ಮೈಸೂರು,ಮಾ.13(ಆರ್‍ಕೆ)- ಜನರಲ್ಲಿ ಭೀತಿ ಉಂಟು ಮಾಡಿರುವ ಕೋವಿಡ್-19 (ಕೊರೊನಾ ವೈರಸ್) ಹಿನ್ನೆಲೆಯಲ್ಲಿ ಸರ್ಕಾರಿ ಆಸ್ಪತ್ರೆ ಜೊತೆಗೆ ಖಾಸಗಿ ಆಸ್ಪತ್ರೆ ಗಳಲ್ಲೂ ಪ್ರತ್ಯೇಕ ವಾರ್ಡ್ (Isolation Ward) ಸೌಲಭ್ಯ ಕಲ್ಪಿಸುವಂತೆ ಜಿಲ್ಲಾದಿ üಕಾರಿ ಅಭಿರಾಂ ಜಿ. ಶಂಕರ್ ತಿಳಿಸಿದ್ದಾರೆ.
ಮೈಸೂರಿನ ತಮ್ಮ ಕಚೇರಿ ಸಭಾಂ ಗಣದಲ್ಲಿ ಖಾಸಗಿ ಆಸ್ಪತ್ರೆಗಳ ಮುಖ್ಯ ಸ್ಥರುಗಳೊಂದಿಗೆ ಸಭೆ ನಡೆಸಿದ ಅವರು, ಎಲ್ಲೆಡೆ ಕೋವಿಡ್-19 ರೋಗದ ವದಂತಿ ಹೆಚ್ಚುತ್ತಿದ್ದು, ಸರ್ಕಾರ ಎಲ್ಲಾ ಅಗತ್ಯ ಮುಂಜಾ ಗ್ರತಾ ಕ್ರಮ ಕೈಗೊಂಡಿದ್ದು, ಮೈಸೂರಿ ನಲ್ಲೂ ಕೆ.ಆರ್. ಆಸ್ಪತ್ರೆ, ಸಾಂಕ್ರಾಮಿಕ ರೋಗ ಗಳ ಆಸ್ಪತ್ರೆ, ಜೆಎಸ್‍ಎಸ್, ಅಪೊಲೋ ಬಿಜಿಎಸ್ ಆಸ್ಪತ್ರೆಗಳಲ್ಲಿ ಪ್ರತ್ಯೇಕ ಐಸೋ ಲೇಷನ್ ವಾರ್ಡ್‍ಗಳನ್ನು (ವೆಂಟಿಲೇಟರ್ ನೊಂದಿಗೆ ತಲಾ 10 ಹಾಸಿಗೆ) ತೆರೆಯ ಲಾಗಿದೆ. ಆದರೆ, ಈವರೆಗೆ ಒಬ್ಬ ರೋಗಿಯೂ ದಾಖಲಾಗಿಲ್ಲ ಎಂದರು.
ಪ್ರತೀದಿನ ಏರ್‍ಪೋರ್ಟ್, ಬಸ್ ಸ್ಟ್ಯಾಂಡ್, ರೈಲು ನಿಲ್ದಾಣ, ಅರಮನೆ, ಚಾಮುಂಡಿ ಬೆಟ್ಟ ಸೇರಿದಂತೆ ಹೊರಗಿನಿಂದ ಅಧಿಕ ಜನರು ಬರುವ ಸ್ಥಳಗಳಲ್ಲಿ ಆರೋಗ್ಯ ತಪಾ ಸಣೆ ನಡೆಸುತ್ತಿದ್ದು, ಶಂಕಿತ ಕೊರೊನಾ ವೈರಸ್ ಶಂಕೆ ಕಂಡು ಬಂದಲ್ಲಿ ಅಂತಹವ ರನ್ನು ಪ್ರತ್ಯೇಕ ವಾರ್ಡ್‍ಗಳಲ್ಲಿ ಅಬ್ಸರ್‍ವೇಷನ್ ನಲ್ಲಿಡಲು ಐಸೋಲೇಷನ್ ವಾರ್ಡ್‍ಗಳನ್ನು ತೆರೆದು ಮೀಸಲಿರಿಸಿಕೊಳ್ಳುವುದೊಳಿತು ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ರಾಜ್ಯ ಮುಖ್ಯ ಕಾರ್ಯದರ್ಶಿ ತ.ಮ. ವಿಜಯಭಾಸ್ಕರ್ ಅವರು ಗುರುವಾರ ವಿಡಿಯೋ ಕಾನ್ಫರೆನ್ಸ್ ನಡೆಸಿ ಕೊರೊನಾ ವೈರಸ್ ರೋಗ ತಡೆಗೆ ಕೈಗೊಳ್ಳಬೇಕಾದ ಕ್ರಮಗಳು ಹಾಗೂ ಜಾಗೃತಿ ಮೂಡಿಸುವ ಸಂಬಂಧ ನೀಡಿದ್ದ ನಿರ್ದೇಶನಗಳನ್ನು ಪಾಲಿಸಲು ಅಭಿರಾಂ ಜಿ. ಶಂಕರ್ ಇಂದು ವಿಮಾನ ನಿಲ್ದಾಣ, ಅರಮನೆ ಮಂಡಳಿ, ಮುಜರಾಯಿ, ಪಶುಸಂಗೋಪನಾ, ಪ್ರವಾ ಸೋದ್ಯಮ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಶಿಕ್ಷಣ ಇಲಾಖೆ, ನಗರಪಾಲಿಕೆ ಅಧಿಕಾರಿಗಳು ಹಾಗೂ ಖಾಸಗಿ ಆಸ್ಪತ್ರೆಗಳ ಮುಖ್ಯಸ್ಥ ರೊಂದಿಗೆ ಸಭೆ ನಡೆಸಿ ಕೈಗೊಳ್ಳಬೇಕಾದ ಕ್ರಮದ ಬಗ್ಗೆ ಸೂಚನೆಗಳನ್ನು ನೀಡಿದರು.
ಜಿಪಂ ಸಿಇಓ ಕೆ.ಜ್ಯೋತಿ, ಪಾಲಿಕೆ ಆಯುಕ್ತ ಗುರುದತ್ ಹೆಗ್ಡೆ, ಮೈಸೂರು ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ನಿರ್ದೇಶಕ ಡಾ.ಸಿ.ಪಿ.ನಂಜರಾಜ್, ಕೆ.ಆರ್. ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಡಾ.ಎನ್. ನಂಜುಂಡಸ್ವಾಮಿ, ಸ್ಥಾನಿಕ ವೈದ್ಯಾಧಿಕಾರಿ ಡಾ. ರಾಜೇಶ್, ಡಿಡಿಪಿಐ ಡಾ. ಪಾಂಡು ರಂಗ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.