ಮಹಿಳಾ ಪೊಲೀಸ್ ಕಾನ್‍ಸ್ಟೇಬಲ್ ಪ್ರಶಿಕ್ಷಣಾರ್ಥಿಗಳ ತರಬೇತಿ ಆರಂಭ
ಮೈಸೂರು

ಮಹಿಳಾ ಪೊಲೀಸ್ ಕಾನ್‍ಸ್ಟೇಬಲ್ ಪ್ರಶಿಕ್ಷಣಾರ್ಥಿಗಳ ತರಬೇತಿ ಆರಂಭ

February 10, 2021

ಮೈಸೂರು, ಫೆ.8(ಆರ್‍ಕೆ)- ಮೈಸೂರಿನ ಜ್ಯೋತಿನಗರದ ಪೊಲೀಸ್ ತರಬೇತಿ ಶಾಲೆಯಲ್ಲಿ 6ನೇ ತಂಡದ 244 ಮಹಿಳಾ ಪೊಲೀಸ್ ಕಾನ್‍ಸ್ಟೇಬಲ್ ಪ್ರಶಿಕ್ಷಣಾರ್ಥಿ ಗಳಿಗೆ ಬುನಾದಿ ತರಬೇತಿ ಸೋಮವಾರದಿಂದ ಆರಂಭವಾಯಿತು.

ದಕ್ಷಿಣ ವಲಯ ಐಜಿಪಿ ಪ್ರವೀಣ್ ಮಧುಕರ್ ಪವಾರ್ ಅವರು ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ನಂತರ ಪ್ರಶಿಕ್ಷಣಾರ್ಥಿಗಳನ್ನುದ್ದೇಶಿಸಿ ಮಾತ ನಾಡಿದ ಅವರು, ತರಬೇತಿ ಅವಧಿಯಲ್ಲಿ ಕಾನೂನು ವಿಷಯಗಳಾದ ಐಪಿಸಿ, ಸಿಆರ್‍ಪಿಸಿ ಬಗ್ಗೆ ಆಳವಾದ ಅಭ್ಯಾಸ ಮಾಡಬೇಕು ಎಂದರು.

ಹೊರಾಂಗಣ ತರಬೇತಿಯು ಕಷ್ಟ ಎನಿಸಿದರೂ ದೈಹಿಕ ಕ್ಷಮತೆಯನ್ನು ಹೆಚ್ಚಿಸಿ ಕೊಂಡು ಮಾನಸಿಕ ಸದೃಢತೆಯನ್ನೂ ಬೆಳೆಸಿಕೊಳ್ಳಬೇಕು ಹಾಗೂ ಅರ್ಹತೆ ಆಧಾರದಲ್ಲಿ ಕಾನ್‍ಸ್ಟೇಬಲ್ ಹುದ್ದೆ ಗಳಿಸಿರುವುದರಿಂದ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುವ ಮೂಲಕ ಪೊಲೀಸ್ ಇಲಾಖೆಯಲ್ಲಿ ಉತ್ತಮ ಸೇವೆ ಸಲ್ಲಿಸಬೇಕೆಂದೂ ನುಡಿದರು. ಪೊಲೀಸ್ ತರಬೇತಿ ಶಾಲೆಯ ಪ್ರಾಂಶುಪಾಲರಾದ ಡಾ.ಧರಣಿದೇವಿ ಮಾಲಗತ್ತಿ, ಡಿವೈಎಸ್‍ಪಿ ಪಿ.ಉಮೇಶ್ ಹಾಗೂ ಇತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

 

Translate »