ಮೈಸೂರಲ್ಲಿ 27 ನರ್ಸಿಂಗ್ ವಿದ್ಯಾರ್ಥಿಗಳು ಸೇರಿ 48 ಮಂದಿಗೆ ಕೊರೊನಾ ಸೋಂಕು
ಮೈಸೂರು

ಮೈಸೂರಲ್ಲಿ 27 ನರ್ಸಿಂಗ್ ವಿದ್ಯಾರ್ಥಿಗಳು ಸೇರಿ 48 ಮಂದಿಗೆ ಕೊರೊನಾ ಸೋಂಕು

February 10, 2021

ಮೈಸೂರು, ಫೆ.8(ಎಂಕೆ)- ನಗರದ ಖಾಸಗಿ ನರ್ಸಿಂಗ್ ಕಾಲೇಜಿನ 27 ವಿದ್ಯಾರ್ಥಿನಿಯರು ಸೇರಿ ಮೈಸೂರು ಜಿಲ್ಲೆಯಲ್ಲಿ ಸೋಮವಾರ 48 ಮಂದಿಗೆ ಕೊರೊನಾ ಸೋಂಕು ತಗುಲಿದೆ. 44 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಯಾವುದೇ ಸಾವು ಸಂಭವಿಸಿಲ್ಲ. ಒಟ್ಟು ಸೋಂಕಿತರ ಸಂಖ್ಯೆ 53,4624ಕ್ಕೆ ಏರಿಕೆಯಾದರೆ, 52,399 ಮಂದಿ ಗುಣಮುಖರಾಗಿದ್ದಾರೆ. ಇಲ್ಲಿಯವರೆಗೆ 1,027 ಮಂದಿ ಸಾವನ್ನಪ್ಪಿದ್ದು, 198 ಮಂದಿಯಲ್ಲಿ ಸೋಂಕು ಸಕ್ರಿಯವಾಗಿದೆ. ಕೇರಳ ಮೂಲದ 27 ವಿದ್ಯಾರ್ಥಿನಿಯರು ನಗರದ ಖಾಸಗಿ ನರ್ಸಿಂಗ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು, ಒಂದೂವರೆ ತಿಂಗಳ ಹಿಂದೆಯೇ ಮೈಸೂರಿಗೆ ವಾಪಸ್ಸಾಗಿದ್ದರು. 27 ಮಂದಿ ವಿದ್ಯಾರ್ಥಿನಿಯರ ಮೇಲು ನಿಗಾ ವಹಿಸಲಾಗಿದ್ದು, ಆತಂಕಪಡುವ ಅಗತ್ಯವಿಲ್ಲ ಎಂದು ಮೈಸೂರು ಜಿಲ್ಲಾ ಆರೋಗ್ಯ ಇಲಾಖೆ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ರಾಜ್ಯದ ವಿವರ: ರಾಜ್ಯದಲ್ಲಿ ಇಂದು 328 ಮಂದಿಗೆ ಕೊರೊನಾ ಸೋಂಕು ತಗುಲಿದ್ದು, 350 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಒಟ್ಟು ಸೋಂಕಿತರ ಸಂಖ್ಯೆ 9,42,846ಕ್ಕೆ ಏರಿಕೆಯಾಗಿದ್ದು, 9,24,654 ಮಂದಿ ಗುಣ ಮುಖರಾಗಿದ್ದಾರೆ. ಚಿಕಿತ್ಸೆ ಫಲಕಾರಿಯಾಗದೆ ಇಂದು 3 ಮಂದಿ ಸಾವನ್ನಪ್ಪಿದ್ದು, ಈವರೆಗೆ 12,239 ಮಂದಿ ಮೃತಪಟ್ಟಿದ್ದಾರೆ. 5,934 ಮಂದಿಯಲ್ಲಿ ಸೋಂಕು ಸಕ್ರಿಯವಾಗಿದೆ. ಬಳ್ಳಾರಿ 3, ಬೆಳಗಾವಿ 2, ಬೆಂಗಳೂರು ಗ್ರಾಮಾಂತರ 2, ಬೆಂಗಳೂರು ನಗರ 127, ಬೀದರ್ 2, ಚಾಮರಾಜನಗರ 3, ಚಿಕ್ಕಬಳ್ಳಾಪುರ 4, ಚಿಕ್ಕಮಗಳೂರು 2, ಚಿತ್ರದುರ್ಗ 13, ದಕ್ಷಿಣಕನ್ನಡ 40, ಧಾರವಾಡ 3, ಗದಗ 1, ಹಾಸನ 14, ಹಾವೇರಿ 3, ಕಲಬುರಗಿ 13, ಕೊಡಗು 1, ಕೋಲಾರ 11, ಕೊಪ್ಪಳ 1, ಮಂಡ್ಯ 6, ರಾಯಚೂರು 1, ಶಿವಮೊಗ್ಗ 5, ತುಮಕೂರು 8, ಉಡುಪಿ 8, ಉತ್ತರಕನ್ನಡ 2, ವಿಜಯಪುರ 5 ಪ್ರಕರಣ ವರದಿಯಾಗಿದೆ.

 

 

Translate »