.
ಯುವ ಮೋರ್ಚಾ ರಾಜ್ಯ ಕಾರ್ಯಕಾರಿಣಿ ಸದಸ್ಯ ರಜತ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂದೇಶ್, ಜಿಲ್ಲಾ ಯುವ ಮೋರ್ಚಾ ಉಪಾಧ್ಯಕ್ಷ ನಿತಿನ್, ಸಾಮಾಜಿಕ ಜಾಲತಾಣದ ಪ್ರಮುಖ್ ಅಮಿತ್, ಯುವಮೋರ್ಚಾ ಅಧ್ಯಕ್ಷ ಅನಿಲ್, ಧನಂಜಯ, ಮೋಹನ್, ಅರುಣ್, ಸುನಿಲ್, ವಿನೋದ್, ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಶಶಿಕಲಾ, ಪ್ರಯೋಗಾಲಯ ತಂತ್ರಜ್ಞ ಶಂಭುಲಿಂಗೇಗೌಡ ಇತರರಿದ್ದರು.